Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ʼಜೆಡಿಎಸ್ ಪುಟ್ಕೋಸಿ ಪಕ್ಷʼ ಎಂಬ ಕಾಂಗ್ರೆಸ್ ಹೇಳಿಕೆಗೆ ಹೆಚ್ ಡಿ ‌ಕೆ ಕೆಂಡಾಮಂಡಲ..! H.D.Kumaraswamy

ಪ್ರತಿಧ್ವನಿ

ಪ್ರತಿಧ್ವನಿ

March 19, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಬೆಂಗಳೂರು: ಮಾ.19: ಉರಿಗೌಡ, ದೊಡ್ಡ ನಂಜೇಗೌಡ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಉರೀಗೌಡ, ನಂಜೇಗೌಡ ಕಥೆ ಕಟ್ಟಿಕೊಂಡು ಇರ್ತೀರಾ, ಇಲ್ಲ ಹೊಲ ಉಳುವ ಬೋರೇಗೌಡನ ಕಷ್ಟ ನೋಡ್ತೀರಾ? ಬಿಜೆಪಿಯವರಿಗೆ ಏನು ಕೆಲಸ ಇಲ್ದೆ, ಈ ವಿಚಾರ ಇಟ್ಟುಕೊಂಡು ಆಟ ಆಡ್ತಿದ್ದಾರೆ.

ಆಲಿಕಲ್ಲು ಮಳೆ ಬಿದ್ದು ಜನ ಸಾಯ್ತಿದ್ದಾರೆ. ಇದನ್ನ ನೋಡಬೇಕೊ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಸಸ್ಥ್ಯ ಕೊಡಬೇಕಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹೆಚ್ ಡಿಕೆ ಹರಿಹಾಯ್ದರು.. ಉರಿಗೌಡ, ದೊಡ್ಡ ನಂಜೇಗೌಡ ಹೆಸರಿನಲ್ಲಿ ಸಿನಿಮಾ ಯಾವನು ಮಾಡ್ತಾನೋ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಒರ್ಜಿನಲ್ಲ, ಕಾಲ್ಪನಿಕ ವಿಚಾರ ಇಟ್ಟುಕೊಂಡು ಸಿನಿಮಾ ಮಾಡ್ತಾರೆ.. ಮುನಿರತ್ನ ವಿರುದ್ದ ಏಕವಚನದಲ್ಲಿ ಕಿಡಿ ಕಾರಿದ ಕುಮಾರಸ್ವಾಮಿ, ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರೀಗೌಡ, ನಂಜೇಗೌಡ ಹೆಸರು ಪ್ರಸ್ತಾಪಿಸಿದ್ದಾರೆ. ಆ ಪುಸ್ತಕದಲ್ಲಿ ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ರು ಅಂತ ಇದೆ. ಅಲ್ಲೇನಾದ್ರು ಉರಿಗೌಡ, ದೊಡ್ಡ ನಂಜೇಗೌಡ ಕುತ್ತಿಗೆ ಕೂಯ್ದ್ರು ಅಂತಾ ಇದಿಯಾ.? ಇಲ್ಲ ಯುದ್ದ ಮಾಡಿ ತಲೆ ತೆಗೆದ್ರು ಅಂತಿದೀಯಾ ಎಂದರು. ಮೊದಲು ಹೊಲ ಉಳುವ ಬೋರೇಗೌಡ ಸಾಯ್ತಾ ಇದ್ದಾನಲ್ಲ ಅವನ್ನ ನೋಡಲಿ. ಉರಿಗೌಡ, ನಂಜೇಗೌಡ ಇದ್ರೊ ಇಲ್ವೊ ಅಂತಾ ಆಮೇಲೆ ಹುಡುಕೋಣಾ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು..

ನಾನು ಚುನಾವಣೆ ನಡೆಸಬೇಕು. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡರ ಪ್ರತಿಮೆ ನಿರ್ಮಾಣ ಮಾಡ್ತಾರಂತೆ. ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೆ ನಿರ್ಮಾಣ ಮಾಡಿಕೊಳ್ಳಲಿ. ಈ ವಿಚಾರದಿಂದ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗಲ್ಲ. ಈಗಿನ ಜನರ ಕಷ್ಟ ನೋಡದೆ, ಹಳೆ ಕಥೆ ಇಟ್ಕೊಂಡು ಬಂದ್ರೆ ಜನರು ವೋಟ್ ಹಾಕ್ತಾರಾ ಎಂದು ಬಿಜೆಪಿ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪುಟ್ಕೋಸಿ ಪಕ್ಷ ಹೇಳಿಕೆ ಹೆಚ್ ಡಿಕೆ ಕೆಂಡಾಮಂಡಲ..!

