• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

ಪ್ರತಿಧ್ವನಿ by ಪ್ರತಿಧ್ವನಿ
May 21, 2026
in ಕ್ರೀಡೆ
0
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Share on WhatsAppShare on FacebookShare on Telegram

ಐಪಿಎಲ್‌ನ 66ನೇ ಲೀಗ್ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಆಫ್ ಲೆಕ್ಕಾಚಾರಗಳ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವ ಪಡೆದಿದ್ದು, ಆರ್‌ಸಿಬಿ ಅಭಿಮಾನಿಗಳ ಕಣ್ಣೂ ಈ ಪಂದ್ಯಕ್ಕೇ ನೆಟ್ಟಿದೆ.ಪ್ರಸ್ತುತ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಇರುವ ಗುಜರಾತ್ ಟೈಟಾನ್ಸ್ ತಂಡ ಈ ಪಂದ್ಯ ಗೆದ್ದರೆ 18 ಅಂಕಗಳಿಗೆ ಏರಲಿದೆ. ಇದರಿಂದ ಟಾಪ್-2 ಸ್ಥಾನದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡು ಮೊದಲ ಕ್ವಾಲಿಫೈಯರ್ ಆಡುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲಿದೆ.

CM Vijay : ತಮಿಳುನಾಡಿನಲ್ಲಿ ಕುತೂಹಲ ಮೂಡಿಸುತ್ತಿರೋ ರಾಜಕೀಯ ಬೆಳವಣಿಗೆಗಳು..! #pratidhvani

 

ADVERTISEMENT

ಇನ್ನೊಂದೆಡೆ ಪ್ಲೇಆಫ್ ಪೈಪೋಟಿಯಲ್ಲಿ ಉಳಿಯಬೇಕಾದರೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಅನಿವಾರ್ಯವಾಗಿದೆ.ಆದರೆ ಈ ಪಂದ್ಯದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರ. ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಜಯ ಸಾಧಿಸಿದರೆ ಆರ್‌ಸಿಬಿಗೆ ದೊಡ್ಡ ಲಾಭವಾಗಲಿದೆ. ಈಗಾಗಲೇ 18 ಅಂಕಗಳನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ಟಾಪ್-2 ಸ್ಥಾನ ಬಹುತೇಕ ಖಚಿತವಾಗುವ ಸಾಧ್ಯತೆ ಇದೆ.ಈಗಿರುವ ಲೆಕ್ಕಾಚಾರ ಪ್ರಕಾರ ಆರ್‌ಸಿಬಿಯ 18 ಅಂಕಗಳನ್ನು ಸರಿಸಾಟಿ ಮಾಡುವ ಅವಕಾಶ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ಮಾತ್ರ ಇದೆ.

ಇಂದು ಗುಜರಾತ್ ಸೋತರೆ ಅದು 16 ಅಂಕಗಳಲ್ಲೇ ಉಳಿಯಲಿದೆ. ಹೀಗಾಗಿ ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೂ ಮೊದಲ ಕ್ವಾಲಿಫೈಯರ್ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗುತ್ತದೆ.ಹೀಗಾಗಿ ಇಂದಿನ ಗುಜರಾತ್-ಚೆನ್ನೈ ಪಂದ್ಯ ಕೇವಲ ಎರಡು ತಂಡಗಳ ನಡುವಿನ ಕದನವಲ್ಲ, ಆರ್‌ಸಿಬಿಯ ಭವಿಷ್ಯಕ್ಕೂ ಮಹತ್ವದ ಪಂದ್ಯವಾಗಿ ಪರಿಣಮಿಸಿದೆ. ಕ್ರಿಕೆಟ್ ಅಭಿಮಾನಿಗಳು ಈಗ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಾಗಿ ಕಾದು ಕುಳಿತಿದ್ದಾರೆ.

Tags: Chennai Super KingsCricket NewsCSK vs GTCSK Win BenefitGT vs CSKGujarat TitansGujarat Titans MatchIPL 2026IPL PlayoffsIPL Points TableIPL Qualifier RaceNarendra Modi StadiumRCBRCB Playoff ChancesRoyal challengers Bengaluru
Previous Post

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

Next Post

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

Related Posts

ವಿಜಯ್ ಬೆಂಬಲದ ವಿಚಾರಕ್ಕೆ ಎಐಎಡಿಎಂಕೆಯಲ್ಲಿ ಬಿರುಕು..? ಎಡಪ್ಪಾಡಿ ವಿರುದ್ಧವೇ ಎದ್ದ ಬಂಡಾಯ!
ಕ್ರೀಡೆ

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

by ಪ್ರತಿಧ್ವನಿ
May 11, 2026
0

2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಮುಂಬೈ ತಂಡ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ...

Read moreDetails
“ಯಾವ ಪುರುಷಾರ್ಥಕ್ಕೆ ಅಭಿಮಾನೋತ್ಸವ?”: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ!

“ದಾದಾ ರಾಜಕೀಯಕ್ಕೆ ಬಂದಿದ್ದರೆ ಇಂದು ಸಿಎಂ ಆಗುತ್ತಿದ್ರಾ?”: ಸೌರವ್ ಗಂಗೂಲಿ ಕುರಿತು ಮತ್ತೆ ಚರ್ಚೆ!

May 9, 2026
ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

May 8, 2026
“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

May 7, 2026
ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?

ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?

May 5, 2026
Next Post
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada