• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಯಾವ ಕ್ಷಣವೂ ಅಪ್ಪಳಿಸಬಹುದು ಅಪಾಯಕಾರಿ ಸೌರ ಮಾರುತ!

ಪ್ರತಿಧ್ವನಿ by ಪ್ರತಿಧ್ವನಿ
July 12, 2021
in ದೇಶ
0
ಯಾವ ಕ್ಷಣವೂ ಅಪ್ಪಳಿಸಬಹುದು ಅಪಾಯಕಾರಿ ಸೌರ ಮಾರುತ!
Share on WhatsAppShare on FacebookShare on Telegram

ಸೂರ್ಯನಿಂದ ಹೊರಚಿಮ್ಮುವ ಶಕ್ತಿಶಾಲಿ ಸೌರ ಮಾರುತ ಇಂದು (ಸೋಮವಾರ) ಭೂಮಿಗೆ ಅಪ್ಪಳಿಸಲಿದೆ.

ADVERTISEMENT

ಭಾರೀ ಪ್ರಮಾಣದ ಶಾಖ ಮತ್ತು ಭಾರೀ ವೇಗದ ಈ ಸೌರ ಚಂಡಮಾರುತ ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಿದಾಗ, ಭೂಮಿಯ ಮೇಲೆ ದಿಢೀರ್ ತಾಪಮಾನ ಏರಿಕೆ, ಉಪಗ್ರಹ ಆಧಾರಿತ ವಿವಿಧ ಸೇವೆ, ತಾಂತ್ರಿಕತೆಗಳಲ್ಲಿ ಏರುಪೇರು, ವಿದ್ಯುತ್ ವ್ಯವಸ್ಥೆಯಲ್ಲಿ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮುಖ್ಯವಾಗಿ ಮೊಬೈಲ್, ಜಿಪಿಎಸ್, ಟಿವಿ ಮುಂತಾದ ಉಪಗ್ರಹ ಆಧಾರಿತ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಮತ್ತು ವಿದ್ಯುತ್ ವ್ಯವಸ್ಥೆಯಲ್ಲಿ ದಿಢೀರ್ ಏರುಪೇರು ಉಂಟಾಗುವ ಸಂಭವವಿದೆ ಎನ್ನಲಾಗಿದೆ.

ವಾಸ್ತವವಾಗಿ ಸೂರ್ಯನಿಂದ ಆಗಾಗ ಇಂಥ ಸೌರಮಾರುತಗಳ ಹೊರಚಿಮ್ಮುತ್ತಲೇ ಇರುತ್ತವೆ. ಆದರೆ ಕೆಲವು ಶಕ್ತಿಶಾಲಿ ಸೌರ ಮಾರುತಗಳು ಅಪರೂಪಕ್ಕೊಮ್ಮೆ ಭೂಮಿಯ ಆಯಸ್ಕಾಂತೀಯ ಕಕ್ಷೆಯ ವರೆಗೆ ತಲುಪುತ್ತವೆ. ಹಾಗೆ ಅಪರೂಪಕ್ಕೆ ಘಟಿಸುವ ವಿದ್ಯಮಾನಕ್ಕೆ ಈ ಸೋಮವಾರ ಸಾಕ್ಷಿಯಾಗಲಿದೆ.
ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಈ ಶಕ್ತಿಶಾಲಿ ಸೌರ ಮಾರುತ ತಲುಪಿದಾಗ ವಾತಾವರಣದಲ್ಲಿ ದಿಢೀರನೆ ತಾಪಮಾನ ಏರಿಕೆಯಾಗಬಹುದು, ಭೂಮಿಯ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಉಪಗ್ರಹಗಳ ಕಾರ್ಯಚಟುವಟಿಕೆ ಮೇಲೆ ಕೂಡ ಈ ಶಕ್ತಿಶಾಲಿ ಮಾರುತಗಳು ಪ್ರಭಾವ ಬೀರಬಹುದು. ಅಲ್ಲದೆ ಇವು ಭಾರಿ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಹೊತ್ತು ತರುವುದರಿಂದ ಭೂಮಿಯ ಮೇಲಿನ ವಿದ್ಯುತ್ ಗ್ರಿಡ್ ಗಳಲ್ಲಿ ದಿಢೀರನೆ ಬಾರಿ ವಿದ್ಯುತ್ ಪ್ರವಾಹ ಕೂಡ ಉಂಟಾಗಬಹುದು. ಇದರಿಂದಾಗಿ ಮೊಬೈಲ್ ಸಿಗ್ನಲ್, ಟಿವಿ ಸಿಗ್ನಲ್, ಜಿಪಿಎಸ್ ಸಿಗ್ನಲ್, ಇಂಟರ್ನೆಟ್ ಮತ್ತು ಮನೆಯ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಕಾರ್ಯದಲ್ಲಿ ವ್ಯತ್ಯಯವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಚಂಡಮಾರುತದೋಪಾದಿಯಲ್ಲಿ ಅತಿವೇಗದಲ್ಲಿ ಚಲಿಸುವುದರಿಂದ ಇವುಗಳನ್ನು ಸೌರ ಚಂಡಮಾರುತ ಎಂದೂ ಹೇಳುತ್ತಾರೆ. ನಾಸಾ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ ಸಾಮಾನ್ಯವಾಗಿ ಸೌರಮಾರುತಗಳ ವೇಗ ಗಂಟೆಗೆ ಕನಿಷ್ಠ 10 ಲಕ್ಷ ಮೈಲಿ ಕ್ರಮಿಸುವಷ್ಟು ಶಕ್ತಿಶಾಲಿ ಆಗಿರುತ್ತದೆ. ಸದ್ಯ ಭೂಮಿಯತ್ತ ಹೊರಟಿರುವ ಸೌರ ಚಂಡಮಾರುತವು ಪ್ರತಿ ಸೆಕೆಂಡಿಗೆ ಐದು ನೂರು ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿಯ ಆಯಸ್ಕಾಂತೀಯ ಕಕ್ಷೆಯ ಪ್ರವೇಶಿಸಿದಾಗ ಮೂಡುವ ಬೆಳಕಿನ ಚಿತ್ತಾರ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.