ಜೆಡಿಎಸ್ ಪುಟ್ಕೋಸಿ ಪಕ್ಷ ಎಂಬ ನರೇಂದ್ರಸ್ವಾಮಿ ಹೇಳಿಕೆ ವಿಚಾರಕ್ಕೆ ಮಂಡ್ಯದ ವಿ.ಸಿ.ಫಾರಂನಲ್ಲಿ ಪ್ರತಿಕ್ರಿಯಿಸಿದ, ಹೆಚ್.ಡಿ.ಕೆ, ಈ ಚುನಾವಣೆ ಆದಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತಾ ಜನ ಹೇಳ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸ್ತಾರೆ ಅನ್ನೋದು ಗೊತ್ತಾಗುತ್ತೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡೋದಕ್ಕೆ ಕ್ಷೇತ್ರವೇ ಸಿಗ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕು ಎಂದು ಕ್ಲಿಯರ್ ಆಗಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರಾ.? ಮೊದಲು ಅವರ ಪುಟ್ಕೋಸಿ ಹೇಗಿದೆ ಅಂತ ನೋಡಿಕೊಳ್ಳಲಿ ಎಂದು ಹೆಚ್.ಡಿ.ಕೆ ನರೇಂದ್ರಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಂಡರು..

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವ ಪಕ್ಷ ಯಾವಾಗ ಪಟ್ಟಿ ಬಿಡುಗಡೆ ಮಾಡ್ತಾರೋ, ಹೇಗ್ ಮಾಡ್ತಾರೋ ಗೊತ್ತಿಲ್ಲ. ಅದಕ್ಕು ನನಗೆ ಸಂಬಂಧ ಇಲ್ಲ. ಚುನಾವಣೆಯಲ್ಲಿ ಆಯಾಯ ಪಕ್ಷಗಳು ಹೋರಾಟ ಮಾಡಬೇಕು. ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು, ಘೋಷಣೆ ಮಾಡಬೇಕು ಅನ್ನೋ ಲೆಕ್ಕಚಾರ ಅವರು ಮಾಡ್ಕೋತ್ತಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನ ಸೆಳೆಯಲು ಜೆಡಿಎಸ್, ಬಿಜೆಪಿ ಪ್ರಯತ್ನ ಎಂಬ ಆರೋಪಮಾಡ್ತಾರೆ. ಅವರ‌ ನಾಯಕರನ್ನ ಸೆಳೆಯೋಕೆ ಜೆಡಿಎಸ್ ಏನು ಆಯಸ್ಕಾಂತನ. ನಾನು ಮ್ಯಾಗ್ನೇಟ್ ಅಲ್ಲ ಎಂದು ಕಾಂಗ್ರೆಸ್ ಗೆ ಹೆಚ್.ಡಿ.ಕೆ ಟಾಂಗ್ ನೀಡಿದ್ದಾರೆ. ರಾಜೇಗೌಡರಿಗೆ ಹಾಸನ ಜೆಡಿಎಸ್ ಟಿಕೆಟ್ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಲು ನಿರಾಕರಿಸಿದರು..

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಮತದಾರರ ಮನವೊಲಿಕೆಗೆ ಕಾಂಗ್ರೆಸ್  ಭರ್ಜರಿ ಸರ್ಕಸ್..!
Top Story

ಮತದಾರರ ಮನವೊಲಿಕೆಗೆ ಕಾಂಗ್ರೆಸ್ ಭರ್ಜರಿ ಸರ್ಕಸ್..!

by ಪ್ರತಿಧ್ವನಿ
March 25, 2023
ಸಿದ್ದರಾಮಯ್ಯ ಎಲೆಕ್ಷನ್ ಗೆ ನಿಲ್ಲಲು ಕ್ಷೇತ್ರ ಹುಡುಕುತ್ತಿರೋದು ನೋಡಿದ್ರೆ ಅನುಕಂಪ ಬರ್ತಿದೆ : ಹೆಚ್ ಡಿಕೆ ವ್ಯಂಗ್ಯ : Siddaramaiah v/s H D Kumaraswamy
Top Story

