ನಮ್ಮ ನಗು ಹಾಗೂ ಅಂದವನ್ನು ಹೆಚ್ಚು ಮಾಡುವಲ್ಲಿ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ..ನಾವು ನಕ್ಕಾಗ ಜನ ನೋಡುವುದು ನಮ್ಮ ಹಲ್ಲುಗಳನ್ನು.ನಮ್ಮ ಹಲ್ಲುಗಳು ಸ್ವಚವಾಗಿ ಇರಬೇಕು. ಇಲ್ಲವಾದಲ್ಲಿ ಹಳದಿ ಅಥವಾ ಕೆಂಪಾಗುತ್ತದೆ..ಮಾತ್ರವಲ್ಲದ ಹುಳುಕಾಗುವ ಸಾಧ್ಯತೆ ಕೂಡ ಹೆಚ್ಚಿದೆ..ಹಾಗಿದ್ರೆ ಗಟ್ಟಿಮುಟ್ಟಾದ ಹಲ್ಲು ನಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ.
- ದಿನಕ್ಕೆ ಎರಡು ಬಾರಿ ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲುಗಳು ಸ್ವಚ್ಛವಾಗಿರುತ್ತವೆ ಹಾಗೂ ಹುಳುಕು ಆಗುವುದಿಲ್ಲ.
- ಆಹಾರ ಸೇವಿಸಿದ ಬಳಿಕ ನಿಮ್ಮ ಹಲ್ಲುಗಳ ಮಧ್ಯೆ ಆಹಾರದ ಗಣಗಳಿದ್ರೆ ಅವುಗಳನ್ನ ತೆಗೆದುಹಾಕಿ ಆದ್ರೆ ಯಾವುದೇ ಕಾರಣಕ್ಕೂ ಪಿನ್ನನ್ನ ಬಳಸಬೇಡಿ.
- ಅತಿಯಾಗಿ ಸ್ವೀಟ್ಸ್ , ಚಾಕಲೇಟ್ಸ್ , ಸಕ್ಕರೆ ಅಥವಾ ಸಿಹಿ ಪಾನ್ಯಗಳನ್ನ ಸೇವಿಸುವುದರಿಂದ ದಂತಕ್ಕೆ ಹಾನಿಯಾಗುತ್ತದೆ ಹಾಗಾಗಿ ನಿಯಮಿತವಾಗಿ ಸೇವಿಸಿ.
- ಕೆಲವರಿಗೆ ತಂಬಾಕು ಸೇವನೆ ಅತಿಯಾಗಿರುತ್ತದೆ ಸಿಗರೇಟ್ ಅಥವಾ ಇನ್ನಿತರ ತಂಬಾಕು ಸೇವಿಸುವುದರಿಂದ ಬಾಯಿಯ ಕ್ಯಾನ್ಸರ್ ಬರುವುದರ ಜೊತೆಗೆ ಹಲ್ಲುಗಳು ಕೆಂಪಾಗುತ್ತದೆ ಹಳದಿ ಕಟ್ಟುತ್ತದೆ.
- ನಿಮ್ಮ ಡಯಟ್ ನಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಇರುವ ಆಹಾರವನ್ನು ಸೇವಿಸುವುದರಿಂದ ಮೂಳೆಗಳಿಗೆ ಹಾಗೂ ಹಲ್ಲಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
- ಹಲ್ಲುಗಳ ಜೊತೆಗೆ ನಾಲಿಗೆಯನ್ನು ಕೂಡ ಕ್ಲೀನ್ ಮಾಡುವುದು ಒಳ್ಳೆಯ ಅಭ್ಯಾಸ ಇಲ್ಲವಾದಲ್ಲಿ ಬ್ಯಾಕ್ಟೀರಿಯಾ ಗಳಿಂದ ಸಾಕಷ್ಟು ತೊಂದರೆಗಳು ಆಗಬಹುದು.
- ಅಸಿಡಿಕ್ ಆಹಾರವನ್ನ ಹೆಚ್ಚಾಗಿ ಸೇವಿಸಬೇಡಿ ಇದರಿಂದ ನಿಮ್ಮ ದಂತಕವಚ ಸವೆಯಬಹುದು
- ನಿಮ್ಮ ಹಲ್ಲುಗಳನ್ನ ಉಪಕರಣಗಳಾಗಿ ಬಳಸುವುದನ್ನ ನಿಲ್ಲಿಸಿ. ಪ್ಯಾಕೇಜ್ ಗಳನ್ನು ಓಪನ್ ಮಾಡಲು ಉಗುರನ್ನ ಕಚ್ಚಲು, ಡಬ್ಬಿ ತೆರೆಯಲು ಇದರಿಂದ ನಿಮ್ಮ ಹಲ್ಲುಗಳು ಗಟ್ಟಿಯಾಗಿರುತ್ತದೆ.