Tag: Afghanistan

ತಾಲಿಬಾನ್‌ ಅಡಗುದಾಣದ ಮೇಲೆ ಪಾಕಿಸ್ಥಾನ ಸೇನೆ ಧಾಳಿ ; ಅಪ್ಘನ್‌ ಸರ್ಕಾರದಿಂದ ಪ್ರತೀಕಾರ ಘೋಷಣೆ

ಪೇಶಾವರ: ನೆರೆಯ ಅಫ್ಘಾನಿಸ್ತಾನದೊಳಗಿನ ಪಾಕಿಸ್ತಾನಿ ತಾಲಿಬಾನ್‌ಗಳ ಅನೇಕ ಶಂಕಿತ ಅಡಗುತಾಣಗಳನ್ನು ಗುರಿಯಾಗಿಸಿ ಪಾಕಿಸ್ತಾನವು ಮಂಗಳವಾರ ಅಪರೂಪದ ವೈಮಾನಿಕ ದಾಳಿಗಳನ್ನು ನಡೆಸಿದ್ದು, ತರಬೇತಿ ಕೇಂದ್ರವನ್ನು ನಾಶ ಮಾಡಿದ್ದು ಕೆಲವು ...

Read moreDetails

ಲಢಾಕ್‌ ನಲ್ಲಿ ಸೃಷ್ಟಿಯಾಗುತ್ತಿದೆ 108 ಅಡಿ ಎತ್ತರದ ಬುಧ್ಧನ ಮೂರ್ತಿ

ಲೇಹ್: ಲಡಾಖ್‌ನ ದೂರದ ಹಳ್ಳಿಯಾದ ಹನುಥಾಂಗ್‌ನಲ್ಲಿ ಶಾಂತವಾದ ಬೆಟ್ಟದ ಮೇಲೆ, 108 ಅಡಿ ಬುದ್ಧ ಕಲ್ಲಿನಿಂದ ಹೊರಹೊಮ್ಮುತ್ತಿದ್ದಾನೆ-ಎರಡು ದಶಕಗಳ ಹಿಂದೆ ಕನಸಿನಂತೆ ಪ್ರಾರಂಭವಾದ ಪ್ರೀತಿಯ ಶ್ರಮ.ಇಲ್ಲಿನ ಗ್ರಾಮಸ್ಥರಿಗೆ ...

Read moreDetails

ದಾಖಲೆಯ ಜಯ ಸಾಧಿಸಿದ ಅಪ್ಘಾನಿಸ್ತಾನ್

ವಿಶ್ವಕಪ್ ನ 5ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ್ ತಂಡ ಉಗಾಂಡ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಉಗಾಂಡ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಹೀಗಾಗಿ ಮೊದಲು ...

Read moreDetails

ಆಪ್ಘಾನ್ ನಲ್ಲಿ ಭಾರೀ ಪ್ರವಾಹ; 330ಕ್ಕೂ ಅಧಿಕ ಜನ ಬಲಿ

ಕಾಬೂಲ್: ಉತ್ತರ ಆಫ್ಘಾನಿಸ್ತಾನದಲ್ಲಿ (Afghanistan) ಭಾರೀ ಪ್ರವಾಹ ಉಂಟಾಗಿದ್ದು, ಹೆಚ್ಚಿನ ಸಾವು-ನೋವು ಸಂಭವಿಸಿವೆ. ಉತ್ತರ ಆಪ್ಘಾನ್ ನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, (Rain) ಪರಿಣಾಮ ಹಠಾತ್ ಪ್ರವಾಹ (Flood) ...

Read moreDetails

ಇಂದು ಭಾರತ-ಬಾಂಗ್ಲಾದೇಶ ಮಧ್ಯೆ ಕದನ

ಪುಣೆ: ಮೊದಲ ಪಂದ್ಯದಲ್ಲಿ ಸ್ವಲ್ಪ ಕಷ್ಟವೆನಿಸಿದ್ರೂ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿತು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸುಲಭ ಜಯ ಸಾಧಿಸಿತ್ತು. ಆದ್ರೆ ಹೈವೋಲ್ಟೇಜ್​ ಪಂದ್ಯವಾಗಿದ್ದ ಪಾಕಿಸ್ತಾನ ವಿರುದ್ಧ ...

Read moreDetails

ಅಫ್ಗಾನಿಸ್ತಾನ | 5.8 ತೀವ್ರತೆಯ ಭೂಕಂಪ ; ದೆಹಲಿ, ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪನ

ಅಫ್ಗಾನಿಸ್ತಾನ ದೇಶದ ಹಿಂದೂಕುಶ್‌ ಪ್ರದೇಶದಲ್ಲಿ ಶನಿವಾರ (ಆಗಸ್ಟ್ 5) ರಾತ್ರಿ 9.30 ರ ಸುಮಾರಿಗೆ 5.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ದೆಹಲಿ-ಎನ್‌ಸಿಆರ್‌ ಮತ್ತು ಹತ್ತಿರದ ...

Read moreDetails

ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: 280 ಮಂದಿ ಬಲಿ

ಅಫ್ಘಾನಿಸ್ತಾನದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 280 ಮಂದಿ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ...

Read moreDetails

ಅಫ್ಗಾನಿಸ್ತಾನ: ಶಿಯಾ ಮುಸ್ಲಿಮರನ್ನು ಗುರಿಯಾಗಿಸಿ ಬಾಂಬ್‌ ದಾಳಿ

ಅಫ್ಗಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯ ಎಂದೇ ಖ್ಯಾತಿ ಪಡೆದಿರುವ ಶಿಯಾ ಮುಸ್ಲಿಂರನ್ನು ಗುರಿಯಾಗಿಸಿ ಸರಣಿ ಬಾಂಬ್‌ಗಳ ದಾಳಿ ಮಾಡಲಾಗಿದೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್‌ (ISk) ಸಂಘಟನೆ ...

Read moreDetails

ಕುಟುಂಬವನ್ನು ಪೋಷಿಸಲು ಕಿಡ್ನಿಗಳನ್ನೇ ಮಾರಾಟಕ್ಕಿಟ್ಟ ಅಫ್ಘನ್ನರು!

ಅಫ್ಘಾನಿಸ್ತಾನ ಮತ್ತೆ ತಾಲಿಬಾನಿನ ತೆಕ್ಕೆಗೆ ಬಿದ್ದು ಆರು ತಿಂಗಳುಗಳಾದವು. ಮೊದಮೊದಲು ಅಫ್ಘಾನಿಸ್ತಾದಿಂದ ಓಡಿಹೋಗಲು ಏರ್‌ಪೋರ್ಟ್‌ನಲ್ಲಿ‌‌ ಕಿಕ್ಕಿರಿದ ಜನರ, ಮಹಿಳೆಯರ ಫೊಟೊಇಗಳನ್ನು ಸಾರ್ವಜನಿಕ ಸ್ಥಳಗಳಿಂದ ಅಳಿಸಿ ಹಾಕಿದ, ಮಹಿಳಾ ...

Read moreDetails

ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿದ್ರೆ ಮಾತ್ರ ಪ್ರಾದೇಶಿಕ ಶಾಂತಿ ಸಾಧ್ಯ; ಎನ್ಎಸ್ಎ ಮಟ್ಟದ ಸಭೆಯಲ್ಲಿ 8 ದೇಶಗಳ ಒಕ್ಕೊರಲ ಅಭಿಪ್ರಾಯ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಭಾರತದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೂ ಭಂಗ ತರೋ ...

Read moreDetails

ಅಫ್ಘಾನಿಸ್ತಾನವನ್ನ ಮಣಿಸಿದ ಕಿವೀಸ್‌; T20 ವಿಶ್ವಕಪ್‌ನಿಂದ ಹೊರ ಬಿದ್ದ ಭಾರತ

ಭಾನುವಾರ ನಡೆದ ಸೂಪರ್‌ 12ರ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವು ಅಫ್ಘಾನಿಸ್ತಾನದ ವಿರುದ್ದ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿದೆ. ಇದರಿಂದ ಭಾರತದ ಸೆಮೀಸ್‌ ...

Read moreDetails

ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ

ಟಿ-20 ವಿಶ್ವಕಪ್‌ನಲ್ಲಿ ಇಂದು ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ ಏಕೆಂದರೆ ಇಂದು ಕಿವೀಸ್‌ ಮತ್ತು ಅಫ್ಘಾನಿಸ್ತಾನದ ವಿರದ್ದ ಅಬುಧಾಬಿಯಲ್ಲಿ ಉಭಯ ದೇಶಗಳ ನಡುವೆ ಪಂದ್ಯ ನಡೆಯಲಿದ್ದು ...

Read moreDetails

ತಾಲಿಬಾನ್ ಬೆಂಬಲಿಸುವುದು ದೇಶದ್ರೋಹಕ್ಕೆ ಸಮ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ  ಯೋಗಿ ಮತ್ತೆ ಸುದ್ದಿಯಲ್ಲಿದ್ದಾರೆ,  ಸಾರ್ವಜನಿಕ ಸಭೆಯೊಂದರಲ್ಲಿ, ಯೋಗಿ ಆದಿತ್ಯನಾಥ್ ತಾಲಿಬಾನ್ ಬೆಂಬಲಿಸುವುದು ದೇಶ ದ್ರೋಹಕ್ಕೆ ಸಮ ಎಂದು ಹೇಳಿದ್ದಾರೆ. ಪಶ್ಚಿಮ ಯುಪಿಯ ಹಾಪುರ್ ...

Read moreDetails

ತಾಲಿಬಾನ್‌ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾದ ಉಗ್ರ ಖಾರಿ ಫಾಸೀಹುದ್ದೀನ್ ಯಾರು?

ಅಮೆರಿಕಾ ತನ್ನ ಸಂಪೂರ್ಣ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನಿಗಳು ಮತ್ತೊಂದು ಮಜಲನ್ನ ಏರಿದ್ದಾರೆ. ಖಾರಿ ಫಾಸೀಹುದ್ದೀನ್ಗೆ ಸೇನಾ ಮುಖ್ಯಸ್ಥನ ಪಟ್ಟ ...

Read moreDetails

ಪಂಜಶೀರನಲ್ಲಿ 20 ಮಂದಿಯನ್ನು ಕೊಂದ ತಾಲಿಬಾನಿಗಳು; ಅಫ್ಘಾನ್ ಉಪ ಪ್ರಧಾನಿ ಬರಾದಾರ್ ನಾಪತ್ತೆ

ಕ್ರೌರ್ಯವನ್ನೇ ಉಸಿರಾಡಿ ಗದ್ದುಗೆ ಏರಿರೋ ತಾಲಿಬಾನಿಗಳು ಒಳಗೊಳಗೇ ಅಸಮಾಧಾನದ ಬೇಗುದಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮ ಇಸ್ಲಾಮಿಕ್ ಎಮಿರೇಟ್‌ ಸರ್ಕಾರದ ಹೊಸ ಸಂಪುಟದ ಬಗ್ಗೆ ಉಪ ಪ್ರಧಾನಿ ...

Read moreDetails

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶರಿಯಾ ಕಾನೂನು ಜಾರಿಗೊಳಿಸಿದ ತಾಲಿಬಾನ್; ಅಫ್ಘಾನರ ಗೋಳು ಹೇಳತೀರದು

ಬುದ್ಧ ನೆಲದಲ್ಲಿ ಮುಗ್ಧ ಜನರ ನರಮೇಧ ನಡೆಸಿದ ತಾಲಿಬಾನ್ ಉಗ್ರರು ಕೊನೆಗೂ ಕ್ರೂರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವು ಕಾನೂನುಗಳನ್ನೂ ಘೋಷಣೆ ಮಾಡಿಕೊಂಡಿದ್ದಾರೆ. ...

Read moreDetails

ಬೆಂಗಳೂರು: ತಾಲಿಬಾನ್, ಪಾಕಿಸ್ತಾನದ ವಿರುದ್ಧ ಅಫ್ಘಾನ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಬುಧವಾರ ಬೆಂಗಳೂರಿನಲ್ಲಿ ತಮ್ಮ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಮತ್ತು ಪಾಕಿಸ್ತಾನ್‌ ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ . ...

Read moreDetails

ಕಾಬೂಲ್‌ ನಲ್ಲಿ ರಾಕೆಟ್ ದಾಳಿ: ಮಗು ಸೇರಿ ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಸ್ಫೋಟದ ಸದ್ದು ಕೇಳಿ ಬಂದ ನಂತರ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಇರುವ ಖವಾಜ ಬುಗ್ರ ಪ್ರದೇಶ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿದೆ ಎಂದು ವರದಿಯಾಗಿದೆ. ...

Read moreDetails

ಸಿಎಎ ಸಮರ್ಥಿಸಿಕೊಳ್ಳಲು ಅಫ್ಘಾನ್ ಉದಾಹರಣೆ ನೀಡಿದ ಕೇಂದ್ರ ಸಚಿವ

ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ಬಳಸಿಕೊಂಡಿದ್ದಾರೆ. ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕಾರಣವೇನು ಎಂಬದನ್ನು ವಿವರಿಸಲು ಅಫ್ಘಾನ್ ಉದಾಹರಣೆಯನ್ನು ನೀಡಿದ್ದಾರೆ.  ಈ ಕುರಿತಾಗಿ ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಅವರು, ನಮ್ಮ ನೆರೆಯ ರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ ಪೌರತ್ವ ತಿದ್ದುಪಡಿ ಕಾಯ್ದೆಯ ಮಹತ್ವ ತಿಳಿಯುತ್ತದೆ ಎಂದು ಹೇಳಿದ್ದಾರೆ.  “ನಮ್ಮ ನೆರೆ ರಾಷ್ಟ್ರದಲ್ಲಿ ಘಟಿಸಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಲ್ಲಿನ ಸಿಖ್ ಮತ್ತು ಹಿಂದೂ ಸಮುದಾಯದ ಜನರು ಪಡುತ್ತಿರುವ ಕಷ್ಟಗಳನ್ನು ನೋಡುತ್ತಿದ್ದರೆ,  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಬೇಕಾದ ಅನಿವಾರ್ಯತೆಯ ಕುರಿತು ನಮಗೆ ತಿಳಿಯುತ್ತದೆ,” ಎಂದು ಅವರು ಹೇಳಿದ್ದಾರೆ.   ಅಫ್ಘಾನಿಸ್ತಾನದಲ್ಲಿ 1996ರಿಂದ 2001ರ ತನಕ ತಾಲಿಬಾನ್ ಆಡಳಿತವಿದಾಗ ಅಲ್ಲಿನ  ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ದ ತಾಲಿಬಾನ್ ಅತ್ಯಂತ ಕಠೋರ ರೀತಿಯಲ್ಲಿ ವ್ಯವಹರಿಸಿತ್ತು. ವಿದೇಶಿಗರು ಹಾಗೂ ಪ್ರಾದೇಶಿಕ ಅಲ್ಪಸಂಖ್ಯಾತರು ಕೂಡಾ ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಪಟ್ಟಿದ್ದರು.  ಈಗ ಮತ್ತೆ ಅಂತುಹುದೇ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ಈಗಾಗಲೇ ನೂರಾರು ಭಾರತೀಯರನ್ನು ಹಾಗೂ ಅಲ್ಲಿನ  ಹಿಂದೂ, ಸಿಖ್ಖರನ್ನು ಭಾರತಕ್ಕೆ ಕರೆತರಲಾಗಿದೆ.  ಸಿಎಎ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಆಯಾ ದೇಶಗಳ ಅಲ್ಪಸಂಖ್ಯಾತ  ಸಮುದಾಯಗಳಾದ ಹಿಂದೂ, ಜೈನ, ಬೌಧ, ಪಾರ್ಸಿ ಹಾಗೂ ಕ್ರೈಸ್ತ ಧರ್ಮದ ನಾಗರಿಕರಿಗೆ ಭಾರತದ ಪೌರತ್ವ ನೀಡುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಡಿಸೆಂಬರ್ 31,2014ರ ವರೆಗೆ ಭಾರತಕ್ಕೆ ಆಗಮಿಸಿರುವ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೇ, ಭಾರತೀಯ  ನಾಗರಿಕರು ಎಂದು ಪರಿಗಣಿಸಲಾಗುತ್ತಿತ್ತು.  ಈ ಕಾಯ್ದೆಯು ಭಾರತದ ಸಾಂವಿಧಾನಿಕ ಆಶಯಗಳಿಗೆ ವಿರುದ್ದವಾದದ್ದು ಎಂಬ ಕಾರಣಕ್ಕೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನಕ್ಕೆ ವಿರುದ್ದವಾದದ್ದು ಎಂಬುದು ಹಲವರ ಅಭಿಪ್ರಾಯವಾಗಿದೆ

