ಟಿ-20 ವಿಶ್ವಕಪ್‌ನಲ್ಲಿ ಇಂದು ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ ಏಕೆಂದರೆ ಇಂದು ಕಿವೀಸ್ ಮತ್ತು ಅಫ್ಘಾನಿಸ್ತಾನದ ವಿರದ್ದ ಅಬುಧಾಬಿಯಲ್ಲಿ ಉಭಯ ದೇಶಗಳ ನಡುವೆ ಪಂದ್ಯ ನಡೆಯಲಿದ್ದು ಭಾರತದ ಸೆಮಿ ಫೈನಲ್ ಹಾದಿಯನ್ನ ಈ ಎರಡು ತಂಡಗಳು ನಿರ್ಧರಿಸಲಿವೆ.
ಇಂದು ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ದ ನ್ಯೂಜಿಲೆಂಡ್ ಗೆದ್ದರೆ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 2 ಸ್ಥಾನಕ್ಕೇರಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ, ಭಾರತದ ಪಾಲಿನ ಮಹತ್ವದ ಪಂದ್ಯದಲ್ಲಿ ಕಿವೀಸ್ ಅಫ್ಗಾನಿಸ್ತಾನದ ವಿರುದ್ದ ಸೋಲೊಪ್ಪಿಕೊಂಡರೆ ಭಾರತ, ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 6 ಅಂಕಗಳನ್ನು ಪಡೆದುಕೊಳ್ಳತ್ತವೆ. ರನ್‌ರೇಟ್ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವ ತಂಡವನ್ನ ಆಯ್ಕೆ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ಮೂರು ತಂಡಗಳ ನೆಟ್ ರನ್ ರೇಟ್ ನೋಡಿದರೆ ಭಾರತದ ರನ್‌ರೇಟ್ ಅತ್ಯುತ್ತಮವಾಗಿದೆ.
ಹೀಗಾಗಿ ಇಡೀ ಭಾರತ ದೇಶದ ಕ್ರಿಕೆಟ್ ಅಭಿಮಾನಿಗಳು ಅಫ್ಘಾನಿಸ್ತಾನದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈಗಾಗಲೇ ಸೂಪರ್ 12ನಲ್ಲಿ ಅಫ್ಘನರು 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇದೀಗ ಅಫ್ಗಾನಿಸ್ತಾನದವರು ನ್ಯೂಜಿಲೆಂಡ್ ರವರಿಗೆ ಪಂದ್ಯದಲ್ಲಿ ಮಣ್ಣು ಮುಕ್ಕಿಸಿದ್ದರೆ ಭಾರತದ ಸೆಮೀಸ್ ಆಸೆ ಜೀವಂತವಾಗಿರಲಿದೆ.
ಮತ್ತೊಂದೆಡೆ ನ್ಯೂಜಿಲೆಂಡ್ ತಂಡವು ಆತ್ಮ ವಿಶ್ವಾಸದಲ್ಲಿದೆ. ಮೊದಲ ಪಂದ್ಯ ಪಾಕಿಸ್ತಾನದ ವಿರುದ್ದ ಸೋತ ನಂತರ ಹ್ಯಾಟ್ರಿಕ್ ಜಯ ಸಾಧಿಸಿರುವ ನ್ಯೂಜಿಲೆಂಡ್ ತಂಡವು ಇಂದಿನ ಪಂದ್ಯವನ್ನ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನ ಮುಂದುವರೆಸಲು ಯೋಚಿಸಿದೆ.
ಟಿ-20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ ತಂಡವನ್ನು ಮೊದಲ ಬಾರಿಗೆ ಮುಖ ಮುಖಿಯಾಗಿತ್ತಿವೆ. ಈ ಹಿಂದೆ ಉಭಯ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ 2 ಭಾರಿ ಮುಖಮುಖಿಯಾಗಿದ್ದವು. ಏರಡರಲ್ಲು ಅಫ್ಘಾನಿಸ್ತಾನ ಸೋತ್ತಿತು.