ಮಂಡ್ಯ : ತಣ್ಣಗಾಗಿದ್ದ ನಾಗಮಂಗಲ ವಾಗ್ಯುದ್ದ ಮತ್ತೆ ಆರಂಭವಾಗಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಶುರುವಾಯ್ತು ಹಾಲಿ-ಮಾಜಿ ಶಾಸಕರ ಮಾತಿನ ಯುದ್ಧ.
ಗೆದ್ದ ಕೂಡಲೇ ಅಧಿಕಾರಿಗಳಿಗೆ ಸಚಿವ ಚೆಲುವರಾಯಸ್ವಾಮಿ ಖಡಕ್ ವಾರ್ನಿಂಗ್ ಮಾಡಿದ್ದರು. ತಾಲೂಕು ಅಧಿಕಾರಿಗಳ ಸಭೆಯಲ್ಲಿ ನನ್ನ ಅನುಮತಿ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಬಾರದು. ಯಾವುದೇ ಕಾಮಗಾರಿ ಮುಂದುವರೆಯದಂತೆ ನೋಡಿಕೊಳ್ಳಿ ಎಂದು ಆದೇಶ ನೀಡಿದ್ದ ಸಚಿವ ಚೆಲುವರಾಯಸ್ವಾಮಿ.

ಚೆಲುವರಾಯಸ್ವಾಮಿ ಮಾತಿಗೆ ಮಾಜಿ ಶಾಸಕ ಸುರೇಶ್ ಗೌಡ ಕೆಂಡಾಮಂಡಲರಾಗಿದ್ದಾರೆ. ಕೆಲವು ಆಪಾದನೆ ಮಾಡ್ತಿದ್ದೀರಲ್ಲ ಸಾಬೀತು ಪಡಿಸಿ. ನೀವೇ ತನಿಖೆ ಮಾಡಿಸಿ, ಒಂದು ಸುಳ್ಳು ಬಿಲ್ ಮಾಡಿಸಿದ್ರೆ ರಾಜಕಾರಣ ಬಿಟ್ಟು ಹೋಗ್ತೇನೆ. ನಾನು ನನ್ನ ಮನೆ ದುಡ್ಡು ತಂದು ತಾಲೂಕಿನಲ್ಲಿ ಕೆಲಸ ಮಾಡಿಸಿದ್ದೇನೆ. ಸರ್ಕಾರ ಏನೂ ನನ್ನ ಕ್ಷೇತ್ರಕ್ಕೆ ಗ್ರ್ಯಾಂಟ್ ಕೊಟ್ಟಿಲ್ಲ.
ನಾನು ಯಾರ ಬಳಿಯು ಕಮಿಷನ್ ಕೇಳಿಲ್ಲ. ನೀನು ಕೊಡು ಎಲ್ಲ ತೊಂದರೆಗಳನ್ನ ಎದುರಿಸಲು ಸಿದ್ದನಿದ್ದೇನೆ. ನನ್ನ ಮನೆ ಮೇಲೆ ಕೇಸ್ ಹಾಕಿಸಿದ್ಯಾ, ಹೊಡೆಸಾಕ್ತೀನಿ ಎಂದಿದ್ಯಾ. ಹೊಡೆದಾಕ್ಸು. ಒಂದೇ ಒಂದು ಹುಲ್ಲು ಕಡ್ಡಿ ಅಲ್ಲಾಡಿಸಕೂಡದು ಎಂದಿದ್ದೀಯಾ.


ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ ಎಂದು ಸುರೇಶ್ ಗೌಡ ಅವಾಜ್ ಹಾಕಿದ್ದಾರೆ. ಜೆಡಿಎಸ್ ಕೃತಜ್ಞತೆ ಸಭೆಯಲ್ಲಿ ಚೆಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಗುಟುರು. ನಾಗಮಂಗಲ ಪಟ್ಟಣದ ತಮ್ಮ ನಿವಾಸದ ಮುಂಭಾಗ ಆಯೋಜಿಸಲಾಗಿದ್ದ ಸಭೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಇಡೀ ತಾಲೂಕಾಗಲಿ, ದೇಶವಾಗಲಿ ಇವರ ಅಪ್ಪನ ಮನೆ ಆಸ್ತಿಯಲ್ಲ. ಕಡ್ಡಿ ಅಲ್ಲಾಡಿಸುತ್ತೇನೆ ತಾಕತ್ತಿದ್ದರೆ ತಡಿ ಎಂದು ಚೆಲುವರಾಯಸ್ವಾಮಿಗೆ ಸವಾಲ್ ಹಾಕಿದ ಮಾಜಿ ಶಾಸಕ ಸುರೇಶ್ ಗೌಡ. ಯಾಕಪ್ಪ ಕೆಲಸ ನಿಲ್ಲಿಸಿದ್ಯಾ, ನಿನ್ನ ಶಾಂಗ್ರಿಲಾ ಹೋಟೇಲ್ ನಲ್ಲಿ ಮೀಟ್ ಮಾಡಬೇಕಾ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.