ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಮಂಜು ಮೋಕ್ಷಿತ ಹಾಗೂ ಗೌತಮಿ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದುಲು ಬಿಗ್ ಬಾಸ್ ನೀಡಿದ 9ನೇ ವಾರದ ಟಾಸ್ಕ್ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಈ ಮೂವರು ಕೂಡ ಪ್ರತಿಯೊಂದು ವಿಚಾರವನ್ನ ತುಂಬಾನೇ ಪರ್ಸನಲ್ ಆಗಿ ತೆಗೆದುಕೊಂಡು ವಾದ ವಿವಾದಗಳನ್ನು ಹೆಚ್ಚಾಗಿ ಮಾಡಿದ್ದಾರೆ.
ಇವರ ಜಗಳದಿಂದ ಇತರೆ ಪ್ರಜೆಗಳಿಗೆ ಅಂದ್ರೆ ಕಂಟೆಸ್ಟೆಂಟ್ ಗಳಿಗೂ ಕೂಡ ಕಷ್ಟವಾಯಿತು. ಹಾಗೂ ಹೊರಗಡೆ ಬಿಗ್ ಬಾಸ್ ನೋಡುತ್ತಿದ್ದ ಪ್ರೇಕ್ಷಕರಿಗೂ ಇವರೆಲ್ಲರ ನಡವಳಿಕೆ ಬೇಸರವನ್ನು ಮೂಡಿಸಿತು. ಹಾಗಾಗಿ ವೀಕೆಂಡ್ ಎಪಿಸೋಡ್ ಗೋಸ್ಕರ ಸಾಕಷ್ಟು ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ರು. ಸದ್ಯ ಈ ವಿಚಾರವಾಗಿ ಕಿಚ್ಚ ಸುದೀಪ್ ಅವರು ಈ ಮೂರು ಸ್ನೇಹಿತರಿಗೆ ಚಳಿ ಬಿಡಿಸಿರೋದು ಪ್ರೇಕ್ಷಕರಿಗೂ ಖುಷಿ ನೀಡಿದೆ.
ಕಿಚ್ಚ ಮಂಜು ಅವರಿಗೆ ಎಲ್ಲಾ ಪ್ರಜೆಗಳನ್ನು ನೋಡಿದ ರೀತಿ ಗೌತಮಿ ಅವರನ್ನು ನೀವು ಯಾಕೆ ನೋಡಲಿಲ್ಲ ಅವರು ಪ್ರಜೆಯಾಗಿದ್ದರೋ ಅಥವಾ ಗೌತಮಿಯಾಗಿದ್ದರು ಎಂಬ ಪ್ರಶ್ನೆಯನ್ನ ಕೇಳ್ತಾರೆ.
ಇನ್ನು ಮುಖ್ಯವಾಗಿ ಸಾಕಷ್ಟು ಜನ ಕಾಯ್ತಾ ಇರೋದು ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಎಂದು ಒಂದಿಷ್ಟು ಜನರು ಮೋಕ್ಷಿತ ಅವರ ಹೆಸರನ್ನ ವಹಿಸಿದ್ರೆ ಇನ್ನು ಕೆಲವರು ಧನರಾಜಗೆ ಸಿಗಬೇಕು ಈ ವಾರ ಅವರ ಪರ್ಫಾರ್ಮೆನ್ಸ್ ಅದ್ಬುತವಾಗಿತ್ತು ಎಂದಿದ್ದಾರೆ.