Read moreDetails

ತಾಲಿಬಾನ್: ಅತಂತ್ರದಲ್ಲಿ ಮಹಿಳಾ ಸ್ವಾತಂತ್ರ್ಯ

“ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ.” ಇಂದು ಅಫ್ಘಾನಿಸ್ತಾನದಲ್ಲಿರುವ ಬಹುತೇಕ ಮಹಿಳೆಯರು, ತಮ್ಮ ವ್ಯಾಸಂಗ ಪ್ರಮಾಣಪತ್ರಗಳನ್ನು ಸುಟ್ಟು ಹಾಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು, ಬಹಿರಂಗವಾಗಿ ತೆಗೆದಂತಹ ಫೋಟೋಗಳನ್ನು ಅಳಿಸಿ ಹಾಕುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ನಡೆಸಿ ಆರ್ಥಿಕ ಸ್ವಾವಲಂಬನೆಯತ್ತ ದೃಷ್ಟಿ ನೆಟ್ಟಿದ್ದ ಮಹಿಳೆಯರು, ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಯಲ್ಲಿಟ್ಟಿದ್ದ ಬುರ್ಖಾ ಹುಡುಕುವತ್ತ ಗಮನ ನೀಡಿದ್ದಾರೆ.  ಕಳೆದ ಎರಡು ತಿಂಗಳಿನಿಂದ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ಆ ದೇಶವನ್ನು ಎರಡು ದಶಕಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿದೆ. ಮುಖ್ಯವಾಗಿ, ಅಲ್ಲಿನ ಮಹಿಳೆಯರು ತಮಗಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡು, ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಎಲ್ಲಿ ಕಮರಿ ಹೋಗುವುದೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.  1996ರಿಂದ 2001ರ ನಡುವಿನ ತಾಲಿಬಾನ್ ಆಡಳಿತವನ್ನು ಮತ್ತೆ ನೆನಪಿಸಿಕೊಂಡರೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಮಹಿಳೆಯರಿಗೆ ಕೆಲಸಕ್ಕೆ ಹೋಗುವ ಸ್ವಾತಂತ್ರ್ಯ ಇರಲಿಲ್ಲ. ಮನೆಯಿಂದ ಹೊರಗೆ ಬರುವಾಗ ತಮ್ಮ ಮುಖವನ್ನು ಇಸ್ಲಾಮಿಕ್ ಬುರ್ಖಾ ಧರಿಸಿ ಮುಚ್ಚಬೇಕಿತ್ತು. ಮನೆಯ ಗಂಡು ಸದಸ್ಯರ ಸಹಾಯದೊಂದಿಗೆ ಮಾತ್ರ ಮನೆಯಿಂದ ಹೊರ ಬರಬೇಕಿತ್ತು. ಇಂತಹ ಕರಾಳ ದಿನಗಳನ್ನು ನೋಡಿರುವ ಅಲ್ಲಿನ ಮಹಿಳೆಯರು, ಮತ್ತೆ ಸ್ವಾತಂತ್ರ್ಯದ ಹರಣಕ್ಕೆ ಸಾಕ್ಷಿಯಾಗಿದ್ದಾರೆ.  ಇಂದಿಗೂ 90ರ ದಶಕದ ಅತ್ಯಂತ ಕ್ರೂರ ಶಿಕ್ಷೆಗಳಾದ ಛಡಿಯೇಟು ಹಾಗೂ ಕಲ್ಲುಗಳನ್ನು ಎಸೆಯುವುದನ್ನು ಮಹಿಳೆಯರು ಇನ್ನೂ ಮರೆತಿಲ್ಲ. ಇಂತಹ ಕಠೋರವಾದ ಇಸ್ಲಾಮಿಕ್ ನಿಯಮಗಳನ್ನು ಜಾರಿಗೆ ತರಲಾಗಿತ್ತು.  