• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘ರಾಷ್ಟ್ರೀಯ ರಕ್ಷಣಾ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ’ ವಾದ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೇಂದ್ರ ಸರ್ಕಾರಕ್ಕೆ ಮುಖಭಂಗ!

ಕರ್ಣ by ಕರ್ಣ
September 23, 2021
in ದೇಶ
0
‘ರಾಷ್ಟ್ರೀಯ ರಕ್ಷಣಾ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ’ ವಾದ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೇಂದ್ರ ಸರ್ಕಾರಕ್ಕೆ ಮುಖಭಂಗ!
Share on WhatsAppShare on FacebookShare on Telegram

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗಳಿಗೆ ಈ ವರ್ಷ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಆದೇಶವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (NDA) ಪ್ರವೇಶಕ್ಕಾಗಿ ಮಹಿಳಾ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆಯನ್ನು ಅನುಮತಿಸುವ ಅಧಿಸೂಚನೆಯನ್ನು ಮುಂದಿನ ವರ್ಷ ಅಂದರೆ ಮೇ 2022 ರಲ್ಲಿ ಹೊರಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಎನ್‌ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ತ್ವರಿತಗತಿಯಲ್ಲಿ ಪಠ್ಯಕ್ರಮ ರೂಪಿಸಲು ರಕ್ಷಣಾ ಪಡೆಯಲ್ಲಿ ಅಧ್ಯಯನ ಸಮಿತಿಯೊಂದನ್ನು ರಚಿಸಲಾಗಿದ್ದು ಮಹಿಳಾ ಅಭ್ಯರ್ಥಿಗಳ ತರಬೇತಿಗಾಗಿ ಭವಿಷ್ಯದ ಯೋಜನೆ ರೂಪಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ಆದರೆ ಅಭ್ಯರ್ಥಿಗಳಿಗೆ ಈಗಾಗಲೇ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡುವ ತನ್ನ ಹಿಂದಿನ ಆದೇಶ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪರೀಕ್ಷೆಗೆ ಇಚ್ಛಿಸುವ ಅಭ್ಯರ್ಥಿಗಳ ಆಕಾಂಕ್ಷೆಗಳನ್ನು ಗಮನಿಸುವಾಗ ಕೇಂದ್ರದವಾದ ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಗಡಿ ಮತ್ತು ದೇಶದ ಒಳಭಾಗದಲ್ಲಿ ಸಶಸ್ತ್ರ ಪಡೆಗಳು ತುಂಬಾ ತುರ್ತು ಸ್ಥಿತಿಯಲ್ಲಿರುತ್ತವೆ. ಅಂತಹ ತರಬೇತಿ ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ನಮಗೆ ಖಚಿತವಾಗಿದೆ. ಆದ್ದರಿಂದ ನಮ್ಮಿಂದ ನೀಡಲಾದ ಆದೇಶವನ್ನು ನಾವು ತೆರವುಗೊಳಿಸುವುದಿಲ್ಲ. ನಾವು ಪ್ರಕರಣವನ್ನು ಬಾಕಿ ಉಳಿಸುತ್ತಿದ್ದು ಇದರಿಂದ ಸಂದರ್ಭಗಳು ಉದ್ಭವಿಸಿದಂತೆ ನಿರ್ದೇಶನ ನೀಡಲು ಸಾಧ್ಯವಾಗುತ್ತದೆ ಎಂದೂ ಪೀಠ ತಿಳಿಸಿದೆ.

ಅಗತ್ಯ ಬಿದ್ದರೆ ಮುಂದಿನ ನಿರ್ದೇಶನಗಳಿಗಾಗಿ ಜನವರಿ 2022ರಲ್ಲಿ ವಿಚಾರಣೆ ನಡೆಸಲಾಗುವುದು. ಪ್ರಸಕ್ತ ಸಾಲಿನ ಪರೀಕ್ಷೆ ನವೆಂಬರ್‌ ಮಧ್ಯ ಭಾಗದಲ್ಲಿ ನಡೆಯಲಿದ್ದು ಫಲಿತಾಂಶ ಪ್ರಕಟಣೆಗೆ ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಮುಂದಿನ ವರ್ಷ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಬದಲು, ಕೇಂದ್ರ ಸರ್ಕಾರ ಮಹಿಳಾ ಅಭ್ಯರ್ಥಿಗಳಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಡೆ ಗಮ‌ನ ಕೊಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.  

ಪರೀಕ್ಷೆಯನ್ನು ತೆಗೆದುಕೊಳ್ಳಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ನಾವು ಯಾವ ಉತ್ತರವನ್ನು ನೀಡುವುದು.? ಆದೇಶವನ್ನು ತೆರವುಗೊಳಿಸುವಂತೆ ಮತ್ತೆ ಮನವಿಮಾಡಿಕೊಳ್ಳ ಕೂಡದು. ನೀವು ಕೆಲಸ ಮುಂದುವರಿಸಿ. ಫಲಿತಾಂಶವನ್ನು ನೋಡೋಣ. ಜೊತೆಗೆ ಎಷ್ಟು ಮಹಿಳೆಯರು ಪರೀಕ್ಷೆ ಬರೆಯುತ್ತಾರೆ ಎಂಬುದನ್ನು ನೋಡೋಣ ಎಂದು ಸುಪ್ರೀಂಕೋರ್ಟ್‌ ಕೇಂದ್ರದ ಕಿವಿ‌ ಹಿಂಡಿದೆ. 

