ಮಂಡ್ಯ : ಮೇ.30: ಮಕ್ಕಳನ್ನು ಶಾಲೆಗೆ ಸೇರಿಸಲು ಸರ್ಕಾರಿ ಶಾಲೆಯ ಮುಂದೆ ಪೋಷಕರು ಕ್ಯೂ ನಿಂತಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಲು ಶಾಲೆಯ ಮುಂದೆ ಪೋಷಕರ ಸರತಿ ಸಾಳಿನಲ್ಲಿ ನಿಂತಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ (K.R.Pete) ತಾಲೂಕಿ ಕರ್ನಾಟಕ ಪಬ್ಲಿಕ್ ಸ್ಕೂಲ್ (public Schools) ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಕ್ಕಳನ್ನ ಶಾಲೆಗೆ ಸೇರಿಸಲು ಬೆಳಗ್ಗೆಯಿಂದಲೇ ನೂರಾರು ಪೋಷಕರು ಕಾದು ಕುಳಿತಿದ್ದಾರೆ.


ಎಸ್‌ಎಸ್‌ಎಲ್‌ಸಿಯಲ್ಲಿ (SSLC) ಉತ್ತಮ ಫಲಿತಾಂಶ ನೀಡಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್. ಈ ಹಿಂದೆ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶತಮಾನದ ಶಾಲೆ. ಕೆಲವು ವರ್ಷಗಳ ಹಿಂದೆ ಶಾಲೆ ಉಳಿವಿಗೆ ಕೈ ಜೋಡಿಸಿದ್ದ ಹಲವರು. ಇದೀಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯು ಭಾರೀ ಹೆಚ್ಚಳವಾಗಿದೆ. ಪ್ರಾಥಮಿಕ ಶಾಲೆ ಇದೀಗ ಎಲ್ ಕೆಜಿ ಯಿಂದ ಪಿಯುಸಿ (puc) ವರೆಗೂ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದಲೆ ಟೋಕನ್‌ಗಾಗಿ ಕಾದು ಕುಳಿತಿರೋ ಪೋಷಕರು. ಬೇಡಿಕೆ ಹೆಚ್ಚಿರುವ ಕಾರಣ ಶಾಲಾ ಪ್ರವೇಶಕ್ಕೆ ಟೋಕನ್ ಪದ್ಧತಿ ಮಾಲಾಗಿದೆ. ಮೊದಲು ಟೋಕನ್ ಪಡೆದವರಿಗೆ ಮೊದಲ ಆದ್ಯತೆ. ಈ ಹಿನ್ನೆಲೆ ಬೆಳಗ್ಗೆಯಿಂದ ಶಾಲೆಯ ಮುಂದೆ ಕಾದು ಕುಳಿತಿರುವ ಪೋಷಕರು.