
ಟಿ20 ವಿಶ್ವ ಕಪ್ ಆರಂಭವಾಗಿ ಒಂದು ವಾರ ಕಳೆದಿದೆ. ಎಲ್ಲಾ ಪಂದ್ಯಗಳು ರೋಚಕವಾಗಿದೆ. ಭಾನುವಾರ ಹೈ ವೋಲ್ಟೇಜ್ ಪಂದ್ಯಕ್ಕೆ ಭಾನುವಾರ ವೇದಿಕೆ ರೆಡಿಯಾಗಿದೆ.ಜೂನ್ 9 ಭಾನುವಾರ, ಅಮೆರಿಕದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ(Pakistan) ಮತ್ತು ಭಾರತ (team India) ಮುಖಾಮುಖಿಯಾಗಲಿವೆ.

ರೋಹಿತ್ ಶರ್ಮಾ(Rohitsharma) ಮತ್ತು ಬಾಬರ್ ಅಜಮ್ ತಂಡಗಳ ನಡುವಿನ ಈ ಮಹಾ ಘರ್ಷಣೆಯನ್ನು ವೀಕ್ಷಿಸಲು ಇಡೀ ಜಗತ್ತು ಸಿದ್ಧವಾಗಿದೆ. ರಾತ್ರಿ 8:00 ರಿಂದ ಈ ಪಂದ್ಯ ಆರಂಭವಾಗಲಿದೆ.ಜೂನ್ 5ರಂದು ನಡೆದ ಪಂದ್ಯಾವಳಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡವು ಅದ್ಭುತ ಫಾರ್ಮ್‌ನಲ್ಲಿದೆ.ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋತು ಒತ್ತಡದಲ್ಲಿದೆ.










