ಪ್ರಮುಖ ಪಂದ್ಯಗಳಲ್ಲಿ ಎಡವುತ್ತಿರುವ ಕೆಎಲ್ ರಾಹುಲ್ ಬದಲು ಎಡಗೈ ಬ್ಯಾಟ್ಸ್ ಮನ್ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧ ಟ-20 ವಿಶ್ವಕಪ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಅಭ್ಯಾಸ ಪಂದ್ಯಗಳಲ್ಲಿ ಮಿಂಚು ಹರಿಸಿದ್ದ ಕೆಎಲ್ ರಾಹುಲ್, ಟಿ-20 ವಿಶ್ವಕಪ್ ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ 4 ಮತ್ತು ನೆದರ್ಲೆಂಡ್ ವಿರುದ್ಧ 9 ರನ್ ಗಳಿಸಿ ವಿಫಲರಾಗಿದ್ದರು.
ಕೆಎಲ್ ರಾಹುಲ್ ದೊಡ್ಡ ಮೊತ್ತ ಗಳಿಸುವ ಮೂಲಕ ತಂಡಕ್ಕೆ ಅತ್ಯಗತ್ಯವಾದ ಉತ್ತಮ ಆರಂಭ ನೀಡದೇ ಇರುವುದು ಒಂದು ಕಡೆ ಆದರೆ, ಒಂಟಿ ರನ್ ಗಳ ಮೂಲಕ ಎದುರಾಳಿಗೆ ಜೊತೆಯಾಟ ನಿಭಾಯಿಸಲು ವಿಫಲರಾಗುತ್ತಿದ್ದಾರೆ.

ರಾಹುಲ್ ವೈಫಲ್ಯದ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ತಂಡ ಚಿಂತನೆ ನಡೆಸಿದೆ. ಪಂತ್ ಫಾರ್ಮ್ ಮತ್ತು ಎಡಗೈ ಬ್ಯಾಟ್ಸ್ ಮನ್ ಹೆಚ್ಚುವರಿ ಲಭಿಸುವ ಕುರಿತು ತಂಡ ಗಮನ ಹರಿಸಿದೆ.
ಮತ್ತೊಂದೆಡೆ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಆಡಿಸಿದರೆ ಫಿನಿಷರ್ ಪಾತ್ರ ನಿಭಾಯಿಸಬೇಕಾಗುತ್ತದೆ. ಅಲ್ಲದೇ ಇಬ್ಬರು ವಿಕೆಟ್ ಕೀಪರ್ ಗಳನ್ನು ಆಡಿಸಬೇಕೇ ಅಥವಾ ಅಕ್ಸರ್ ಪಟೇಲ್ ಬದಲು ಕಣಕ್ಕಿಳಿಸುವುದೇ ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ.
ರಿಷಭ್ ಪಂತ್ ಅವರನ್ನು ಕಣಕ್ಕಿಳಿಸುವ ಬಗ್ಗೆ ತಂಡ ಗಂಭೀರ ಚಿಂತನೆ ನಡೆಸಿದೆ. ಕೊಹ್ಲಿ, ಸೂರ್ಯಕುಮಾರ್ ಹೊರತುಪಡಿಸಿ ಉಳಿದವರಿಂದ ಇನ್ನೂ ನಿರೀಕ್ಷಿತ ರನ್ ಬರದೇ ಇರುವುದು ತಂಡದ ಮುಂದಿರುವ ಸವಾಲಾಗಿದೆ.