ಸಿದ್ದರಾಮಯ್ಯ ಎಲೆಕ್ಷನ್ ಗೆ ನಿಲ್ಲಲು ಕ್ಷೇತ್ರ ಹುಡುಕುತ್ತಿರೋದು ನೋಡಿದ್ರೆ ಅನುಕಂಪ ಬರ್ತಿದೆ : ಹೆಚ್ ಡಿಕೆ ವ್ಯಂಗ್ಯ : Siddaramaiah v/s H D Kumaraswamy

by ಪ್ರತಿಧ್ವನಿ
March 21, 2023
ಭಾಗ-1 : ಭಾರತದ ಬಹುತ್ವವನ್ನು ಗೌರವಿಸದ ಕೈಯಗಳಲ್ಲಿ ದೇಶದ ಆಡಳಿತ..!
ಅಂಕಣ

ಭಾಗ-1 : ಭಾರತದ ಬಹುತ್ವವನ್ನು ಗೌರವಿಸದ ಕೈಯಗಳಲ್ಲಿ ದೇಶದ ಆಡಳಿತ..!

by ಡಾ | ಜೆ.ಎಸ್ ಪಾಟೀಲ
March 25, 2023
CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ
ಇದೀಗ

CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ

by ಪ್ರತಿಧ್ವನಿ
March 23, 2023
ಪ್ರಧಾನಿ ಮೋದಿ ವಿರುದ್ಧ ಮಾತನಾಡೋರನ್ನ ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ..!
Top Story

ಪ್ರಧಾನಿ ಮೋದಿ ವಿರುದ್ಧ ಮಾತನಾಡೋರನ್ನ ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ..!

by ಪ್ರತಿಧ್ವನಿ
March 25, 2023
Next Post
ಕೋಲಾರಕ್ಕೆ ಸಿದ್ದರಾಮಯ್ಯ ಬರಲ್ಲ ಅಂದ್ರೆ.. ನಾನೇ ಅಭ್ಯರ್ಥಿ..! : ಬ್ಯಾಲಹಳ್ಳಿ ಗೋವಿಂದಗೌಡ ..!  Siddaramaiah IS Not Coming To Kolar.. I Am the Candidate

ಕೋಲಾರಕ್ಕೆ ಸಿದ್ದರಾಮಯ್ಯ ಬರಲ್ಲ ಅಂದ್ರೆ.. ನಾನೇ ಅಭ್ಯರ್ಥಿ..! : ಬ್ಯಾಲಹಳ್ಳಿ ಗೋವಿಂದಗೌಡ ..! Siddaramaiah IS Not Coming To Kolar.. I Am the Candidate

ಶಾಸಕ ರಾಮದಾಸ್‌ ಗೆ ಟಿಕೆಟ್‌ ನೀಡಬೇಡಿ : ಬಿಎಸ್‌ ವೈ ಬಳಿ ವೀರಶೈವ-ಲಿಂಗಾಯತರು ಮನವಿ : Do Not Give Ticket to MLA Ramdas

ಶಾಸಕ ರಾಮದಾಸ್‌ ಗೆ ಟಿಕೆಟ್‌ ನೀಡಬೇಡಿ : ಬಿಎಸ್‌ ವೈ ಬಳಿ ವೀರಶೈವ-ಲಿಂಗಾಯತರು ಮನವಿ : Do Not Give Ticket to MLA Ramdas

ಚುನಾವಣೆ ಕರ್ತವ್ಯ ನಿರ್ಲಕ್ಷ ತೋರಿದ ಇಬ್ಬರು ಅಧಿಕಾರಿಗಳ ಅಮಾನತ್ತು..! : Suspension of Two Officials Who Neglected Election Duty..!

ಚುನಾವಣೆ ಕರ್ತವ್ಯ ನಿರ್ಲಕ್ಷ ತೋರಿದ ಇಬ್ಬರು ಅಧಿಕಾರಿಗಳ ಅಮಾನತ್ತು..! : Suspension of Two Officials Who Neglected Election Duty..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist