ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶದನ ವೇಳೆ ವಿಧಾನ ಪರಿಷತ್ನಲ್ಲಿ ಮಾತಿನ ವಾಕ್ಸಮರ ನಡೆದಿತ್ತು. ಡಿಸೆಂಬರ್ 19ರಂದು ನಡೆದಿದ್ದ ಮಾತಿನ ಚಕಮಕಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಪರಿಷತ್ ಸದಸ್ಯ ಸಿ.ಟಿ ರವಿ ವೈಯಕ್ತಿಕ ನಿಂದನೆ ಮಾಡಿಕೊಂಡಿದ್ದರು. ಆ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನ ಅನ್ವಯ ಸಿ.ಟಿ ರವಿ ಬಂಧನವೂ ಆಗಿತ್ತು. ಆ ಬಳಿಕ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ರಿಂದ ಸಿ.ಟಿ ರವಿಗೆ ರಿಲೀಫ್ ಸಿಕ್ಕಿತ್ತು. ಆ ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿತ್ತು. ಹೀಗಾಗಿ ಸಿ.ಟಿ ರವಿ ವಿಚಾರಣೆಗೆ ಹಾಜರಾಗಿದ್ದರು.
![](https://pratidhvani.com/wp-content/uploads/2025/01/WhatsApp-Image-2025-01-09-at-17.51.26-1024x565.jpeg)
ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳಿಂದ ನೋಟಿಸ್ ಜಾರಿ ಆದ ಹಿನ್ನಲೆಯಲ್ಲಿ ಇಂದು ಸಿ.ಟಿ ರವಿ ವಿಚಾರಣೆಗೆ ಹಾಜರಾಗಿದ್ದರು. ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ಹಾಜರಾದ ಎಂಎಲ್ಸಿ ಸಿ.ಟಿ ರವಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ವಿಧಾನ ಪರಿಷತ್ ಶಾಸಕರಾದ ಸಂಕನೂರ್ ಹಾಗೂ ಡಿ.ಎಸ್ ಅರುಣ್ ದೂರು ಕೊಟ್ಟಿದ್ದರು. ಇಬ್ಬರು ಕೊಟ್ಟಿದ್ದ ದೂರಿನ ಮೇರೆಗೆ ದೂರು ದಾಖಲಾಗಿತ್ತು. ಹಿರೇಬಾಗೇವಾಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂದ ಮಾಹಿತಿ ಪಡೆಯಲು ಸಿ.ಟಿ ರವಿಗೆ ನೋಟಿಸ್ ಕೊಟ್ಟಿದ್ದರು ಎನ್ನಲಾಗಿದೆ.
![](https://pratidhvani.com/wp-content/uploads/2025/01/deccanherald_2024-12-24_oewv3l7x_BeFunky-collage-1.avif)
ಡಿವೈಎಸ್ಪಿ ಕೇಶವಮೂರ್ತಿ ಸಿ.ಟಿ ರವಿಗೆ ನೋಟಿಸ್ ಕೊಟ್ಟಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿದ್ದ ಸಿ.ಟಿ ರವಿಯನ್ನು ಸತತ ಒಂದು ಗಂಟೆಗಳ ಕಾಲ ವಿಚಾರಣೆ ಮಾಡಿ, ಹೇಳಿಕೆ ದಾಖಲಿಸಿಕೊಳ್ಳಲಾಯ್ತು. ವಿಚಾರಣೆ ಬಳಿಕ ಮಾತನಾಡಿದ ಸಿ.ಟಿ ರವಿ, ನನ್ನ ಮೇಲೆ ಸುವರ್ಣ ಸೌಧದ ಮೊಗಸಾಲೆಯಿಂದ ಪರಿಷತ್ ಕಚೇರಿಗೆ ಹೋಗುವಾಗ ಹಲ್ಲೆ ಮಾಡಲು ಬಂದಿದ್ರು. ಸಭಾಪತಿಗಳಿಗೆ ದೂರು ನೀಡಲಾಗಿತ್ತು. ಅದರ ಬಗ್ಗೆ ವಿಚಾರಣೆ ಇತ್ತು. ಯಾರು ಹಲ್ಲೆ ಮಾಡಿದ್ರು ಅನ್ನೋ ಮಾಹಿತಿ ನೀಡಿದ್ದೇನೆ. ಮೊದಲು ಪಶ್ಚಿಮ ದ್ವಾರದ ಪೋಟಿಕೋ ಬಳಿ ಹಲ್ಲೆ ಮಾಡಿದ್ರು. ವಿಧಾನಸಭೆ ವಿಪಕ್ಷ ನಾಯಕರ ಜೊತೆ ಚರ್ಚೆ ಮುಗಿಸಿ ಹೊರಬರುವಾಗ ಎರಡನೇ ಬಾರಿ ಹಲ್ಲೆ ಆಯ್ತು ಎಂದಿದ್ದಾರೆ.
![](https://pratidhvani.com/wp-content/uploads/2025/01/c-t-ravi-left-laxmi-hebbalkar-right.jpg)
ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ದಾಖಲೆಗಳು ಕೂಡ ಇದೆ. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ, ಚನ್ನರಾಜ್ ಹಟ್ಟಿ ಹೊಳಿ ಪಿಎ ಇಬ್ಬರ ಹೆಸರು ಹೇಳಿದ್ದೇನೆ. ಸಿಸಿ ಕ್ಯಾಮೆರಾ ಫೂಟೇಜ್ ನೀಡಿದ್ರೆ ಗುರ್ತಿಸೋದಾಗಿಯೂ ಹೇಳಿದ್ದೇನೆ. ವಿಧಾನಪರಿಷತ್ನಲ್ಲಿ ಆಗಿದೆ ಅಂತ ದೂರು ನೀಡಿದ್ದಾರೆ. ವಿಧಾನಪರಿಷತ್ನಲ್ಲಿ ಅಧಿಕಾರ ಇರೋದು ಸಭಾಪತಿಗಳಿಗೆ ಮಾತ್ರ. ಅವರು ಕ್ರಮ ಕೈಗೊಳ್ಳಲಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ಸಲ್ಲಿಸಿದ್ದೇನೆ. ಇವತ್ತು ಜನವರಿ 9, ಇವತ್ತಿಗೆ ಇಪ್ಪತ್ತು ದಿನಗಳಾದ್ರೂ ಕ್ರಮ ಆಗಿಲ್ಲ. ನಾನು ಖಾನಾಪುರದಲ್ಲಿ ದೂರು ನೀಡಿದ್ದೇನೆ ಅಂತಾ ಕಿಡಿಕಾರಿದ್ದಾರೆ.