ಕಳೆದ ವರ್ಷ ಸೆಪ್ಟೆಂಬರ್ 20, 2020ರಂದು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಈ ಕಾಯ್ದೆಗಳನ್ನು ಸಹಜವಾಗಿಯೇ ವಿರೋಧ ಪಕ್ಷಗಳು ವಿರೋಧಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದ್ದವು.
ಇದು ಸೂಟು-ಬೂಟಿನ ಸರ್ಕಾರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ಸಂಪೂರ್ಣ ಬಂಡವಾಳಶಾಹಿಗಳ ಪರವಾಗಿದ್ದು ಇದರಿಂದ ರೈತರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮೊದಲಿಗೆ ದೆಹಲಿಯ ಜಂತರ್ ಮಂತರ್ನಲ್ಲಿ ದೆಹಲಿ ಮತ್ತು ಸುತ್ತ ಮುತ್ತಲಿನ ರಾಜ್ಯದ ರೈತರು ಮೊದಲಿಗೆ ಪ್ರತಿಭಟಿಸಿದ್ದರು. ಇದಕ್ಕೆ ಕ್ಯಾರೇ ಎನ್ನದ ಕೇಂದ್ರ ಸರ್ಕಾರದ ವಿರುದ್ದ ರೈತರು ಕಳೆದ ವರ್ಷ ನವೆಂಬರ್ 26ರಂದು ದೆಹಲಿಯ ಮೂರು ಗಡಿಗಳಾದ ಸಿಂಘು, ಟಿಕ್ರಿ, ಘಾಜಿಪುರದ ಹೆದ್ದಾರಿಗಳಲ್ಲಿ ಪ್ರತಿಭಟಿಸಲು ಶುರು ಮಾಡಿದ್ದರು. ಅದು ಎಲ್ಲಿಯವರೆಗೆ ಎಂದರೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆದು ಎಂಎಸ್ಪಿ ಖಾತ್ರಿಯಾಗುವವರೆಗು ನಾವು ಇಲ್ಲಿಂದ ಹೋಗುವುದಿಲ್ಲ ಎಂದು ರೈತರು ಮತ್ತು ರೈತ ಸಂಘಟನೆಗಳು ತಮ್ಮ ಒಕ್ಕೊರಲ ಅಭಿಪ್ರಾಯವನ್ನು ಮಂಡಿಸಿದ್ದವು.
ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಂತರವು ಕೇಂದ್ರ ಸರ್ಕಾರದ ಆಮಿಷಗಳಿಗೆ ಒಳಗಾಗದೆ ಸರ್ಕಾರದ ವಿರುದ್ದ ಕಿಡಿಕಾರಿದ್ದವು. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ವಿವಿಧ ಪ್ರಯೋಗಗಳನ್ನು ಮಾಡಿದ್ದರು ಸಹ ರೈತರು ಯಾವುದಕ್ಕು ಜಗ್ಗದೆ ಗಾಳಿ, ಬಿಸಿಲು, ಮಳೆ, ಚಳಿ ಎನ್ನದೇ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿದ್ದರು.
ನವೆಂಬರ್ 19ರಂದು ಭಾರತದ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜನುಮ ದಿನದ ನಿಮಿತ್ತ ವಿಶೇಷ ಸುದ್ಧಿಘೋಷ್ಠಿಯನ್ನು ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಜಾರಿಗೆ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ಮೋದಿ ಸರ್ಕಾರವು 2015ರ ನಂತರ ಯಾವುದಾದರೂ ಕಾನೂನುಗಳನ್ನು ಮಂಡಿಸಿ ಅದನ್ನು ಹಿಂಪಡೆದಿದ್ದರೆ ಅದು ಕೃಷಿ ಕಾಯ್ದೆಯೆ ಆಗಿರುತ್ತದೆ. ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಸಂಭ್ರಮಿಸಿದ್ದರೆ. ರಾಜಕೀಯ ವಿಶ್ಲೇಷಕರು ಇದನ್ನು ಬೇರೆ ರೀತಿಯಲ್ಲೇ ವರ್ಣಿಸಿದ್ದಾರೆ.
ಮುಂಬರುವ ಪಂಚರಾಜ್ಯ ಚುನಾವಣೆಯನ್ನು ದೃಷ್ಟಿಯಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರವನ್ನ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಕೆಲವರು ಹೇಳುವ ಪ್ರಕಾರ ಇದು ಬಿಜೆಪಿಯ ಚುನಾವಣಾ ಅಜೆಂಡಾ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಕೆಲವರು ಈ ನಿರ್ಧಾರವನ್ನ ಏಕಾಏಕಿ ಪ್ರಕಟಿಸುವ ಬದಲು ರೈತರ ಜೊತೆಗೆ ಒಂದೆರಡು ಸುತ್ತಿನ ಮಾತುಕತೆ ನಡೆಸಿ ಅವರುಗಳು ಪ್ರತಿಭಟಿಸುತ್ತಿದ್ದ ಸ್ಥಳದಲ್ಲೇ ಈ ನಿರ್ಧಾರವನ್ನ ಪ್ರಕಟಿಸಿದ್ದರೆ ಅದು ಬಿಜೆಪಿಗೆ ಮುಂಬರುವ ಚುನಾವಣೆಗಳಲ್ಲಿ ಪ್ಲಸ್ ಪಾಯಿಂಟ್ ಆಗುತ್ತಿತ್ತು ಎಂದು ವಿಶ್ಲೇಶಕರು ವಿಶ್ಲೇಷಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ನಾಯಕ ಯೋಗೇಂದ್ರ ಯಾದವ್ ʻಕೃಷಿ ಕಾನೂನುಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದಾಗಲೇ ಅದು ಸತ್ತು ಹೋಯಿತ್ತು ನಾವು ಅದರ ಮರಣ ದೃಡೀಕರಣ ಪತ್ರಕ್ಕಾಗಿ ಕಾಯುತ್ತಿದ್ದೇವುʼ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು 2015ರ ʻಸೂಟ್-ಬೂಟ್ ಕಿ ಸರ್ಕಾರʼದ ಪುನರಾವರ್ತನೆಯಾಗಿದೆ ಎಂಬುದನ್ನು ನಾವು ಇಲ್ಲಿ ಅರಿತುಕೊಳ್ಳಬೇಕು.
ಏಳು ವರ್ಷಗಳ ಹಿಂದೆ ಮೋದಿ ಸರ್ಕಾರವು 2014ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮಾಡಿದ ಆಶ್ವಾಸನೆಗಳು ಸಂಪೂರ್ಣ ಮರೆತಂತಿತ್ತು ಎಂದು ಹೇಳಲಾಗುತ್ತಿದೆ.
2015ರಲ್ಲಿ ವಿವಾದಾತ್ಮಕ ಭೂ ಸುಧಾರಣಾ ಕಾಯ್ದೆಯನ್ನು ಹಿಂಪಡೆದ ನಂತರ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ದರದಲ್ಲಿ ಸಿಗುತ್ತಿರುವುದು ಅದರ ಅದೃಷ್ಟಕ್ಕೆ ಕಾರಣವೆಂದು ಹೇಳಿದ್ದರು.
2021ರಲ್ಲಿ ಮೋದಿ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ಈ ನಿರ್ಧಾರವು ಮುಂಬರುವ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ನಡೆಯುವ ಚುನಾವಣೇಗಳ ಮೇಲೆ ಬಿಜೆಪಿ ಕೇಂದ್ರಿಕರಿಸಿದೆ. ಈ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಆಸೆಯನ್ನು ಹೊಂದಿದೆ. ಉತ್ತರ ಪ್ರದೇಶ, ಉತ್ತರಖಂಡ್ನಲ್ಲಿ ಮತ್ತೆ ಗೆದ್ದು ಬೀಗುವ ಇರಾದೆಯಲ್ಲಿರುವ ಬಿಜೆಪಿ ಪಂಜಾಬ್ನಲ್ಲಿ ಈ ಹಿಂದೆ ಅಧಿಕಾರವನ್ನ ಕಳೆದುಕೊಂಡಿದ್ದ ಬಿಜೆಪಿ ಮತ್ತೆ ಅಧಿಕಾರವನ್ನ ಹಿಡಿಯಲು ಶ್ರಮಿಸುತ್ತಿದ್ದೆ. ಇತ್ತೀಚಿಗೆ ಕಾಂಗ್ರೆಸ್ ತೊರೆದು ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿದ್ದ ಪಂಜಾಬ್ನ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿ ಜೊತೆಗೆ ತಾವು ಕೈ ಜೋಡಿಸಲು ಸಿದ್ದವಿರುವುದಾಗಿ ಹೇಳಿದ್ದರು. ಆದರೆ, ಕೃಷಿ ಕಾನೂನುಗಳ ಬಗ್ಗೆ ತಕರಾರು ತೆಗೆದಿದ್ದ ಅಮರೀಂದರ್ ಸಿಂಗ್ಗೆ ಈಗ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸುಲಭ ದಾರಿಯಾಗಿದೆ.
