ಮೇಕಪ್(makeup) ಅಂತ ಹೇಳಿದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ ಪ್ರತಿಯೊಬ್ರು ಕೂಡ ಮೇಕಪ್ ಮಾಡಿಕೊಳ್ಳುತ್ತಾರೆ ,ಆದರೆ ಕೆಲವರು ಸಿಂಪಲ್ ಮೇಕಪ್ ಮಾಡಿಕೊಳ್ತಾರೆ, ಇನ್ನು ಕೆಲವರು ಹೆವಿ ಮೇಕಪ್ ಲುಕ್ ಅಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಮೇಕಪ್ ನಿಂದ ತ್ವಚೆ ಎಷ್ಟು ಅದ್ಭುತವಾಗಿ ಕಾಣಿಸುತ್ತದೆಯೋ,ಅಷ್ಟೆ ಸೈಡ್ ಎಫೆಕ್ಟ್ ಕೂಡ ಇದೆ.ತ್ವಚೆಗೆ ಎಷ್ಟು ಹಾನಿ ಎಂಬವುದರ ಮಾಹಿತಿ ಹೇಗಿದೆ.

ಮೊಡವೆ
ಪ್ರತಿದಿನ ಮೇಕಪ್ ಅನ್ನು ಬಳಸುವುದರಿಂದ ಮೊಡವೆಗಳು ಹೆಚ್ಚಾಗಬಹುದು. ಕೆಲವರಿಗೆ ಇದೇ ಮೇಕಪ್ ಇಂದ ಸೂಜಿ ಚುಚ್ಚಲು ಜಾಗವಿಲ್ಲದಷ್ಟು ಮೊಡವೆಗಳು ಆಗುತ್ತದೆ.ಹಾಗೂ ಕಲೆಗಳು ಉಳಿಯುತ್ತದೆ..ಆ ಕಲೆಗಳನ್ನು ಮುಚ್ಚಲು ಮತ್ತಷ್ಟು ಮೇಕಪ್ ಬಳಸಬೇಕಾಗುತ್ತದೆ.

ಇರಿಟೇಶನ್
ಕೆಲವರದ್ದು ತುಂಬಾನೇ ಸೆನ್ಸಿಟಿವ್ ಸ್ಕಿನ್ ಆಗಿರುತ್ತದೆ ಇಂಥವರು ಅತಿಯಾಗಿ ಮೇಕಪ್ ಅನ್ನು ಬಳಸುವುದರಿಂದ ಮುಖದಲ್ಲಿ ಕೆಂಪು ಗುಳ್ಳೆಗಳು ತುರಿಕೆ ಹಾಗೂ ಇರಿಟೇಶನ್ ಹೆಚ್ಚಾಗುತ್ತದೆ. ಸಾಫ್ಟ್ ಅಥವಾ ಸೆನ್ಸಿಟಿವ್ ಸ್ಕಿನ್ ಇದ್ದವರು ಈ ಪ್ರಾಡಕ್ಟ್ ನಮ್ಮ ತ್ವಚೆಗೆ ಸೆಟ್ ಆಗುತ್ತದೆ ಇಲ್ಲವೋ ಎಂಬುದನ್ನು ನೋಡಿಕೊಂಡು ಬಳಸುವುದು ಉತ್ತಮ.
ತ್ವಚೆ ಒಣಗುತ್ತದೆ
ಪ್ರತಿದಿನ ಮೇಕಪ್ ಬಳಸುವುದರಿಂದ ತ್ವಚೆಯಲ್ಲಿರುವ ನ್ಯಾಚುರಲ್ ಆಯಿಲನ್ನು ಹೀರಿಕೊಳ್ಳುತ್ತದೆ ಹಾಗು ಸ್ಕಿನ್ ಡ್ರೈ ಆಗುತ್ತದೆ.. ಅದರಲ್ಲು ಡ್ರೈ ಸ್ಕಿನ್ ಇದ್ದವರು ಮೇಕಪ್ ಬಳಸುವ ಮುನ್ನ ಮಾಯಿಶ್ಚರೈಸರ್ ಹಚ್ಚಬೇಕು ಮೇಕಪ್ ತೆಗೆದ ನಂತರವೂ ಕೂಡ ಮಾಯಿಶ್ಚರೈಸರ್ ಬಳಸುವುದು ಉತ್ತಮ.

ತ್ವಚೆ ಸುಕ್ಕುಗಟ್ಟುವುದು
ಕೆಲವರಿಗೆ ವಯಸ್ಸು ಚಿಕ್ಕದಾಗಿದ್ರು ಕೂಡ ಸ್ಕಿನ್ ಸುಕ್ಕುಗಟ್ಟಿರುತ್ತದೆ .ಫೈನ್ ಲೈನ್ ಕಾಣಿಸುತ್ತದೆ ಇದಕ್ಕೆ ಪ್ರಮುಖ ಕಾರಣ ಪ್ರತಿದಿನ ಬಳಸುವ ಅತಿಯಾದ ಮೇಕಪ್..ಹೌದು ಮೇಕಪ್ ಚರ್ಮವನ್ನು ಎಳೆದು ಬಿಗಿಯಾಗಿಸುತ್ತದೆ ..ಎಳೆಯುವಿಕೆಯಿಂದಲೂ ಕಲೆಗಳು ಕಾಣಿಸಿಕೊಳ್ಳುತ್ತವೆ.