ತಮ್ಮ ಮೊತ್ತ ಮೊದಲ ಸುದ್ದಿಗೋಷ್ಟಿಯಲ್ಲಿ ಮಹಿಳೆಯರಿಗೆ ‘ಇಸ್ಲಾಮಿಕ್ ನಿಯಮಗಳ’ ಅಡಿಯಲ್ಲಿ ಶಿಕ್ಷಣ ಹಾಗೂ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗುವುದು, ಎಂದು ತಾಲಿಬಾನ್ ಹೇಳಿದೆ. ಆದರೆ, ತಾಲಿಬಾನ್ ಈ ಹಿಂದೆ ದೇಶದ ಜನರೊಂದಿಗೆ ನಡೆದುಕೊಂಡಿರುವ ಕ್ರೂರ ರೀತಿಯಿಂದ ಯಾರೂ ಈ ಮಾತುಗಳನ್ನು ನಂಬಲು ಸಿದ್ದರಿಲ್ಲ. ಮಿಗಿಲಾಗಿ, ಕೆಲಸಕ್ಕೆಂದು ಹೋದ ಮಹಿಳೆಯರನ್ನು ವಾಪಾಸ್ ಮನೆಗೆ ಕಳುಹಿಸಿರುವ ತಾಜಾ ಉದಾಹರಣೆಗಳು ಕಣ್ಣ ಮುಂದಿರುವಾಗ, ಬಂದೂಕಿನಿಂದ ಶಾಂತಿ ಸ್ಥಾಪನೆಗೆ ಹೊರಟವರ ಮಾತುಗಳನ್ನು ನಂಬುವುದಾದರೂ ಹೇಗೆ?  ಅಫ್ಘಾನಿಸ್ತಾನದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದ ಪತ್ರಕರ್ತೆಯೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಾಲಿಬಾನ್ ಪಡೆಗಳು ಕಾಬೂಲನ್ನು ವಶಪಡಿಸಿಕೊಂಡ ಕೇವಲ ಮೂರು ದಿನಗಳ ನಂತರ ಸಂಪೂರ್ಣ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ, ಎಂದು ಅವರು ಹೇಳಿದ್ದಾರೆ.  “ನಾನು ತಾಲಿಬಾನಿಗಳ ವಿರುದ್ದ, ಅವರ ಕಾರ್ಯಾಚರಣೆಗಳ ಕುರಿತು ನೂರಾರು ವರದಿಗಳನ್ನು ಮಾಡಿದ್ದೆ. ಈಗ ಅವರು ನನ್ನ ಗುರುತು ಪತ್ತೆ ಹಚ್ಚಿದರೆ ಏನು ಮಾಡುತ್ತಾರೆ ಎಂದೂ ತಿಳಿದಿಲ್ಲ. ನನ್ನ ಅಸ್ಮಿತೆಯನ್ನೇ ಬಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ,” ಎಂದು ಅವರು ರಾಯಿಟರ್ಸ್’ಗೆ ಹೇಳಿಕೆ ನೀಡಿದ್ದಾರೆ.  “ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ,” ಎಂದು ಅವರು ಕಣ್ಣೀರಿಟ್ಟಿದ್ದಾರೆ.  ಕಾಬೂಲ್’ನಲ್ಲಿ ಸಲೂನ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಮ್ಮ ವ್ಯಾಪಾರವನ್ನು ಮುಚ್ಚಿ ಈಗ ಮನೆಯಲ್ಲಿ ಅವಿತು ಕುಳಿತಿದ್ದಾರೆ.  “ನನ್ನ ಅಂಗಡಿಯಿಂದ ಕನಿಷ್ಟ 24 ಜನರ ಕುಟುಂಬಗಳು ಬದುಕುತ್ತಿದ್ದವು. ಅದು ಕೂಡಾ ಎಲ್ಲಾ ಕೆಲಸಗಾರರು ಮಹಿಳೆಯರಾಗಿದ್ದರು. ಈಗ ಅದು ಇತಿಹಾಸವಾಗಿದೆ. ತಾಲಿಬಾನ್ ಭಯದಿಂದ ಮಹಿಳೆಯರು ಮನೆಯಿಂದ ಹೊರಹೋಗಲೂ ಅಂಜುತ್ತಿದ್ದಾರೆ,” ಎಂದು ಆ ಮಹಿಳೆ ಹೇಳಿದ್ದಾರೆ.  