ಮೃತ ಕಾರ್ಮಿಕನ ಕುಟುಂಬದ ಕಷ್ಟಕ್ಕೆ ಹೆಗಲಾದ ಸಚಿವ ಲಾಡ್
ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನ ಮನೆಗೆ ತೆರಳಿ ಸಾಂತ್ವನ ಹೇಳಿದ ಕಾರ್ಮಿಕ ಸಚಿವರು ಮೃತ ಕಾರ್ಮಿಕನ ಕುಟುಂಬದ ಕಷ್ಟಕ್ಕೆ ಹೆಗಲಾದ ಸಚಿವ ಲಾಡ್ ಹುಬ್ಬಳ್ಳಿ, ಡಿಸೆಂಬರ್ 07: "ಕಷ್ಟ ...
Read moreDetailsಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನ ಮನೆಗೆ ತೆರಳಿ ಸಾಂತ್ವನ ಹೇಳಿದ ಕಾರ್ಮಿಕ ಸಚಿವರು ಮೃತ ಕಾರ್ಮಿಕನ ಕುಟುಂಬದ ಕಷ್ಟಕ್ಕೆ ಹೆಗಲಾದ ಸಚಿವ ಲಾಡ್ ಹುಬ್ಬಳ್ಳಿ, ಡಿಸೆಂಬರ್ 07: "ಕಷ್ಟ ...
Read moreDetailsಕರೋನಾದಂತಹ ಸಂಕಷ್ಟದ ಸಮಯದಲ್ಲಿ ವೈದ್ಯರು ಹಾಗೂ ದಾದಿಯರು ಯಾವ ರೀತಿ ಯೋಧರಂತೆ ಸೇವೆ ಸಲ್ಲಿಸಿದರೋ, ಅದೇ ರೀತಿ ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಕೂಡಾ ಲಾಕ್ಡೌನ್ ಹಾಗೂ ಕರೋನಾ ಭಯದ ನಡುವೆಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆಲ್ಲಾ ಕರೋನಾ ವಾರಿಯರ್ಸ್ ಎಂಬ ‘ಬಿರುದು’ ಬಿಟ್ಟರೆ ಬೇರೆ ಯಾವ ರೀತಿಯ ಸವಲತ್ತುಗಳು ಕೂಡಾ ದಕ್ಕಲಿಲ್ಲ. ಇಂದಿಗೂ ದೇಶದ ಮೂಲೆ ಮೂಲೆಗಳಲ್ಲಿ ತಮ್ಮ ಹಕ್ಕಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಮಾತ್ರ ಎಂದಿನಂತೆ ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿ ಕುಳಿತಿದೆ. ರೈತ ಆಂದೋಲನದ ಕೇಂದ್ರ ಬಿಂದುವಾದ ದೆಹಲಿಯಲ್ಲಿ ಮಂಗಳವಾರದಂದು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಗೌರವಧನ ಹೆಚ್ಚಳ, ಬಾಕಿ ಉಳಿದಿರುವ ಗೌರವಧನ ಬಿಡುಗಡೆ ಸೇರಿದಂತೆ ಹಲವು ದೀರ್ಘ ಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹೇರುವ ಪ್ರಯತ್ನ ಮಾಡಿದ್ದರು. ಕರ್ನಾಟಕದಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಹಾಗೂ ಒಕ್ಕೂಟಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರು ಒಕ್ಕೊರಲಿನಿಂದ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಗೌರವ’ದಿಂದ ಸಲ್ಲಬೇಕಾದ ಗೌರವಧನವನ್ನು ಹೆಚ್ಚಿಸುತ್ತ ಸರ್ಕಾರ ಗಮನವೇ ನೀಡುತ್ತಿಲ್ಲ. ಪ್ರಧಾನಿ ಮೋದಿಯವರು ಸೆಪ್ಟೆಂಬರ್ 11,2018ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆಸಿದ ಆನ್ಲೈನ್ ಸಂವಾದದಲ್ಲಿ ಶೀಘ್ರವೇ ಗೌರವಧನ ಹೆಚ್ಚಿಸುವುದಾಗಿ ಹೇಳಿದ್ದರು. ಈ ಭರವಸೆಯೂ ಇತರ ಭರವಸೆಗಳಂತೆ ಪೊಳ್ಳಾಗಿಯೇ ಉಳಿದಿದೆ. ಭರವಸೆ ನೀಡಿ ಮೂರು ವರ್ಷಗಳು ಕಳೆದರೂ, ಇನ್ನೂ ಪರಿಷ್ಕೃತ ವೇತನ ದರ ನಿಗದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. “ಯಾರಿಗೆ ರೂ. 3,000 ವೇತನ ಲಭಿಸುತ್ತಿದೆಯೋ ಅವರಿಗೆ ರೂ. 4,500 ಹಾಗೂ ಯಾರಿಗೆ ರೂ. 2,200 ಲಭಿಸುತ್ತಿದೆಯೋ ಅವರಿಗೆ ರೂ.3,500ದಷ್ಟು ವೇತನ ಹೆಚ್ಚಳ ಮಾಡಲಾಗುವುದು. ಇದರಂತೆ ಅಂಗನವಾಡಿ ಸಹಾಯಕಿಯರಿಗೂ ಶೇ.50ರಷ್ಟು ವೇತನ ಹೆಚ್ಚಳ ಮಾಡಲಾಗುವುದು,” ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಪ್ರಧಾನಿಯವರ ಭರವಸೆಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿರುವ ದೆಹಲಿ ಅಂಗನವಾಡಿ ಕಾರ್ಯರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯ ಸದಸ್ಯೆ ವೃಷಾಲಿ ಅವರು, ಕೆಲವು ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ಗೌರವಧನವನ್ನು ‘ದಾಖಲೆ’ಗಳಲ್ಲಿ ಹೆಚ್ಚಿಸಲಾಗಿದೆ. ಆದರೆ, ಆ ಹಣ ಇನ್ನೂ ಕಾರ್ಯಕರ್ತೆಯರ ಕೈ ಸೇರಿಲ್ಲ. ಆಗಸ್ಟ್ 2021ರ ಹೊತ್ತಿಗೆ, ಅಂಗನವಾಡಿ ಕಾರ್ಯಕರ್ತೆಯರ ರೂ.51,000 ಹಾಗೂ ಸಹಾಯಕಿಯರ ರೂ.25,500 ಬಾಕಿ ಹಣ ಇನ್ನೂ ಪಾವತಿಯಾಗಿಲ್ಲ, ಎಂದಿದ್ದಾರೆ. ಕಾರ್ಯಕರ್ತೆಯರ ಇನ್ನೊಂದು ಪ್ರಮುಖ ಬೇಡಿಕೆ ಏನೆಂದರೆ, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ನೌಕರರೆಂದು ಪರಿಗಣಿಸಬೇಕು. ಎಲ್ಲಾ ಕಾರ್ಯಕರ್ತೆಯರಿಗೂ ಹಾಗೂ ಸಹಾಯಕಿಯರಿಗೂ ಇಎಸ್ಐ, ಪಿಎಫ್ ಸೇರಿದಂತೆ ಪಿಂಚಣಿ ಸೌಲಭ್ಯವನ್ನು ಕೂಡಾ ನೀಡಬೇಕು. ಈ ವಿಚಾರವಾಗಿ ಕರ್ನಾಟಕದಲ್ಲಿಯೂ ಕಳೆದ ಹಲವು ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. 2016ರ ನಂತರ ನಿವೃತ್ತರಾದ ಕಾರ್ಯಕರ್ತೆಯರಿಗೆ ಇನ್ನೂ ಎನ್ ಪಿ ಎಸ್ ಹಾಗೂ ಪಿಎಫ್ ನೀಡಲಾಗಿಲ್ಲ. ಹದಿನೈದು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾರ್ಯಕರ್ತೆಯರ ಗೌರವಧನ ಇನ್ನೂ ಹತ್ತು ಸಾವಿರ ಮಾತ್ರವೇ ಇದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಸರ್ಕಾರದ ಅವಗಣನೆಗೆ ಒಳಗಾಗುತ್ತಿರುವ ಅಂಗನವಾಡಿ ನೌಕರರ ಸಂಕಷ್ಟಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕಾಗಿದೆ. ಕರೋನಾ ಸಂಕಷ್ಟದ ವೇಳೆ ಸೇವೆ ಸಲ್ಲಿಸಿ, ಸೋಂಕಿನಿಂದ ಮೃತಪಟ್ಟ ಕಾರ್ಯಕರ್ತೆಯರ ಕುಟುಂಬದ ನೆರವಿಗೆ ಸರ್ಕಾರ ಬರಬೇಕಿದೆ. ಕೇವಲ ಬಾಯಿ ಮಾತಿನ ಚಪಲಕ್ಕೆ ಹಾಗೂ ಪ್ರಚಾರದ ತೆವಲಿಗೆ ಬಿದ್ದು ಅಂಗನವಾಡಿ ಕಾರ್ಯಕರ್ತೆಯನ್ನು ಕರೋನಾ ವಾರಿಯರ್ಸ್ ಎಂದು ಹೊಗಳುವ ಬದಲು, ಅವರ ಪಾಲಿನ ಹಕ್ಕುಗಳನ್ನು ಅವರಿಗೆ ನೀಡಿದ್ದಲ್ಲಿ, ಅದು ನಿಜವಾಗಿಯೂ ಅಂಗನವಾಡಿ ಕಾರ್ಕರ್ತೆಯರಿಗೆ ನೀಡುವ ಗೌರವವಾಗುವುದು.
Read moreDetailsಆಶಾ ಕಾರ್ಯಕರ್ತೆಯರ ಬಗ್ಗೆ ಸರಕಾರದ ನಿರ್ಲಕ್ಷ್ಯ ಇನ್ನೆಷ್ಟು ಕಾಲ?
Read moreDetailsಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಉತ್ಸಾಹ ಸರ್ಕಾರಕ್ಕೆ ಇಲ್ಲವೇ?
Read moreDetailsಮುಖ್ಯಮಂತ್ರಿಗಳಿಂದ ಶ್ಲಾಘನೆ: ಪ್ಲಾಸ್ಟಿಕ್ ಮುಕ್ತ ನೂತನ ಯೋಜನೆ
Read moreDetails© 2024 www.pratidhvani.com - Analytical News, Opinions, Investigative Stories and Videos in Kannada