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಚಿನ್ಮಯ್ ಪ್ರದೀಪ್ ಶರ್ಮಾ ಮತ್ತು ಅಡ್ವೋಕೇಟ್ ಆನ್ ರೆಕಾರ್ಡ್ ಮೋಹಿತ್ ಪಾಲ್ ಮತ್ತು ನ್ಯಾಯವಾದಿ ಸುನೈನಾ ಫುಲ್ ವಾದಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಹಾಜರಾದರು. ಕಳೆದ ತಿಂಗಳು ಮಧ್ಯಂತರ ಆದೇಶವೊಂದನ್ನು ಜಾರಿಗೊಳಿಸಿದ್ದ ಸುಪ್ರೀಂಕೋರ್ಟ್, ಸೆಪ್ಟೆಂಬರ್ 5ರಂದು ನಡೆದ ಈ ವರ್ಷದ ಎನ್‌ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ಹಾಜರಾಗಲು ಅವಕಾಶ ನೀಡಿತ್ತು.

 
Tags: Armed Forces TrainedBJPCovid 19Emergenciesnad examsupreme courtWomenನರೇಂದ್ರ ಮೋದಿಬಿಜೆಪಿರಾಷ್ಟ್ರೀಯ ರಕ್ಷಣಾ ಪರೀಕ್ಷೆ
Previous Post

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಹಸ್ತದ ಸದ್ದು; BSY ಹೇಳಿದ್ದೇನು ಗೊತ್ತೇ?

Next Post

ರಾಹುಲ್, ಪ್ರಿಯಾಂಕ ಅನನುಭವಿಗಳು; ಸಿಧು ಅಪಾಯಕಾರಿ- ಮಾಜಿ ಸಿಎಂ ಅಮರಿಂದರ್ ಸಿಂಗ್

Related Posts

ಗ್ರಾಹಕರೇ ಎಚ್ಚರ..! ದೆಹಲಿಯ ಓಖ್ಲಾ ಸಬ್ಜಿ ಮಂಡಿಯಲ್ಲಿ ಬರೋಬ್ಬರಿ 508 KG ನಕಲಿ ಪನೀರ್‌ ಪತ್ತೆ
Top Story

ಗ್ರಾಹಕರೇ ಎಚ್ಚರ..! ದೆಹಲಿಯ ಓಖ್ಲಾ ಸಬ್ಜಿ ಮಂಡಿಯಲ್ಲಿ ಬರೋಬ್ಬರಿ 508 KG ನಕಲಿ ಪನೀರ್‌ ಪತ್ತೆ

by ಪ್ರತಿಧ್ವನಿ
August 25, 2026
0

ನವದೆಹಲಿ: ರಕ್ಷಾ ಬಂಧನ ಸೇರಿದಂತೆ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ನಗರದ ಮುಖ್ಯ ಮಾರುಕಟ್ಟೆಗಳಲ್ಲಿ ಆಹಾರ ಗುಣಮಟ್ಟದ ಪರೀಕ್ಷೆ ನಡೆಸಿದೆ. ಈ...

Read moreDetails
ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ ಕೇಸ್‌: ₹30,000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ ಪತ್ತೆ..!

ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ ಕೇಸ್‌: ₹30,000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ ಪತ್ತೆ..!

August 24, 2026
ಒಂದೇ ಪಕ್ಷಕ್ಕಾಗಿ 5 ದಶಕಗಳ ನಿಷ್ಠಾವಂತ ಸೇವೆ: ಕೆ.ಜೆ ಜಾರ್ಜ್ ರಾಜಕೀಯ ಜೀವನದ ಸಿಂಹಾವಲೋಕನ

ಒಂದೇ ಪಕ್ಷಕ್ಕಾಗಿ 5 ದಶಕಗಳ ನಿಷ್ಠಾವಂತ ಸೇವೆ: ಕೆ.ಜೆ ಜಾರ್ಜ್ ರಾಜಕೀಯ ಜೀವನದ ಸಿಂಹಾವಲೋಕನ

August 24, 2026
ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ತಮಿಳುನಾಡು ಸರ್ಕಾರದ ಬ್ರೇಕ್?

ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ತಮಿಳುನಾಡು ಸರ್ಕಾರದ ಬ್ರೇಕ್?

August 24, 2026
ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ

ಕಾವೇರಿ ನೀರು ಹಂಚಿಕೆ ವಿವಾದ: ಮತ್ತೆ ವಿಚಾರಣೆ ಮುಂದೂಡಿಕೆ..!

August 24, 2026
Next Post
ರಾಹುಲ್, ಪ್ರಿಯಾಂಕ ಅನನುಭವಿಗಳು; ಸಿಧು ಅಪಾಯಕಾರಿ- ಮಾಜಿ ಸಿಎಂ ಅಮರಿಂದರ್ ಸಿಂಗ್

ರಾಹುಲ್, ಪ್ರಿಯಾಂಕ ಅನನುಭವಿಗಳು; ಸಿಧು ಅಪಾಯಕಾರಿ- ಮಾಜಿ ಸಿಎಂ ಅಮರಿಂದರ್ ಸಿಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada