ಶ್ರೀಲಂಕಾ ನೌಕಾಪಡೆಯು (Sri Lankan Navy) ಶನಿವಾರ ಆರು ಭಾರತೀಯ ಮೀನುಗಾರರನ್ನು (Indian fishermen) ಬಂಧಿಸಿ ಅವರ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಶನಿವಾರ ನಸುಕಿನಲ್ಲಿ ಜಾಫ್ನಾದಲ್ಲಿರುವ ಕೋವಿಲನ್ ಲೈಟ್‌ಹೌಸ್‌ನ ವಾಯುವ್ಯದ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಭಾರತೀಯ ಆರು ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಹೌದು, “ಶ್ರೀಲಂಕಾದಲ್ಲಿ ಮೀನುಗಳನ್ನು ಬೇಟೆಯಾಡುತ್ತಿದ್ದಾಗ ಆರು ಭಾರತೀಯ ಮೀನುಗಾರರನ್ನು ಮತ್ತವರ ಧೋವನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ. ಜಾಫ್ನಾದಲ್ಲಿರುವ ಕೋವಿಲನ್ ಲೈಟ್‌ಹೌಸ್‌ನ ವಾಯುವ್ಯದ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಭಾರತೀಯ ಆರು ಮೀನುಗಾರರನ್ನು ಬಂಧಿಸಲಾಗಿದೆ.
ಈ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಭಾರತದ ಕನಿಷ್ಠ 29 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು ಆರು ದೋಣಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 13 ರಂದು, ನೌಕಾಪಡೆಯು 12 ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ದೇಶದ ಪ್ರಾದೇಶಿಕ ನೀರಿನಲ್ಲಿ ಬೇಟೆಯಾಡಿದ ಆರೋಪದ ಮೇಲೆ ಎರಡು ಮೀನುಗಾರಿಕೆ ಟ್ರಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಫೆಬ್ರವರಿ 8 ರಂದು, 11 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು ಮೂರು ಮೀನುಗಾರಿಕೆ ಟ್ರಾಲರ್‌ಗಳನ್ನು (fishing trawlers) ವಶಪಡಿಸಿಕೊಂಡಿತ್ತು. ಫೆಬ್ರವರಿ 1 ರಂದು ಇಪ್ಪತ್ತೊಂದು ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (External Affairs Minister S Jaishankar) ಮತ್ತು ಶ್ರೀಲಂಕಾ ಕೌಂಟರ್ ಜಿ ಎಲ್ ಪೀರಿಸ್ (Sri Lankan counterpart G L Peiris) ನಡುವಿನ ಮಾತುಕತೆಯಲ್ಲಿ ಮೀನುಗಾರರ ಸಮಸ್ಯೆಯೂ ಪ್ರಸ್ತಾಪವಾಗಿದೆ.

ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡ ಹಲವಾರು ಘಟನೆಗಳು ನಡೆದಿವೆ.
ಪಾಕ್ ಜಲಸಂಧಿಯು ತಮಿಳುನಾಡು ಮತ್ತು ಶ್ರೀಲಂಕದ ನಡುವಿನಲ್ಲಿರು ಕಿರಿದಾದ ಜಲಸಂಧಿಯಾಗಿದ್ದು, ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕೆ ಕೇಂದ್ರವಾಗಿದೆ.






