ಬೇಸಿಗೆ ಶುರುವಾಯ್ತು ಅಂದ್ರೆ ಹೆಚ್ಚು ಜನಕ್ಕೆ ಕಾಡುವಂತ ಸಮಸ್ಯೆ ಅಂದ್ರೆ ದೇಹದಲ್ಲಿ ಅದು ಬೆವರಿನ ಚಿಕ್ಕ ಚಿಕ್ಕ ಗುಳ್ಳೆಗಳಾಗುವಂತದ್ದು.ಈ ಗುಳ್ಳೆಗಳು ಆಗುವುದು ಮಾತ್ರವಲ್ಲದೆ ಅದರಿಂದ ತುರಿಕೆಯು ಶುರುವಾಗುತ್ತದೇ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಈ ಸಮಸ್ಯೆ ಎದುರಾಗ್ತಾಯಿದೆ.

ಅದು ಕೂಡ ಎಲ್ಲರಿಗೂ ಗೊತ್ತಿರುವ ಹಾಗೆ ಬೇಸಿಗೆಯಲ್ಲಿ ನಾವು ಹೆಚ್ಚು ಬೆವರ್ತಿವಿ ಈ ಬೆವರಿನಿಂದಾಗಿ ನಮ್ಮ ಕೈ ಹಾಗೂ ಕಾಲು ಬೆರುಳುಗಳ ಮಧ್ಯ ಗುಳ್ಳೆಗಳಾಗುತ್ತದೆ. ಅದ್ರಲ್ಲೂ ಶೂಸ್ ಸಾಕ್ಸ್ ಹಾಕಿದ್ರೆ ಗುಳ್ಳೆಗಳು ಹೆಚ್ಚು..ಇನ್ನ ಆ ಗುಳ್ಳೆಗಳು ಒಡೆದರೆ ನೋವು ಕೂಡ ಜಾಸ್ತಿ ಈ ನ್ಯಾಚುರಲ್ ಆಗಿ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.
ಅಲೋವೆರಾ ಜೆಲ್
ಅಲೋವೆರವನ್ನು ಸಾಕಷ್ಟು ಚರ್ಮದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆ ಗುಳ್ಳೆಗಳ ನೋವನ್ನು ನಿವಾರಣೆ ಮಾಡಲು ಅಲೋವೆರಾ ಜೆಲ್ ಬೆಸ್ಟ್.
ಟೀ ಟ್ರೀ ಆಯಿಲ್
ಒಂದೆರಡು ಹನಿ ಟೀ ಟ್ರೀ ಎಣ್ಣೆಯನ್ನು ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಗುಳ್ಳೆಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಉರಿಯೂತ ಕಡಿಮೆಯಾಗುತ್ತದೆ.

ವಿನೆಗರ್ ಸೋಕ್
ಒಂದು ಪಾತ್ರೆಯಲ್ಲಿ ನೀರು ಮತ್ತು ಅದಕ್ಕೆ ಬೇಕಾದಷ್ಟು ಬಿಳಿ ವಿನೆಗರ್‌ನ ಬೆರೆಸಿ ನಂತರ ಆ ನೀರಿನಲ್ಲಿ ಬೆರಳನ್ನು ನೆನೆಸಿ ಇದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಸಹಕಾರಿ