
ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸ್ಕೆಚ್ ವಿಚಾರದ ತನಿಖೆ ಚುರುಕುಗೊಂಡಿದೆ.. ಈ ಮಧ್ಯೆ ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ ಆಡಿಯೋ ವೈರಲ್ ಆಗಿದೆ.. ರಾಜೇಂದ್ರ ಆಪ್ತ ರಾಕಿ ಜೊತೆ ಪುಷ್ಪಾ ಎಂಬ ಮಹಿಳೆ ಸಂಭಾಷಣೆ ನಡೆಸಿರುವ ಇದಾಗಿದ್ದು, ಇದ್ರಲ್ಲಿ ಹಲವರ ಹೆಸರು ಉಲ್ಲೇಖಿಸಲಾಗಿದೆ. ಜೈಪುರ ಸೋಮ ಎಂಬಾತ ರಾಜೇಂದ್ರ ಕೊಲೆಗೆ ಸ್ಕೆಚ್ ಹಾಕಿದ್ದ ಅಂತ ಮಹಿಳೆ ಆಡಿಯೋದಲ್ಲಿ ಹೇಳಿದ್ದಾರೆ. 70 ಲಕ್ಷಕ್ಕೆ ಜೈಪುರ ಸೋಮ ಸುಪಾರಿ ಪಡೆದಿದ್ದಾನಂತೆ.. ಇದ್ರಂತೆ ರಾಜೇಂದ್ರ ಕೊಲೆಗೆ ತಂಡವನ್ನ ಕೂಡ ಕಟ್ಟುತ್ತಿದ್ನಂತೆ.. ಇದೇ ಆಡಿಯೋ ಆಧರಿಸಿ ಎಂಲ್ಸಿ ರಾಜೇಂದ್ರ ದೂರು ನೀಡಿದ್ದಾರೆ..
ಸದ್ಯ ಆಡಿಯೋ ಸಂಭಾಷಣೆ ನಡೆಸಿದ ಮಹಿಳೆ ಪುಷ್ಪ ಹಾಗೂ ಇನ್ನಿಬ್ಬರನ್ನ ತನಿಖಾ ತಂಡ ವಶಕ್ಕೆ ಪಡೆದಿದೆ. ಹತ್ಯೆಗೆ ಸುಪಾರಿ ಸಂಬಂಧ ಶಂಕಿತರನ್ನ ಪೊಲೀಸರು ಅರೆಸ್ಟ್ ಮಾಡಲಾಗಿದೆ. ಆಡಿಯೋದಲ್ಲಿ ಮಾತನಾಡಿದ್ದ ಬಗ್ಗೆ ವಿಚಾರಣೆ ನಡೆಸಲು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಎಮ್ ಎಲ್ ಸಿ ರಾಜೇಂದ್ರ ಹತ್ಯೆ ಸುಫಾರಿ ಆಡಿಯೋ ಸ್ಪೋಟ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ನಾನು ರಾಜೇಂದ್ರರ ವಿಚಾರವಾಗಿ ಆಗಲಿ, ರಾಜಣ್ಣನವರ ವಿಚಾರವಾಗಿ ಆಗಲಿ ಪ್ರತಿಕ್ರಿಯೆ ನೀಡಲ್ಲ.. ಯಾಕೆಂದರೆ ಅದು ತನಿಖೆಯ ಹಂತದಲ್ಲಿ ಇದೆ.. ಹೀಗಾಗಿ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ ಹೋಂ ಮಿನಿಸ್ಟರ್ ಪರಮೇಶ್ವರ್. ಈಗಾಗಲೇ ತನಿಖೆ ಟೀಮ್ ಸೆಟಪ್ ಆಗಿದೆ. ಸ್ಥಳೀಯವಾಗಿ ಟೀಮ್ ಸೆಟಪ್ ಆಗಿದೆ.. ಅದು ಮುಗಿದ ಬಳಿಕ ಅವರು ನೀಡಿದ ವರದಿ ಬಳಿಕ ಅಗತ್ಯ ಬಿದ್ರೇ ಸಿಐಡಿನೋ ಎಸ್ಐಟಿನೋ ತೀರ್ಮಾನ ಮಾಡ್ತಾರೆ. ಈಗಾಗಲೇ ಒಂದು ಟೀಮ್ ಸೆಟಪ್ ಮಾಡಿದ್ದಾರೆ. ಆ ಟೀಮ್ ಬಂದು ತನಿಖೆ ಮಾಡಿಕೊಂಡು ಹೋಗ್ತಾರೆ..
