ಕೋಲಾರ : ಮಾ.19: ಈ ರಾಜ್ಯದ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದ ಸ್ಪರ್ಧೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಕ್ಷೇತ್ರದ ಆಯ್ಕೆ ವಿಚಾರದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರವು ಸಹ ಒಂದು ಹಾಗಿತ್ತು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವ್ರು ಹೇಳಿದ್ರು. ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ದಿಗಾರೊಂದಿಗೆ ಮಾತಾನಾಡಿದ ಅವ್ರು, ಕ್ಷೇತ್ರದ ಆಯ್ಕೆಯಲ್ಲಿ ಬಾದಾಮಿ, ವರುಣಾ ಮತ್ತು ಕೋಲಾರ ಕ್ಷೇತ್ರವು ಒಂದಾಗಿತ್ತು, ಕೋಲಾರ ಕ್ಷೇತ್ರಕ್ಕೆ ಸತತವಾಗಿ ಮೂರು ಬಾರಿ ಬಂದಿದ್ದರು ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕು ಇನ್ನು ತೀರ್ಮಾನ ಮಾಡಿಲ್ಲ, ಅದು ಹೈಕಮಾಂಡ್ ತೀರ್ಮಾನ ಅಂತ ಹೇಳಿದ್ದಾರೆ.

ಈ ರಾಜ್ಯದ ಪರಮೋಚ್ಚ ನಾಯಕ ಸಿದ್ದರಾಮಯ್ಯ ನನಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವುದಕ್ಕೆ ಆಸೆ ಇದೆ ಅದರೆ ಹೈಕಮಾಂಡ್ ಎಲ್ಲಿ ಸೂಚಿಸುತ್ತದೆ ಅಲ್ಲಿ ಸರ್ಧೆ ಮಾಡುತ್ತೆನೆ ಅಂತ ಈಗಾಗಲೆ ಹೇಳಿದ್ದಾರೆ. ಅದು ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಬರುತ್ತದೆ. ಹೀಗಾಗಿ ಕೋಲಾರದಲ್ಲಿ ಯಾವುದರ ಆತಂಕವಿಲ್ಲ ಎಂದು ತಿಳಿಸಿದ್ರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸತತವಾಗಿ ನನ್ನ ಸಂಪರ್ಕದಲ್ಲಿ ಇದ್ದಾರೆ. ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ವಿಚಾರವಾಗಿ ಏನು ನಿಮ್ಮ ತೀರ್ಮಾನ ಎಂದು ಕೇಳಿದ್ದಾರೆ.

ಇಂತಹ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಅಂತ ಹೇಳಿಲ್ಲ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸಂತೋಷ. ಒಂದು ವೇಳೆ ಆಗದೆ ಇದ್ದರೆ, ನಾನು ಸಹ ಟಿಕೇಟ್ ಆಕಾಂಕ್ಷಿ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಅವ್ರು ಹೇಳಿದ್ರು. ಒಂದು ವೇಳೆ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಅವರು ಗೆದ್ದೆ ಗೆಲ್ಲುತ್ತಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಗಿ ಬಹಳಷ್ಟು ಜನರು ಅರ್ಜಿಗಳನ್ನು ಹಾಕಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಸಧೃಡವಾಗಿ ಪಕ್ಷ ಸಂಘಟನೆಯಾಗಿದೆ ಸಿದ್ದರಾಮಯ್ಯ ಹೈವೋಲ್ಟೇಜ್ ವ್ಯಕ್ತಿ ಬಹಳ ಎತ್ತರದ ವ್ಯಕ್ತಿ ರಾಜ್ಯದ ಎಲ್ಲ ಮೂಲೆಯಲ್ಲ ಆಕರ್ಷಕ ವಿರುವಂತಹ ವ್ಯಕ್ತಿ ಎಂದು ಗೋವಿಂದಗೌಡ ಹೇಳಿದ್ದಾರೆ..