ಮಂಡ್ಯ ಮತ್ತುಮೈಸೂರು ಎರಡು ಜಿಲ್ಲೆಗಳ ಉಪ ಆಯುಕ್ತರು ನಡೆಸುವ ಭೂ ಒತ್ತುವರಿ ಆರೋಪದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವು ಬುಧವಾರ ಆದೇಶ ನೀಡಿದೆ.
ಸರ್ವೆ, ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಮುನೀಶ್ ಮೌದ್ಗಿಲ್ ಅವರ ಆದೇಶವನ್ನು ಸರ್ಕಾರವು ಹಿಂಪಡೆದಿದೆ ಎಂದು ಹೇಳಲಾಗಿದೆ.
ಸಾರಾ ಚೌಲ್ಟ್ರಿ ಸೇರಿ ಕೇರ್ಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯ, ದಟ್ಟಗಳ್ಳಿಯ ಸರ್ವೇ ನಂಬರ್ ಜಮೀನುಗಳ ಮೇಲೆ ಅಕ್ರಮ ಆರೋಪವಿದ್ದು ಸರ್ಕಾರ ಜಿಲಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ.
ಕಂದಾಯ ಇಲಾಖೆ ಹೊರಡಿಸಿರುವ ಹೊಸ ಆದೇಶದಲ್ಲಿ, ಮೈಸೂರು ಮತ್ತು ಮಂಡ್ಯ ಡಿಸಿಗಳಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಿದೆ. ಯಾವುದೇ ಕಾರಣಕ್ಕು ಅವರು ಕೆಲಸವನ್ನು ಬೇರೊಬ್ಬರಿಗೆ ನಿಯೋಜಿಸಬಾರದು ಎಂದು ಆದೇಶದಲ್ಲಿ ತಿಳಿಸಿದೆ.