ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿಗೆ ನಯಾ ಹುಮ್ಮಸ್ಸು ನೀಡಿದೆ. ಅದಾಗಿಯೂ 2018ಕ್ಕೆ ಹೋಲಿಸಿಕೊಂಡರೆ 2022ರಲ್ಲಿ ಭಾಜಪ ಪ್ರದರ್ಶನ ನೀರಸವಾಗಿದೆ. ಈ ಫಲಿತಾಂಶ ಕರ್ನಾಟಕದ ಮೇಲೂ ಪ್ರಭಾವ ಬೀರಲಿದೆ. ಎಲ್ಲಾ ರಾಜ್ಯಗಳ ರಾಜಕೀಯ ನೆಲೆಗಟ್ಟು ಬೇರೆಯದ್ದೇ ಆಗಿದ್ದರೂ ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಹೆಚ್ಚು ಕಮ್ಮಿ ಏಕರೂಪವಾದದ್ದು. ಹೀಗಾಗಿ ಈಗೀಂದೀಗಲೇ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಹಿರಂಗವಾಗಿಯೇ ತಯಾರಿಗಳು ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಜನತಾ ದಳ ಮುಂದಿನ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಮತ್ತೆ ಈಗಲ್ಟನ್ ರೆಸಾರ್ಟ್ ಪ್ರಕರಣ ಎತ್ತಿಟ್ಟು ಹರಿಹಾಯ್ದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ತಮ್ಮ ಚೊಚ್ಚಲ ಆಯವ್ಯಯಕ್ಕೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದನ್ನು ಕೇಂದ್ರವಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಬಿಟ್ಟು ಅದಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆಗೆ ಮಾತಿನ ಏಣಿ ಹತ್ತಿಸಿದರು. ಈ ವೇಳೆ ಸಿದ್ದರಾಮಯ್ಯನನ್ನು ಹೆಣೆಯಲು ಕುಮಾರಸ್ವಾಮಿ ಈಗಲ್ಟನ್ ರೆಸಾರ್ಟ್ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಲ್ಲದೆ ಸಿದ್ದರಾಮಯ್ಯರಿಂದ ತಪರಾಕಿ ಹಾಕಿಸಿಕೊಂಡರು. ಅಸಲಿಗೆ ಏನಿದು ಈಗಲ್ಟನ್ ರೆಸಾರ್ಟ್..? ಈ ಈಗಲ್ಟನ್ ರೆಸಾರ್ಟ್ ಯಾಕಿಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ..? ಕುಮಾರಸ್ವಾಮಿ ಅವರೇಕೆ ಬಜೆಟ್ ಅಧಿವೇಶನದಲ್ಲಿ ಏಕಾಏಕಿ ಈಗಲ್ಟನ್ ರೆಸಾರ್ಟ್ ಹೆಸರು ಪ್ರಸ್ತಾಪಿಸಿದರು..? ಹೀಗೆ ಸದ್ಯ ರಾಜ್ಯ ರಾಜಕಾರಣದಲ್ಲಿ ಈಗಲ್ಟನ್ ರೆಸಾರ್ಟ್ ಪ್ರಕರಣ ಮತ್ತೆ ಚರ್ಚೆಯ ಬಿಂದುವಾಗಿದೆ. 2002ರಲ್ಲಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಎಂಬ ಖಾಸಗಿ ಸಂಸ್ಥೆ ಈಗಲ್ಟನ್ ರೆಸಾರ್ಟ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿತ್ತು. ಸುಮಾರು ...
Read moreDetails