ಅರಮನೆ ವಂಶಸ್ಥರ ವಿರುದ್ದ ಸಂಘರ್ಷಕ್ಕಿಳಿದ ರಾಜ್ಯ ಸರ್ಕಾರ, ಬೆಂಗಳೂರು ಪ್ಯಾಲೇಸ್ ರಸ್ತೆ ಟಿಡಿಆರ್ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಲು ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡಿದೆ. ಜೊತೆಗೆ 1997ರ ಮೂಲ ವ್ಯಾಜ್ಯದ ಮೇಲಿನ 2001ರ ಸುಪ್ರಿಂಕೋರ್ಟ್ ಆದೇಶ ಉಲ್ಲಂಘನೆ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ.

ಮಹಾರಾಜರ ಉತ್ತರಾಧಿಕಾರಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸರ್ಕಾರ ತೀರ್ಮಾನ ಮಾಡಿದೆ. ಜಾಗದ ಮಾಲೀಕತ್ವದ ವಿಚಾರದ ಬಗ್ಗೆ ಇನ್ನೂ ಅರ್ಜಿ ಇತ್ಯರ್ಥವಾಗಿಲ್ಲ. ವಿಶೇಷ ಕಾನೂನಿನ ಮೂಲಕ ಜಾಗವನ್ನ ಸ್ವಾಧೀನಕ್ಕೆ ಪಡೆಯಲಾಗಿದೆ. ಇದನ್ನ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಹೀಗಾಗಿ ಈ ಹಂತದಲ್ಲಿ ಟಿಡಿಆರ್ ನೀಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಜಾಗದ ಮಾಲೀಕತ್ವದ ಅರ್ಜಿ ಇತ್ಯರ್ಥವಾಗಬೇಕಿದೆ. ಹೀಗಾಗಿ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕ್ಯಾಬಿನೆಟ್ ನಿರ್ಣಯ ಮಾಡಿದೆ.

ಬೆಂಗಳೂರು ಅರಮನೆ ಸುತ್ತಲಿನ 15 ಎಕರೆ 17 ಗುಂಟೆ ಜಾಗ ಬಳಕೆಗೆ 3011 ಕೋಟಿ ಟಿಡಿಆರ್ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅದರ ಪರಿಹಾರಕ್ಕೂ ಮುನ್ನ 1997ರ ಮೂಲ ವ್ಯಾಜ್ಯ ಇತ್ಯರ್ಥ ಪಡಿಸಿ ಎಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅಲ್ಲದೆ ಮೂಲ ವ್ಯಾಜ್ಯದ ಅನ್ವಯ ಆ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ಇತ್ತು. ಆದರೆ ಅಲ್ಲಿ ಸಾಕಷ್ಟು ಕಟ್ಟಡ ನಿರ್ಮಾಣ ಆಗಿರುವುದರಿಂದ ಅವುಗಳ ತೆರವು ಮಾಡುವಂತೆ 2025ರ ಜನವರಿ 9 ರಂದು ಮೈಸೂರು ರಾಜರ ಉತ್ತರಾಧಿಕಾರಿಯವರಿಗೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ಅರಮನೆ ಜಾಗ ಸಂಪೂರ್ಣ ಸರ್ಕಾರಕ್ಕೆ ಸೇರಿದ್ದು.. ರಸ್ತೆ ಅಗಲೀಕರಣಕ್ಕೆ ಬಳಿಸಿಕೊಂಡಿರುವ ಭೂಮಿಗೆ ಯಾವುದೇ ಪರಿಹಾರ ಕೊಡ್ಬೇಕಿಲ್ಲ.. ಅರಮನೆ ಮೈದಾನದಲ್ಲಿ ಕಟ್ಟಿರುವ ಕಟ್ಟಡಗಳು ಅಕ್ರಮ ಆಗಿವ್ಎ.. ಮುಂದಿನ 15 ದಿನಗಳಲ್ಲಿ ಅನಧಿಕೃತ ಕಟ್ಟಡ ತೆರವಿಗೆ ನೋಟಿಸ್ ನೀಡಲಾಗಿದೆ. ಮದುವೆ ಮಂಟಪ ಸೇರಿದಂತೆ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ.. ರಾಜ್ಯ ಸರ್ಕಾರದಿಂದ ಈಗಾಗಲೇ ನೋಟಿಸ್ ಜಾರಿಯಾಗಿದೆ. ಜೊತೆಗೆ ರಾಜಮನೆತನದವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸೋಕು ಸರ್ಕಾರ ತೀರ್ಮಾಸಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.