ಮುಖ್ಯವಾಗಿ ಈ ವಿದ್ಯಮಾನದ ಮೇಲೆ ಜಾಗತಿಕವಾಗಿ ವಿಜ್ಞಾನಿಗಳು ಕಣ್ಣಿಟ್ಟಿದ್ದು, ಜನಸಾಮಾನ್ಯರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಅತಿ ಬಿಸಿಯಾದ ಶಕ್ತಿಶಾಲಿ ಸೌರ ಮಾರುತ ಭೂಮಿಯ ಮೇಲೆ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಬಹುದು. ಭೂಮಿಯ ಹೊರವಲಯದ ವಾತಾವರಣ ದಿಢೀರ್ ಬಿಸಿ ಆಗಬಹುದು. ಉಪಗ್ರಹಗಳ ಚಟುವಟಿಕೆ ಮೇಲೆ ಪರಿಣಾಮ ಬೀರುವುದರಿಂದ ಜಿಪಿಎಸ್, ಮೊಬೈಲ್, ಟಿವಿ ಮತ್ತು ಇಂಟರ್ ನೆಟ್ ವ್ಯವಸ್ಥೆಗೆ ಹಾನಿಯಾಗಬಹುದು. ಭಾರೀ ವಿದ್ಯುತ್ ಪ್ರವಾಹದಿಂದಾಗಿ ವಿದ್ಯುತ್ ಗ್ರಿಡ್, ಟ್ರಾನ್ಸ್ಫಾರ್ಮರ್ ಗಳಿಗೂ ಹಾನಿಯಾಗಬಹುದು. ಅದರಿಂದಾಗಿ ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಕೂಡ ಅಪಾಯಕ್ಕೆ ಸಿಲುಕುವುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಸೋಮವಾರ ದಿನದ ಯಾವುದೇ ಕ್ಷಣದಲ್ಲಿ ಇಂಥ ವ್ಯತ್ಯಯ, ಬದಲಾವಣೆಗಳು ಆಗಬಹುದು ಎಂದು ಎಚ್ಚರಿಸಲಾಗಿದೆ.

Previous Post

ಸ್ಟಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಕೊಲ್ಲಲಾಯಿತು: ಕೇಂದ್ರ ಸರ್ಕಾರದ ವಿರುದ್ಧ ಸಂಜಯ್ ರಾವುತ್ ಗಂಭೀರ ಆರೋಪ

Next Post

ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ: ಡಿಸಿಎಂ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ: ಡಿಸಿಎಂ

ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ: ಡಿಸಿಎಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada