ಲಖೀಂಪುರ್ ಖೇರಿಯಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಭಾನುವಾರದಂದು ಅಶೀಶ್ ಮಿಶ್ರಾ ಕಾರು ಹಾಯಿಸಿದ್ದರು. ಪರಿಣಾಮ ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಭಂದಿಸಿದಂತೆ ಪೊಲೀಸರು ಮಿಶ್ರಾಗೆ ಸಮಸ್ಸ್ ಜಾರಿ ಮಾಡಿದ್ದರು.
“ಘಟನೆ ನಡೆದಾಗ ಸ್ಥಳದಲ್ಲಿ ನನ್ನ ಮಗ ಇರಲಿಲ್ಲ ಎಂದು ಮಂತ್ರಿ ಹೇಳುತ್ತಾರೆ. ಆದರೆ, ಅವರ ಮಗ ಕಾರಿನಲ್ಲಿ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೀಗಿದ್ದರೂ ಇನ್ನು ಸಹ ಅವರನ್ನು ಬಂಧಿಸಿಲ್ಲ ಮತ್ತು ಆರೋಪಿಯು ತಲೆಮರೆಸಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಆರೋಪಿಗಾಗಿ ಎಲ್ಲಾ ಕಡೆ ಬಲೆ ಬೀಸಿದ್ದಾರೆ. ಆದರೆ ಆತನನ್ನು ಸರ್ಕಾರವೇ ರಕ್ಷಿಸುತ್ತಿದ್ದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಆರೋಪಿಸಿದೆ.
ಘಟನೆಯ ಕುರಿತು ಅಕ್ಟೋಬರ್ 7ರಂದು ಸಚಿವನ ಮಗನ ವಿರುದ್ದ ಪೊಲೀಸ್ ಇಲಾಖೆ ಸಮನ್ಸ್ ಜಾರಿ ಮಾಡಿರುವ ಕುರಿತು ಅವರ ಮನೆಯ ಮುಂಭಾಗ ಸಮನ್ಸ್‌ಅನ್ನು ಪೊಲೀಸರು ಅಂಟಿಸಿದರು. ಕೊಲೆ ಮತ್ತು ಗಲಭೆ ಅರೋಪದ ಅಡಿಯಲ್ಲಿ ಸೋಮವಾರದಂದು ಆಶೀಶ್ ಮಿಶ್ರಾ ವಿರುದ್ದ ಎಫ್‌ಐಆರ್‌ಅನ್ನು ಪೊಲೀಸರು ದಾಖಲಿಸಿದರು.
ಸುಪ್ರೀಂ ಕೋರ್ಟ್ ತನಿಖೆ
ಸುಪ್ರೀಂ ಕೋರ್ಟ್‌ನಲ್ಲಿ ತನಿಖೆ ಮುಂದುವರೆದಿದ್ದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಸದ್ಯಕ್ಕೆ ಲಭ್ಯವಿಲ್ಲದ ಕಾರಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿತ್ತು.
ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಚಾಟಿ ಬೀಸಿದೆ. ಗಂಭೀರವಾದ ಘಟನೆ ನಡೆದು ಇಷ್ಟು ದಿನವಾದರು ಆರೋಪಿಯನ್ನು ಬಂಧಿಸಿಲ್ಲ ಮತ್ತು ಈ ಬಗ್ಗೆ ಆರೋಪಿಯ ವಿರುದ್ದ ಸಮನ್ಸ್ ಜಾರಿಯಾಗಿದ್ದರು ತನಿಖೆಗೆ ಹಾಜರಾಗದಿರುವುದು ಪೊಲೀಸರ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದೆ.
ಸ್ಥಳಕ್ಕೆ ದೌಡಾಯಿಸುತ್ತಿರುವ ನಾಯಕರು
ಈ ನಡುವೆ ಲಖೀಂಪುರ್ ಖೇರಿಯಲ್ಲಿ ಘಟನೆ ಸಂಭವಿಸಿದ ಬಳಿಕ ದೇಶಾದಂತ್ಯ ರಾಜಕೀಯ ಪಕ್ಷ ಹಾಗೂ ಸಂಘಟನೆಯ ಮುಖಂಡರುಗಳು ಲಖೀಂಪುರ್‌ಗೆ ದೌಡಾಯಿಸುತ್ತಿದ್ದು ಎಲ್ಲರನ್ನು ಉತ್ತರ ಪ್ರದೇಶ ಪೊಲೀಸರು ತಡೆಯುತ್ತಿದ್ದಾರೆ. ಈ ನಡುವೆ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಕೋತ್ ಸಿಂಗ್ ಸಿಧುರನ್ನು ಉತ್ತರ ಪ್ರದೇಶದ ಗಡಿ ಶಹಜಹಾನ್‌ಪುರದಲ್ಲಿ ಪೊಲೀಸರು ತಡೆದಿದ್ದಾರೆ. ಒಂದು ವೇಳೆ ಪೊಲೀಸರು ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಲು ಬಿಡದಿದ್ದರೆ ಹಾಗೂ ಶುಕ್ರವಾರದೊಳಗೆ ಮಂತ್ರಿ ಮಗನನ್ನು ಬಂಧಿಸದಿದ್ದರೆ ತಾವು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಿಧು ಯುಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಶಿರೋಮಣಿ ಅಕಾಲಿದಳದ ನಿಯೋಗವು ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿ ಮಾಡಲು ಲಕನೌ ವಿಮಾನ ನಿಲ್ತಾಣಕ್ಕೆ ಆಗಮಿಸಿದ್ದು ಅವರು ಲಖೀಂಪುರ್ ಖೇರಿಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಕಾಲಿದಳದ ನಾಯಕಿ ಹರಸಿಮ್ರತ್ ಕೌರ್ ಬಾದಲ್ ʻʻಸರ್ಕಾರ ರೈತರ ಮಾತನ್ನು ಕೇಳುತ್ತಿಲ್ಲ, ರೈತರನ್ನು ಕೊಲ್ಲಲಾಗುತ್ತಿದೆ ರೈತರೊಂದಿಗೆ ನಾವು ಸದಾ ಇರುತ್ತೇವೆ” ಎಂದು ಹೇಳಿದ್ದಾರೆ.
ಇನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡಾ ಘಟನೆ ಕುರಿತು ವಿಷಾದಿಸಿದ್ದು, ʻʻಮೃತ ರೈತ ಕುಟುಂಬಗಳಿಗೆ ಸರ್ಕಾರ ತಲಾ ಎರಡು ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ಘೋಷಿಸಬೇಕು ಮತ್ತು ಲಖೀಂಪುರ್‌ನಲ್ಲಿ ಘಟನೆ ನಡೆದ ನಂತರ ಸರ್ಕಾರ ಆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಜನರು ಯಾರು ಘಟನೆಯ ಸತ್ಯಾಂಶವನ್ನು ಹಂಚಿಕೊಳ್ಳದಂತೆ ಸರ್ಕಾರ ಅವರನ್ನು ತಡೆಯುವ ಮೂಲಕ ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದೆ” ಎಂದು ಹೇಳಿದ್ದಾರೆ.