ಪ್ರತಿರೋಧದ ಆರಂಭ ತಾಲಿಬಾನ್ ವಿರುದ್ದ ಈಗಾಗಲೇ ಮಹಿಳೆಯರ ಪ್ರತಿರೋಧ ಆರಂಭವಾಗಿದೆ. ಮಹಿಳೆಯರ ಒಂದು ಸಣ್ಣ ಗುಂಪು ಕಾಬೂಲ್’ನ ಬೀದಿಗಳಲ್ಲಿ ತಾಲಿಬಾನ್ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿದೆ.  “ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲಿನ ಮಹಿಳೆಯರ ಹೃದಯದಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸಲು ನಾವು ಪ್ರತಿಭಟಸುತ್ತಿದ್ದೇವೆ. ಭಯದಿಂದ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಹಿಳೆಯೂ ನಮ್ಮೊಂದಿಗೆ ಕೈಜೋಡಿಸಬೇಕು. ದೇವರಿಚ್ಚೆ ಇದ್ದರೆ ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸುತ್ತೇವೆ. ಇನ್ನು ಹೆಚ್ಚಿನ  ಮಹಿಳೆಯರು ನಮ್ಮೊಂದಿಗೆ ಸೇರುತ್ತಾರೆ,” ಎಂದು ಪ್ರತಿಭನಾನಿರತ ಮಹಿಳೆ ಸೂದಾವರ್ ಕಬೀರಿ ಹೇಳಿದ್ದಾರೆ.  https://twitter.com/missnzl/status/1427914119370264580 ಕಳೆದ ಇಪ್ಪತ್ತು ವರ್ಷಗಳಲ್ಲಿ ಅಫ್ಘಾನ್ ಮಹಿಳೆಯರು ಪಡೆದಿರುವ ಧ್ವನಿಯನ್ನು ಈಗ ಮೌನವಾಗಿಸಲು ನಾವು ಬಿಡುವುದಿಲ್ಲ ಎಂದು ತಾಲಿಬಾನಿಗಳ ಕ್ರೌರತೆಯ ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ.  90ರ ದಶಕದ ಕರಾಳ ನೆನಪುಗಳನ್ನು ಮೀರಿ ನಿಲ್ಲುವಂತಹ ಪ್ರಗತಿಯನ್ನು ಅಫ್ಘಾನ್ ಮಹಿಳೆಯರು ಸಾಧಿಸಿದ್ದರು. ಶಿಕ್ಷಣ, ವಿಜ್ಞಾನ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಈಗ ಆ ಪ್ರಗತಿ ಮತ್ತೆ ಅಧಃಪತನದತ್ತ ಸಾಗುತ್ತಿದೆ. ಮಹಿಳಾ ಸ್ವಾತಂತ್ರ್ಯವೆಂಬುದು ಕೇವಲ ಕನಸಾಗಿ ಉಳಿಯುವ ದಿನಗಳು ಮುಂದೆ ಕಾಣುತ್ತಿವೆ ಎಂಬ ಭಯ ಅಲ್ಲಿನ ಮಹಿಳೆಯರಲ್ಲಿ ಕಾಡುತ್ತಿದೆ.  ಈಗ ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯ ವಿರುದ್ದ ತಾಲಿಬಾನಿನ ಕ್ರೂರ ದೃಷ್ಟಿ ಬೀರುವ ಸಾಧ್ಯತೆಯಿದ್ದರೂ, ತಮ್ಮ ಹಕ್ಕುಗಳಿಗಾಗಿ ಮಹಿಳೆಯರ ಹೊರಾಟ ನಿರಂತರವಾಗಿ ಸಾಗಿದೆ.  “ಅಫ್ಘಾನಿಸ್ತಾನದಲ್ಲಿ 18 ಮಿಲಿಯನ್ ಮಹಿಳೆಯರಿದ್ದಾರೆ. ಅವರೆಲ್ಲರನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸುವುದು ಕಷ್ಟ. ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!