ಯಾವುದೇ ವಿಚಾರ ಇದ್ದರೂ ತನಿಖೆ ಮಾಡುವವರ ಗಮನಕ್ಕೆ ಬರಬೇಕು.. ಇದರಲ್ಲಿರುವ ಸತ್ಯಾಸತ್ಯತೆ ಬಗ್ಗೆ ತಿಳಿಯಬೇಕು.. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡ್ತಾರೆ.. ನಾನು ಈ ಬಗ್ಗೆ ಹೆಚ್ಚೆನೂ ಹೇಳಲ್ಲ. ತನಿಖೆ ತಂಡದ ಹೆಸರು ಗೊತ್ತಿಲ್ವಾ, ಅವರು ಘೋಷಣೆ ಮಾಡಿಲ್ವಾ..? ಘೋಷಣೆ ಮಾಡಿದ ಬಳಿಕ ನಿಮಗೆ ಯಾರು ಅಂತಾ ತಿಳಿಯಲಿದೆ.. ಅನೌನ್ಸ್ ಮಾಡೊವರೆಗೂ ಗೊಂದಲ, ಅನೌನ್ಸ್ ಮಾಡಿದ ಬಳಿಕ ಗೊಂದಲ ಇರಲ್ಲ.. ಇಂದು ಅಥವಾ ನಾಳೆ ಅನೌನ್ಸ್ ಆಗುತ್ತೆ, ಆಗಿರಬೇಕು ಅಂತಾ ಅಂದುಕೊಂಡಿದ್ದೇನೆ.

ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರವಾಗಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಹತ್ಯೆಗೆ ಸುಪಾರಿ ನೀಡಿರೋದು ಬಹಳ ಗಂಭೀರ ವಿಚಾರ. ತನಿಖೆ ಮಾಡಿ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜಣ್ಣ ಕೂಡ ಹನಿಟ್ರ್ಯಾಪ್ ಬಗ್ಗೆ ದೂರು ಕೊಟ್ಟಿದ್ದಾರೆ. ಮಾಹಿತಿ ಸಂಗ್ರಹ ಆಗಿ ಎಲ್ಲ ವಿಚಾರ ಹೊರ ಬರಲೇಬೇಕು. ಪರಂ-ರಾಜಣ್ಣ ಸ್ನೇಹಿತರು. ಒಳ್ಳೆ ರೀತಿಯಲ್ಲಿ ತನಿಖೆ ನಡೆಯಲಿದೆ ಅಂತ ಹೇಳಿದ್ರು

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜೇಂದ್ರ ರಾಜಣ್ಣ ಕೊಲೆಗೆ ಸುಫಾರಿ ಕೊಟ್ಟಿರುವ ವಿಚಾರ ಬಹಳ ಗಂಭೀರವಾದ ವಿಷಯ. ತನಿಖೆ ಮಾಡಿ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜಣ್ಣ ಕೂಡ ಹನಿಟ್ರ್ಯಾಪ್ ಬಗ್ಗೆ ದೂರು ಕೊಟ್ಟಿದ್ದಾರೆ. ಮಾಹಿತಿ ಸಂಗ್ರಹ ಆಗಿ ಎಲ್ಲ ಹೊರ ಬರಲೇಬೇಕು. ಪರಮೇಶ್ವರ್ – ರಾಜಣ್ಣ ಬಹಳ ಒಳ್ಳೆ ಬಾಂಧವ್ಯ ಇದೆ. ಅವರಿಬ್ಬರೂ ಬೆಂಚ್ ಮೇಟ್ಸ್ ಕೂಡ. ಹೀಗಾಗಿ ಒಳ್ಳೆಯ ತನಿಖೆಯೇ ಆಗುತ್ತದೆ ಎಂದಿದ್ದಾರೆ.