ಇತ್ತೀಚಿಗೆ ದೇಶದಲ್ಲಿ 30 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸ್ಥಿತಿ ತಲುಪಿತ್ತು. ಅದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆ ಮತ್ತು ರೈತರ ಪ್ರತಿಭಟನೆ ಎಂದೇ ಹೇಳಬಹುದು. ಬಿಜೆಪಿ ಮುಂದಿನ ದಿನಗಳಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಖಾಸಗೀಕರಣದ ಹೆಸರಿನಲ್ಲಿ ಸರ್ಕಾರಿ ಆಸ್ತಿ ಪಾಸ್ತಿಯನ್ನೆಲ್ಲಾ ಮಾರಿ ಜನಕಲ್ಯಾಣ ಯೋಜನೆಗಳಿಗೆ ಹಣ ವ್ಯಯಿಸಲು ಮುಂದಾಗಿದೆ.
ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ದೇಶಾದ್ಯಂತ ಕಾನೂನು ರೂಪಿಸುವಂತೆ ತಮ್ಮ ಅಂದೋಲನವನ್ನು ಒತ್ತಾಯಿಸಿ ತಮ್ಮ ಅಂದೋಲನವನ್ನು ಮುಂದುವರೆಸುವುದಾಗಿ ರೈತರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಅದನ್ನು ಅಂಗೀಕರಿಸದಿದ್ದರೆ ಮೋದಿ ಸರ್ಕಾರ ಇನ್ನು ಹೆಚ್ಚು ಒತ್ತಡವನ್ನ ಎದುರಿಸಲಿದೆ.
ಆರು ವರ್ಷಗಳ ಹಿಂದೆ ಭೂ ಮಸೂದೆ ಮತ್ತು ಈಗ ಕೃಷಿ ಕಾನೂನುಗಳ ಮೇಲೆ ಅದರ ಶರಣಾಗತಿ ಮೋದಿ ಸರ್ಕಾರದ ಅಖಿಲ್ಸ್ ಹೀಲ್ ಅನ್ನು ಬಹಿರಂಗಪಡಿಸಿದೆ. ಭಾರತದ ರೈತ ಸಮುದಾಯಗಳನ್ನು ಒಳಗೊಂಡಿರುವ ಮಧ್ಯವರ್ತಿ ಜಾತಿಗಳ ನಡುವೆ ಹಿಂದುತ್ವದ ಬ್ಯಾನರ್ ಅಡಿಯಲ್ಲಿ ತನ್ನ ಎಲ್ಲಾ ಘೋಷಿತ ಚುನಾವಣಾ ಬೆಂಬಲಕ್ಕಾಗಿ, ಕೃಷಿ ಕ್ಷೇತ್ರದಲ್ಲಿ ತನ್ನ ಪ್ರಸ್ತಾವಿತ ಸುಧಾರಣೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿಯು ಅಸಮರ್ಥವಾಗಿದೆ.
ಸದಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಸೂಟ್ ಬೂಟ್ ಕಿ ಸರ್ಕಾರ್ ಎಂದು ಟೀಕಿಸುತ್ತಲೇ ಬಂದಿದ್ದಾರೆ. ಮೋದಿ ಸರ್ಕಾರವು ಬಂಡವಾಳಶಾಹಿಗಳಿಂದ ಅಪಾರ ಪ್ರಮಾಣದ ಲಂಚ ಪಡೆದಿದ್ದಾರೆ ಎಂದು ಸದಾ ಆರೋಪಿಸುತ್ತಿರುತ್ತಾರೆ. ಅದರಿಂದ ಹೊರಬರುವ ಯತ್ನ ಇದಾಗಿದೆ ಎಂದು ಹೇಳಲಾಗುತ್ತಿದೆ.
ಕೃಷಿ ಕಾನೂನುಗಳ ರದ್ದತಿಯು ರೈತ ಸಮುದಾಯದವರನ್ನು, ವಿಶೇಷವಾಗಿ ಪಶ್ಚಿಮ ಯುಪಿಯ ಜಾಟ್ಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ಭಾವಿಸುತ್ತಿದೆ. 2013 ರಲ್ಲಿ ಮುಜಾಫರ್ನಗರದಲ್ಲಿ ನಡೆದ ಕೋಮು ಗಲಭೆಗಳ ನಂತರ ಪಶ್ಚಿಮ ಯುಪಿಯಲ್ಲಿ ಅದರ ಚುನಾವಣಾ ಯಶಸ್ಸಿಗೆ ಜಾಟ್ ಸಮುದಾಯದವರು ಬಿಜೆಪಿಗೆ ಪ್ರಮುಖರಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಇದು ಬಿಜೆಪಿಗೆ ಇದು ಯಾವ ರೀತಿ ಪರಿಣಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.