ಬಾದಾಮಿ ವಿಧಾನಸಭಾ ಕ್ಷೇತ್ರ(Badami constituency).ಬಾಗಲಕೋಟೆಯ ಈ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಜನರಿಗೆ ಬಹಳ ಚೆನ್ನಾಗಿ ನೆನಪಿದೆ.ಯಾಕಂದ್ರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯರನ್ನು (Cm siddaramaiah) ರಾಜಕೀಯವಾಗಿ ಕೈ ಹಿಡಿದ ಕ್ಷೇತ್ರ .
ಹೌದು ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡರ (GT Devegowda) ವಿರುದ್ಧ ಸೋಲನುಭವಿಸಿದಾಗ ರಾಜಕೀಯ ಜೀವನಕ್ಕೆ ಪುನರ್ಜನ್ಮ ನೀಡಿದ ಬಾದಾಮಿ ಮತಕ್ಷೇತ್ರವನ್ನ ಇದೀಗ ಸಿದ್ದು ಮರೆತಿದ್ದಾರೆ ಎಂದು ಕ್ಷೇತ್ರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದಾಗ ಸಿದ್ದರಾಮಯ್ಯ, ಪ್ರತಿವರ್ಷ ಬೇಸಿಗೆ ಆರಂಭಕ್ಕೂ ಮೊದಲೇ ಫೆಬ್ರುವರಿಯಲ್ಲಿ ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ 1 ಟಿಎಂಸಿ ನೀರು ಬಿಡುಗಡೆಯಾಗುವಂತೆ ಗಮನ ವಹಿಸುತ್ತಿದ್ದರು.
ಆದರೆ ಈ ಬಾರಿ ಮಾರ್ಚ್ ತಿಂಗಳು ಅಂತ್ಯವಾದ್ರೂ ನೀರು ಕಾಣದ ಮಲಪ್ರಭೆಗೆ ಇನ್ನಾದರೂ ನೀರು ಹರಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ & ಹುನಗುಂದ ತಾಲೂಕಿನ ಜನ ಆಗ್ರಹಿಸಿದ್ದಾರೆ.

ನಿಮ್ಮನ್ನು ರಾಜಕೀಯವಾಗಿ ಜೀವಂತವಾಗಿ ಇರಿಸಿದ ಬಾದಾಮಿಯನ್ನು ಸಂಪೂರ್ಣ ನಿರ್ಲಕ್ಷಿಸಿ, ಈಗ ಇತ್ತ ತಿರುಗಿ ಕೂಡ ನೋಡ್ತಿಲ್ಲ ಎಂದು ಮತದಾರರು ಆಕ್ರೋಧ ವ್ಯಕ್ತಪಡಿಸಿದ್ದಾರೆ.ಮಲಪ್ರಭಾ ನದಿ ತೀರದ 42 ಹಳ್ಳಿಗಳ ಜನ ಜಾನುವಾರುಗಳಿಗೆ ನೀರಿನ ಭವಣೆ ಉಂಟಾಗಿದೆ. ಬಾದಾಮಿ ಕ್ಷೇತ್ರವನ್ನ ದತ್ತು ಪಡೆದು ಋಣ ತೀರಸ್ತೀನಿ ಎಂದಿದ್ದ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿರೋದಕ್ಕೆ ಮತದಾರರು ಬೇಸರ ವ್ಯಕ್ತಪಡಿಸ್ತಿದ್ದಾರೆ.