ಬೆಂಗಳೂರಿನ (Bengaluru) ರಾಜರಾಜೇಶ್ವರಿ ನಗರ (Rajarajeshwari nagar) ಕ್ಷೇತ್ರದ BJP ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣ ಸಂಬಂಧ, ಅದು ಶಾಸಕರದ್ದೇ ಧ್ವನಿ ಹೌದಾ ಅಲ್ವಾ ಎಂದು ದೃಢೀಕರಿಸಲು ಆ ಆಡಿಯೋ ರೆಕಾರ್ಡ್ ಅನ್ನು FSLಗೆ ಕಳುಹಿಸಲಾಗಿತ್ತು. ಈ ಆಡಿಯೋ ಮಾದರಿಯ ವರದಿ ಲಭ್ಯವಾಗಿದ್ದು, ಈ ಆಡಿಯೋದಲ್ಲಿ ಕೇಳಿಬಂದಿರುವುದು ಬಿಜೆಪಿ ಶಾಸಕ ಮುನಿರತ್ನ (MLA muniratna) ಅವರದ್ದೇ ಧ್ವನಿ ಎನ್ನುವುದು ಲ್ಯಾಬ್ ರಿಪೋರ್ಟ್ ನಲ್ಲಿ ದೃಢವಾಗಿದೆ.
ಹೀಗಾಗಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಈ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಪೊಲೀಸರು ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಶಾಸಕ ಮುನಿರತ್ನ ತಮ್ಮ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್ ವ್ಯೂ ಹಿಂದೆ ದೂರು ನೀಡಿದ್ದರು.ಇದೇ ಪ್ರಕರಣದಲ್ಲಿ ಮುನಿರತ್ನ ಅವರನ್ನು ಕೋಲಾರದ ಸಮೀಪ ಪೊಲೀಸರು ಬಂಧಿಸಿದ್ದರು.