• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಸ್ತೂರಿರಂಗನ್ ವರದಿ: ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚನೆ.!

ಪ್ರತಿಧ್ವನಿ by ಪ್ರತಿಧ್ವನಿ
September 22, 2026
in Top Story, ಕರ್ನಾಟಕ, ರಾಜಕೀಯ
0
ಕಸ್ತೂರಿರಂಗನ್ ವರದಿ: ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚನೆ.!
Share on WhatsAppShare on FacebookShare on Telegram

ಬೆಂಗಳೂರು: ಕಸ್ತೂರಿರಂಗನ್ ವರದಿಯ ನ್ಯೂನತೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಸೂಚಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದು ಹಾಗೂ ಗ್ರಾಮ ಮತ್ತು ಸರ್ವೇವಾರು ಸಮೀಕ್ಷೆ ನಡೆಸಿ ಮಾರ್ಪಾಡು ಸೂಚಿಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಇಂದು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ADVERTISEMENT
Assembly Session : ಕಸ್ತೂರಿ ರಂಗನ್ ವರದಿ‌ ಬಗ್ಗೆ ಅಚ್ಚರಿ ಹೇಳಿಕೆ‌ ನೀಡಿದ ಶಾಸಕ..!T D Rajegowda  #pratidhvani

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಕಸ್ತೂರಿ ರಂಗನ್ ವರದಿ ಆಧರಿತ ಕರಡು ಅಧಿಸೂಚನೆ ಕುರಿತು ನಡೆದ ಚರ್ಚೆಗೆ ಮಂಗಳವಾರ ಉತ್ತರಿಸಿ ಈ ನಿರ್ಣಯಗಳನ್ನು ಮಂಡಿಸಿದರು.ಅದಕ್ಕೆ ಉಭಯ ಸದನಗಳು ಒಮ್ಮತದ ಒಪ್ಪಿಗೆ ನೀಡಿದವು.

ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ

“ಕಸ್ತೂರಿರಂಗನ್ ವರದಿಯ ನ್ಯೂನತೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಸೂಚಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರದ ಪ್ರತಿನಿಧಿಗಳು, ಅರಣ್ಯ–ಪರಿಸರ ತಜ್ಞರು, ಶೈಕ್ಷಣಿಕ ಸಂಸ್ಥೆಗಳ ಪರಿಣಿತರು ಇರಲಿದ್ದಾರೆ” ಎಂದು ಸಿಎಂ ಶಿವಕುಮಾರ್ ಅವರು ಚರ್ಚೆಗೆ ಉತ್ತರಿಸಿ ತಿಳಿಸಿದರು.

“ಈ ಸಮಿತಿಯು ಭೌತಿಕ ಸಮೀಕ್ಷೆ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶ, ಅರಣ್ಯ, ಕೃಷಿ, ತೋಟಗಾರಿಕೆ ಹಾಗೂ ಜನವಸತಿ ಪ್ರದೇಶಗಳನ್ನು ವೈಜ್ಞಾನಿಕವಾಗಿ ಪ್ರತ್ಯೇಕಿಸುವ ಕುರಿತು ಶಿಫಾರಸು ಮಾಡಲಿದೆ. ಇದರೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲು ನಿರ್ಣಯಿಸಲಾಗಿದೆ” ಎಂದು ಹೇಳಿದರು.

Assembly Session :  ಕಾಂಗ್ರೆಸ್‌ ಸರ್ಕಾರದ ವಿರುದ್ದ ಗುಡುಗಿದ ಶಾಸಕ ಸುನಿಲ್‌ ಕುಮಾರ್..‌! #dkshivakumar

“ಕಸ್ತೂರಿ ರಂಗನ್ ವರದಿ ಕುರಿತ ಕೇಂದ್ರ ಸರ್ಕಾರದ ಏಳನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜುಲೈ 27, 2026ರಂದು ಕೇಂದ್ರ ಸರ್ಕಾರ ಹೊರಡಿಸಿದ ಏಳನೇ ಕರಡು ESA ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ 1,449 ಗ್ರಾಮಗಳ ಒಟ್ಟು 20,668 ಚದರ ಕಿ.ಮೀ. ಪ್ರದೇಶವನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಈ ಕರಡು ಅಧಿಸೂಚನೆಯು ಉಪಗ್ರಹ ಆಧಾರಿತ ಅವೈಜ್ಞಾನಿಕ ಸಮೀಕ್ಷೆಯಾಗಿದ್ದು, ಜಂಟಿ ಭೌತಿಕ ಸಮೀಕ್ಷೆ ಅಥವಾ ಸರ್ವೇ ನಂಬರ್ ಆಧಾರಿತವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.

“ಉಪಗ್ರಹ ಚಿತ್ರಗಳಲ್ಲಿ ಅರಣ್ಯ ಮತ್ತು ಕೃಷಿ-ತೋಟಗಾರಿಕೆ ಪ್ರದೇಶಗಳು ಒಂದೇ ರೀತಿ ಹಸಿರಾಗಿ ಕಾಣುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಒಂದು ಗ್ರಾಮದ ಐದನೇ ಒಂದು ಭಾಗ (20%) ಅರಣ್ಯ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವುದು ವೈಜ್ಞಾನಿಕ ಕ್ರಮವಲ್ಲ. ಇದರಿಂದ ಮನೆ ನಿರ್ಮಾಣ, ಆಸ್ತಿ ವಾರಸುದಾರಿಕೆ, ಕೃಷಿ, ಪ್ಲಾಂಟೇಶನ್, ರಸ್ತೆ, ಶಾಲೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನ ಪೈಪ್ಲೈನ್ನಂತಹ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಅನಗತ್ಯ ತೊಂದರೆ ಉಂಟಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ” ಎಂದು ವಿವರಿಸಿದರು.

Assembly Session : ಅರಣ್ಯ ಅಧಿಕಾರಿಗಳ ವಿರುದ್ದ ಗುಡುಗಿದ ಶಾಸಕಿ..! | #pratidhvani

ಗ್ರಾಮವಾರು, ಸರ್ವೇ ನಂಬರ್ ವಾರು ಸಮೀಕ್ಷೆ

“ಈ ನ್ಯೂನತೆಗಳನ್ನು ನಿವಾರಿಸಲು ಭೌತಿಕವಾಗಿ ಗ್ರಾಮವಾರು ಮತ್ತು ಸರ್ವೇ ಸಂಖ್ಯೆವಾರು ಸಮೀಕ್ಷೆ ನಡೆಸಿ, ಪ್ರತಿಯೊಂದು ಗ್ರಾಮದ ಮನೆ, ಶಾಲೆ, ತೋಟಗಾರಿಕೆ, ಕುಡಿಯುವ ನೀರು ಮತ್ತು ವಿದ್ಯುತ್ ಕಂಬಗಳ ನಕ್ಷೆ ತಯಾರಿಸಿ ರಕ್ಷಣೆ ಮಾಡಬೇಕಿದೆ. ಕಾಡಿನೊಳಗೆ ಬಫರ್ ಜೋನ್ ಮಾಡಿಕೊಳ್ಳಲಿ ಹಾಗೂ ಬಡವರಿಗೆ ಮನೆ ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಬೇಕಿದೆ. ಈ ಸಮೀಕ್ಷೆ ನಡೆಸಿ ನಕ್ಷೆ ಸಿದ್ಧಪಡಿಸಲು ಮತ್ತು ಮಾರ್ಪಾಡುಗಳನ್ನು ಸೂಚಿಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಹಾಗೂ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದೇ ವಿವರವಾದ ಚರ್ಚೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು” ಎಂದು ತಿಳಿಸಿದರು.

ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ

“ಅಲ್ಲದೆ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡುಯ್ಯಲು, ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಮತ್ತು ಕೇಂದ್ರಕ್ಕೆ ಸಲ್ಲಿಸಿ ಸುಪ್ರೀಂ ಕೋರ್ಟಿನ ಹಿರಿಯ ವಕೀಲರನ್ನು ನೇಮಿಸಲು ಸಲಹೆಗಳು ವ್ಯಕ್ತವಾಗಿ ಸಹಮತ ಮೂಡಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ನಿಲುವನ್ನು ಸಮರ್ಥವಾಗಿ ಮಂಡಿಸಲು ಕರ್ನಾಟಕದ ಎಲ್ಲ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಮತದಾರರೇ ನಮ್ಮ ಪ್ರಭುಗಳು, ರಾಜಕೀಯ ಮಾಡುವ ಸಮಯದಲ್ಲಿ ರಾಜಕೀಯ ಮಾಡೋಣ. ಈಗ ರೈತರು ಬದುಕಬೇಕು, ಜನಸಾಮಾನ್ಯರು ಬದುಕಬೇಕು” ಎಂದು ಕರೆ ನೀಡಿದರು.

“ಪರಿಸರ ಸೂಕ್ಷ್ಮ ಪ್ರದೇಶದ ವಿವಿಧ ಕರಡುಗಳ ಕುರಿತು 2004ರಿಂದಲೇ ಆಕ್ಷೇಪ ಸಲ್ಲಿಸುತ್ತಾ ಬಂದಿರುವ ರಾಜ್ಯ ಸರ್ಕಾರ, 2021, 2022 ಮತ್ತು 2024ರಲ್ಲಿಯೂ ಸಚಿವ ಸಂಪುಟದ ನಿಲುವನ್ನು ಕೇಂದ್ರಕ್ಕೆ ತಿಳಿಸಿದೆ. ಈಗಾಗಲೇ 6 ಬಾರಿ ಕರಡು ಅಧಿಸೂಚನೆಯನ್ನು ನಿರಾಕರಿಸಲಾಗಿದೆ. ಈ ಸಂಬಂಧ ಅರಣ್ಯ ಸಚಿವರು ರೈತರ ತೊಂದರೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಏಳನೇ ಕರಡು ಅಧಿಸೂಚನೆ ಕುರಿತು ನಾನು ಆದಿವಾಸಿಗಳು, ಕುಟುಂಬದವರನ್ನು ನೇರವಾಗಿ ಕೇಳಿ ಚರ್ಚಿಸಿ ಮಾತನಾಡಿದ್ದೇನೆ. ಬಹಳ ಕಡೆ 10-12 ಕಿಮೀ ಪಾದಯಾತ್ರೆ ಮಾಡಿದ್ದಾರೆ. ಬಾಳೆಹೊನ್ನೂರು, ಶಿವಮೊಗ್ಗ ಸಕಲೇಶಪುರದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರೆದಿದ್ದ ಸಭೆಯಲ್ಲಿ ಹಾಜರಿದ್ದರು” ಎಂದು ವಿವರಿಸಿದರು.

“ರೈತರು ಹಾಗೂ ಅವರ ಪ್ರತಿನಿಧಿಗಳು ವರದಿ ಕುರಿತು ಬಹಳ ಆಳವಾದ ಅಧ್ಯಯನ ಮಾಡಿದ್ದಾರೆ. ಮನವಿಗಳನ್ನು ನಾನು ಸ್ವೀಕಾರ ಮಾಡಿದ್ದೇನೆ. ಅರಣ್ಯ ಪ್ರದೇಶಗಳ ಬಳಿ ತಲೆತಲೆಮಾರಿನಿಂದ ಉಳುಮೆ ಮಾಡುತ್ತಿರುವವರಿಗೆ ತೊಂದರೆಯಾಗಬಾರದು. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ರೈತರ ಅಭಿಪ್ರಾಯ ಆಲಿಸಲು ವಿಶೇಷ ಅಧಿವೇಶನ ಕರೆದು, 30 ಶಾಸಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗಿದೆ” ಎಂದು ವಿವರಿಸಿದರು.

ಪರಿಸರ ಉಳಿಯಬೇಕು ಹಾಗೂ ರೈತರೂ ಬದುಕಬೇಕು

“ಪಶ್ಚಿಮ ಘಟ್ಟದ ಪರಿಸರ, ಜೀವವೈವಿಧ್ಯ, ನದಿಗಳ ಮೂಲ ಹಾಗೂ ಶಿವಮೊಗ್ಗದ ಕಪ್ಪು ಚಿರತೆ, ಆನೆಗಳಂತಹ ವನ್ಯಜೀವಿಗಳನ್ನು ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ. “ಕಾಡು ಉಳಿದರೆ ನಾಡು, ಕಾಡು ಇದ್ದರೆ ಮಳೆ, ಪರಿಸರ ಉಳಿಯಬೇಕು ಹಾಗೂ ರೈತರೂ ಬದುಕಬೇಕು ಎಂಬುದು ಸರ್ಕಾರದ ನಿಲುವು” ಎಂದರು.

“ಹಲವು ತಲೆತಲೆಮಾರಿನಿಂದ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ರೈತರು, ತೋಟಗಾರರು, ಆದಿವಾಸಿಗಳು ಮತ್ತು ಸ್ಥಳೀಯ ಕುಟುಂಬಗಳನ್ನು ಸ್ಥಳಾಂತರಿಸುವುದು ಅಥವಾ ಅವರಿಗೆ ಕಿರುಕುಳ ನೀಡುವುದು ಸರ್ಕಾರದ ನಿಲುವಲ್ಲ. ಈಗಾಗಲೇ ಮಂಜೂರಾದ ಪ್ರದೇಶಗಳನ್ನು ಸೇರಿಸಬಾರದು ಹಾಗೂ ಪುನರ್ವಸತಿ ಪ್ರಸ್ತಾಪವಿಲ್ಲದೆ ತೆರವು ಮಾಡಬಾರದು. ಬಗರ್ಹುಕುಂ, ಅರಣ್ಯ ಹಕ್ಕು ಕಾಯ್ದೆ, ಡೀಮ್ಡ್ ಫಾರೆಸ್ಟ್, ಭೂಮಂಜೂರಾತಿ, ಮೇಲ್ಮನವಿ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸದೆ ಸ್ಥಳೀಯರ ವಿರುದ್ಧ ಕ್ರಮ ಕೈಗೊಳ್ಳಬಾರದು. ಅರಣ್ಯ ಹಕ್ಕುಗಳ ಕಾಯ್ದೆ ಅನುಷ್ಠಾನದ ಕುರಿತು ತಕ್ಷಣವೇ ಸಭೆ ನಡೆಸಲಾಗುವುದು. ಗೋಮಾಳವಿದ್ದರೆ ಮಂಜೂರು ಮಾಡುವುದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಪ್ರಕರಣಗಳನ್ನು ಪರಿಗಣಿಸಲಾಗುವುದು” ಎಂದು ಅವರು ತಿಳಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಆಧುನಿಕ ತಂತ್ರಜ್ಞಾನ

“ಅರಣ್ಯ ಪ್ರದೇಶಗಳಲ್ಲಿ ಹೊಸದಾಗಿ ಒತ್ತುವರಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಚಿಸಲಾಗಿದೆ. ಕಾಡಂಚಿನಲ್ಲಿ ಬದುಕುವವರು ತಮ್ಮ ಬಳಿಯಿರುವ ಬಂದೂಕುಗಳನ್ನು ನವೆಂಬರ್ 1ರೊಳಗೆ ಪೋಲೀಸ್ ಠಾಣೆಗಳ ವಶಕ್ಕೆ ನೀಡಬೇಕು; ಪರವಾನಗಿ ಪಡೆದರೆ ಹಿಂತಿರುಗಿಸಲಾಗುವುದು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮಬಾಹಿರ ಬೇಟೆ ಪದ್ಧತಿಗಳಿಗೆ ಅವಕಾಶ ನೀಡದೆ ಅಕ್ರಮ ಬೇಟೆ ತಡೆಯಲು ಕ್ರಮ ವಹಿಸಲಾಗುವುದು. ವನ್ಯಜೀವಿ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಆಧುನಿಕ ತಂತ್ರಜ್ಞಾನ, ಕ್ಯಾಮೆರಾಗಳು ಹಾಗೂ ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸುವ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ರಾಜಕೀಯ ರಹಿತವಾಗಿ ಜನರ ಮತ್ತು ರೈತರ ಧ್ವನಿಯಾಗಿ ಸರ್ಕಾರ ಕಾರ್ಯನಿರ್ವಹಿಸಲಿದೆ” ಎಂದು ತಿಳಿಸಿದರು.

Tags: All Party DelegationDK ShivakumarEcologically Sensitive AreaESA NotificationHigh Level CommitteeKarnataka Legislaturekarnataka newsKasturirangan ReportPhysical SurveyRetired Judge CommitteeVillage Level SurveyWestern Ghats
Previous Post

KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

Next Post

ಕಾಡು ಕಾಯದಿದ್ದರೆ ಅರಣ್ಯ ಉಳಿಯುತ್ತಿರಲಿಲ್ಲ : ಅರಣ್ಯ ಇಲಾಖೆ ಸಿಬ್ಬಂದಿಗಳ ಪರ ಸಿಎಂ ಡಿಕೆಶಿ ಬ್ಯಾಟಿಂಗ್

Related Posts

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !
Top Story

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !

by ಪ್ರತಿಧ್ವನಿ
September 23, 2026
0

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದ್ದ ಆಂತರಿಕ ಅಸಮಾಧಾನ ಇದೀಗ ಬಹಿರಂಗವಾಗಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (SBUDA) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ...

Read moreDetails
ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

September 23, 2026
ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

September 23, 2026
ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

September 23, 2026
ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

September 23, 2026
Next Post
KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

ಕಾಡು ಕಾಯದಿದ್ದರೆ ಅರಣ್ಯ ಉಳಿಯುತ್ತಿರಲಿಲ್ಲ : ಅರಣ್ಯ ಇಲಾಖೆ ಸಿಬ್ಬಂದಿಗಳ ಪರ ಸಿಎಂ ಡಿಕೆಶಿ ಬ್ಯಾಟಿಂಗ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada