ಮೈಸೂರು :ಏ.13: ಸೋಮಣ್ಣನಾದ್ರೂ ಬರಲಿ ಯಾರಾದರೂ ಬರಲಿ ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಸುತ್ತೂರು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಜೊತೆ ಸಮಾಲೋಚನೆ ನಡೆಸಿ ಮಾಧ್ಯಮ ಗಳ ಜೊತೆ ಅವರು ಮಾತಾಡಿದ್ರು.ಎದುರಾಳಿ ಯಾರು ಅಂಥಾ ನಾನು ನೋಡಲ್ಲ.ಮತದಾರರ ಮೇಲೆ ನಾನು ವಿಶ್ವಾಸ ಇಟ್ಟಿದ್ದೇನೆ.ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ.ಅವನು ಈಗ ಬಂದಿದ್ದಾನೆ.ಪ್ರಚಾರ ಮಾಡಲಿ.ನಮ್ಮ ಹುಡುಗ ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ. ಕಳೆದ ತಿಂಗಳಿಂದ ವರುಣಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ. ಜನರು ಖಂಡಿತವಾಗಿಯೂ ತಮ್ಮನ್ನ ಬೆಂಬಲಿಸಲಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ರು.

ರಾಹು ಕೇತುಗಳು ಈಗಲೂ ಇದ್ದಾರಾ? ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಜಾಣ್ಮೆಯ ಉತ್ತರ ಕೊಟ್ರು.ನಾನು ಅದರ ಬಗ್ಗೆ ಮಾತನಾಡಲ್ಲ. ಎಲ್ಲಕ್ಕೂ ಕಾಲ ಉತ್ತರ ಕೊಡುತ್ತೆ . ಬಿಜೆಪಿಗೆ ನನ್ನ ಕಂಡ್ರೆ ಭಯ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು. ಶ್ರೀನಿವಾಸಪ್ರಸಾದ್ ಬಿಜೆಪಿ ಮುಖಂಡ.ಸೋಮಣ್ಣ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ.ವರುಣ ಕ್ಷೇತ್ರದಲ್ಲಿ ಹಣದ ಹೊಳೆಯನ್ನು ಹರಿಸಲಿ ಏನನ್ನಾದರೂ ಮಾಡಲಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಕೋಲಾರದಿಂದ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಸ್ಪರ್ಧೆ ಮಾಡಿ ಅಂದ್ರೇ ಮಾಡುತ್ತೇನೆ, ಇಲ್ಲ ಅಂದ್ರೇ ವರುಣದಲ್ಲೇ ಇರುತ್ತೇನೆ.ಏಪ್ರಿಲ್ 19 ರಂದು ವರುಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ರು.

ಪ್ರಚಾರಕ್ಕೆ ಬರ್ತೇನೆ..
ವರುಣದಲ್ಲಿ ಒಂದು ದಿನದ ಪ್ರಚಾರಕ್ಕೆ ಬರುತ್ತೇನೆ.. ವರುಣದಲ್ಲಿ ಒಂದು ದಿನ ನಾಲ್ಕು ಕಡೆಗಳಲ್ಲಿ ಪ್ರಚಾರ ಸಭೆ ಮಾಡ್ತೇನೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಖಂಡಿತವಾಗಿಯೂ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಹೇಳಿದ್ರು.
ಸುತ್ತೂರು ಶ್ರೀ ಜತೆ ರಹಸ್ಯ ಮಾತು..
ಸುತ್ತೂರು ಶ್ರೀಗಳ ಜೊತೆ ಮಾಜಿ ಸಿಎಂ ಸಿದ್ಧರಾಮಯ್ಯ ರಹಸ್ಯ ಮಾತುಕತೆ ನಡೆಸಿದ್ರು.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಯಿತು.ಎಲ್ಲರನ್ನೂ ದೂರವಿಟ್ಟು ಶ್ರೀಗಳ ಜೊತೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ರು. ವರುಣಾ ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