ಲಿಪ್ಸ್ಟಿಕ್ ಅಂದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ ಹೆಚ್ಚು ಜನ ಮಹಿಳೆಯರು ತುಂಬಾ ಇಷ್ಟ ಪಟ್ಟು ಲಿಪ್ಸ್ಟಿಕ್ಕನ್ನು ಹಚ್ಚಿಕೊಳ್ಳುತ್ತಾರೆ. ಅದರಲ್ಲಿ ಕೆಲವೊಂದು ಪ್ರತಿ ದಿನ ಲಿಪ್ಸ್ಟಿಕ್ ಅನ್ನ ಮಿಸ್ ಮಾಡೋದೇ ಇಲ್ಲ. ಮಹಿಳೆಯರೇನೋ ಲಿಪ್ಸ್ಟಿಕ್ ಹಚ್ಚುವುದು ಸರಿ ಆದರೆ ಕೆಲವು ಪುಟಾಣಿ ಮಕ್ಕಳು ತಮ್ಮ ತಾಯಂದಿರು ಲಿಪ್ಸ್ಟಿಕ್ ಹಚ್ಚುವುದನ್ನು ನೋಡಿ ನಮಗೂ ಹಚ್ಚಿ ಅಂತ ಹಠ ಮಾಡ್ತಾರೆ. ಈ ಪುಟಾಣಿಗಳ ರಗಳೆಯನ್ನ ತಡೆಯೋಕೆ ಆಗದೆ ತಾಯಂದಿರು ಮಕ್ಕಳಿಗೆ ಲಿಪ್ಸ್ಟಿಕ್ ಹಚ್ಚಿ ಬಿಡ್ತಾರೆ.ಇದರಿಂದ ತುಂಬಾ ಸಾಫ್ಟ್ ಮತ್ತು ಸೆನ್ಸಿಟಿವ್ ಆಗಿರುವ ಮಕ್ಕಳ ತುಟಿಗೆ ತೊಂದರೆ ಆಗುತ್ತದೆ..ಏನು ತೊಂದರೆ ಅನ್ನುವ ಮಾಹಿತಿ ಹೀಗಿದೆ

ಚರ್ಮಕ್ಕೆ ಹಾನಿ
ಮಕ್ಕಳ ಚರ್ಮ ತುಂಬಾನೇ ಸಂಸಿಟಿವಾಗಿರುತ್ತದೆ ಅದರಲ್ಲೂ ತುಟಿ ತುಂಬಾನೇ ಸಾಫ್ಟ್ ಆಗಿ ಇರೋದ್ರಿಂದ ಹಾರ್ಸ್ ಕೆಮಿಕಲ್ಸ್ ತುಟಿಯ ಮೇಲೆ ಬಿದ್ದಾಗ. ಇರಿಟೇಶನ್ ಹೆಚ್ಚಾಗುತ್ತದೆ ಮಾತ್ರವಲ್ಲದೇ ಕೆಲವು ಮಕ್ಕಳಿಗೆ ತುಟಿಯ ಸುತ್ತ ಕೆಂಪಾಗುತ್ತದೆ ಹಾಗೂ ತುರಿಕೆ ಕೂಡ ಶುರುವಾಗುತ್ತದೆ.

ಅಲರ್ಜಿ
ಮಕ್ಕಳು ಹಠ ಮಾಡುತ್ತಾರೆಂದು ಲಿಪ್ಸ್ಟಿಕ್ ಹಚ್ಚುವುದರಿಂದ ಅದರಲ್ಲಿ ರಾಸಾಯನಿಕದಿಂದ ತುಟಿಯ ಸುತ್ತ ಗುಳ್ಳೆಗಳಾಗುವ ಚಾನ್ಸಸ್ ಜಾಸ್ತಿ ಇರುತ್ತದೆ. ಹಾಗೂ ಕೆಲವು ಮಕ್ಕಳಿಗೆ ಅಲರ್ಜಿಕ್ ರಿಯಾಕ್ಷನ್ ಕೂಡ ಹೆಚ್ಚಿರುತ್ತದೆ.
ಪಾಯಿಸನ್
ಊಟ ತಿಂಡಿ ಮಾಡುವಾಗ ಲಿಪ್ಸ್ಟಿಕ್ ಕೂಡ ಬಾಯೊಳಗೆ ಹೋಗುತ್ತದೆ, ಹಾಗೂ ಕೆಲವು ಲಿಪ್ಸ್ಟಿಕ್ ಗಳಿಂದ ಫುಡ್ ಪಾಯಿಸನ್ ಹೆಚ್ಚಾಗುತ್ತದೆ. ಹಾಗೂ ಜೀರ್ಣಕ್ರಿಯೆ ಸಮಸ್ಯೆ ಕೂಡ ಎದುರಾಗುತ್ತದೆ.

ಇನ್ನು ಕೆಲವು ಬಾರಿ ಒಬ್ಬರು ಬಳಿಸಿದ ಲಿಪ್ಸ್ಟಿಕ್ ಅನ್ನ ಮಕ್ಕಳಿಗೆ ಹಚ್ಚುವುದರಿಂದ ತೊಂದರೆಗಳು ಜಾಸ್ತಿ ಆಗುತ್ತದೆ ಇದನ್ನು ಕೂಡ ಅವಾಯ್ಡ್ ಮಾಡುವುದು ಉತ್ತಮ.