ಧಾರವಾಡ, ಏಪ್ರಿಲ್ 26: ಶಿಗ್ಗಾಂವಿ ತಾಲ್ಲೂಕಿನ ಅಗಡಿ ಗ್ರಾಮಕ್ಕೆ ಆಗಮಿಸಿದ್ದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ – ಧರ್ಮ ಕ್ಷೇತ್ರ ಕೂಡಲಸಂಗಮ ಮಹಾಸ್ವಾಮೀಜಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ, ಅರವಿಂದ ಕಟಗಿ, ಶಿವಾನಂದ ಬೆಂತೂರ, ಎಂ ಎಸ್ ಅಕ್ಕಿ, ಶ್ರೀಕಂಠಗೌಡ ಹಿರೇಗೌಡ್ರ, ಜಿ ಎಸ್ ಪಾಟೀಲ, ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ಸುರೇಶ ಸಂಗಣ್ಣವರ, ಶಿವಾನಂದ ಬಾಗೂರ, ಪಾಲಾಕ್ಷಪ್ಪ ಹಾವಣಗಿ ಮತ್ತು ಪಕ್ಷದ ಹಿರಿಯ ನಾಯಕರು, ಇತರ ಸಮಾಜದ ಹಿರಿಯ ಮುಖಂಡರು ