• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

ಪ್ರತಿಧ್ವನಿ by ಪ್ರತಿಧ್ವನಿ
May 7, 2026
in ಕ್ರೀಡೆ
0
“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!
Share on WhatsAppShare on FacebookShare on Telegram

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಹಾಗೂ ಪ್ಲೇಆಫ್ ಪಂದ್ಯಗಳು ದಿಢೀರ್ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿರುವುದು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದು, ಇದೀಗ ಇದರ ಹಿಂದೆ ರಾಜಕೀಯ ಒತ್ತಡ ಹಾಗೂ “ವಿವಿಐಪಿ ಟಿಕೆಟ್ ವ್ಯಾಮೋಹ” ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ADVERTISEMENT
TVK MLA Suni Anand :Pratidhvani ನ್ಯೂಸ್‌ ಜೊತೆ ಗೆಲುವಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ TVK ಶಾಸಕ. #tvkvijay

ಈ ವಿವಾದದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಟಿಕೆಟ್ ಬೇಡಿಕೆ ಮತ್ತು ಪಂದ್ಯ ಸ್ಥಳಾಂತರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಇದು ಸಂಪೂರ್ಣ ಸುಳ್ಳು. ಬೇರೆ ಕ್ರೀಡಾಂಗಣಗಳಲ್ಲಿ ಇನ್ನೂ ಹೆಚ್ಚು ಟಿಕೆಟ್ ನೀಡುತ್ತಾರೆ. ದೊಡ್ಡ ಕ್ರೀಡಾಂಗಣ, ಹೆಚ್ಚು ಜನ ಸೇರಬಹುದು ಎಂಬ ಕಾರಣಕ್ಕೆ ಪಂದ್ಯ ಸ್ಥಳಾಂತರ ಮಾಡಿರಬಹುದು. ಟಿಕೆಟ್ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಬಿಸಿಸಿಐ ಅಧಿಕೃತವಾಗಿ ಹೇಳಿಕೆ ನೀಡಲಿ, ನಂತರ ನಾನು ಉತ್ತರಿಸುತ್ತೇನೆ” ಎಂದರು.

Siddaramaiah : ಸ್ಟಾಲಿನ್ ಸೋತಿದ್ದು ಹೆಂಗೆ ಅಂತ ಗೊತ್ತಾಗ್ತಿಲ್ಲಾ..!  #pratidhvani

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳನ್ನು ಸ್ಥಳಾಂತರಿಸಿರುವ ಬಿಸಿಸಿಐ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಪಂದ್ಯ ಆಯೋಜನೆಗೆ ಸಂಬಂಧಿಸಿದ ಸಿದ್ಧತೆಗಳ ವರದಿಯನ್ನು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಬಿಸಿಸಿಐಗೆ ಸಲ್ಲಿಸಿದ್ದರು.

ಆದರೆ ಕೆಎಸ್‌ಸಿಎ ಮನವಿಯನ್ನು ಲೆಕ್ಕಿಸದೇ ಬಿಸಿಸಿಐ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಂಸ್ಥೆ ಬೇಸರ ಹೊರಹಾಕಿದೆ.

Siddaramaiah : ಸ್ಟಾಲಿನ್ ಸೋತಿದ್ದು ಹೆಂಗೆ ಅಂತ ಗೊತ್ತಾಗ್ತಿಲ್ಲಾ..!  #pratidhvani

ಇತ್ತ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಈ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಸಕರ ವಿವಿಐಪಿ ಟಿಕೆಟ್ ವ್ಯಾಮೋಹದಿಂದಲೇ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿವೆ” ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕ್ರಿಕೆಟ್ ಸ್ಟೇಡಿಯಂ ಇರುವುದು ಅಭಿಮಾನಿಗಳಿಗಾಗಿ, ಉಚಿತ ಟಿಕೆಟ್‌ಗಾಗಿ ಅಲ್ಲ. ಬಿಸಿಸಿಐ ತೆಗೆದುಕೊಂಡ ನಿರ್ಧಾರ ಸರ್ಕಾರಕ್ಕೆ ಎಚ್ಚರಿಕೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಗೌರವಕ್ಕೆ ಧಕ್ಕೆ ಬಂದಿದೆ” ಎಂದು ವಾಗ್ದಾಳಿ ನಡೆಸಿದರು.

Mamata Banerjee :  ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ #pratidhvani

ಈ ವಿವಾದದ ನಡುವೆ ಹಳೆಯ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ವಿಧಾನಸಭೆಯಲ್ಲೇ ಕೆಲವು ಶಾಸಕರು ಐಪಿಎಲ್ ಉಚಿತ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ್ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದ ವೇಳೆ ಹಲವು ಶಾಸಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದರು. ಜೆಡಿಎಸ್ ಪರಿಷತ್ ಸದಸ್ಯ ಶರವಣ ಕೂಡ ಈ ಬೇಡಿಕೆಗೆ ಧ್ವನಿಯಾಗಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್ ಫೈನಲ್ ಕೈತಪ್ಪಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವೇ ಅಥವಾ ಅದರ ಹಿಂದೆ ರಾಜಕೀಯ ಒತ್ತಡವೂ ಇದೆಯೇ ಎಂಬ ಪ್ರಶ್ನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

Tags: #bengaluru#CricketPolitics#dkshivakumar#IPL#Nikhilkumaraswamy#VIPTicketsAhmedabadBCCIChinnaswamyStadiumCricketFansIPLFinalKSCApratidavaniRCB
Previous Post

ಸಿಎಂ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ ಸ್ಪಷ್ಟನೆ‌ ನೀಡಿದ ಉತ್ತರ ಇಲ್ಲಿದೆ !

Next Post

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

Related Posts

ವಿಜಯ್ ಬೆಂಬಲದ ವಿಚಾರಕ್ಕೆ ಎಐಎಡಿಎಂಕೆಯಲ್ಲಿ ಬಿರುಕು..? ಎಡಪ್ಪಾಡಿ ವಿರುದ್ಧವೇ ಎದ್ದ ಬಂಡಾಯ!
ಕ್ರೀಡೆ

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

by ಪ್ರತಿಧ್ವನಿ
May 11, 2026
0

2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಮುಂಬೈ ತಂಡ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ...

Read moreDetails
“ಯಾವ ಪುರುಷಾರ್ಥಕ್ಕೆ ಅಭಿಮಾನೋತ್ಸವ?”: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ!

“ದಾದಾ ರಾಜಕೀಯಕ್ಕೆ ಬಂದಿದ್ದರೆ ಇಂದು ಸಿಎಂ ಆಗುತ್ತಿದ್ರಾ?”: ಸೌರವ್ ಗಂಗೂಲಿ ಕುರಿತು ಮತ್ತೆ ಚರ್ಚೆ!

May 9, 2026
ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

May 8, 2026
ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?

ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?

May 5, 2026
ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇಸ್ ಬೆದರಿಕೆ: ವೈಭವ್ ಸೂರ್ಯವಂಶಿ ವಿಚಾರಕ್ಕೆ ಹೊಸ ತಿರುವು

May 2, 2026
Next Post
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada