ಕಳೆದ ಕೆಲವು ವರ್ಷಗಳ ಹಿಂದೆ ವಿವಾದಕ್ಕೆ ಸಿಲುಕಿದ ನಟಿ ರಾಗಿಣಿ ದ್ವಿವೇದಿ ಆ ನಂತರ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು.
ಇನ್ನು ಅವರ ಕಮ್ ಬ್ಯಾಕ್ ಸಿನಿಮಾ ಟೈಟಲ್ ಇನ್ನಷ್ಟೆ ಹೊರಬೀಳಬೇಕಿದು ಈ ಹಿಂದೆ ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಈ ಚಿತ್ರಕ್ಕೆ ಆಕ್ಷನ್ ಜಟ್ ಹೇಳುತ್ತಿದ್ದಾರೆ.
ಚಿತ್ರೀಕರಣವನ್ನು ನವೆಂಬರ್ ನಲ್ಲಿ ಆರಂಭಿಸುವುದಾಗಿ ತಿಳಿಸಿರುವ ನಿರ್ದೇಶಕರು, ನಿರ್ಮಾಣ ಸಂಸ್ಥೆ, ಕಲಾವಿದರು ಹಾಗೂ ತಂತ್ರಜ್ಞರು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಿದ್ದಾರೆ.







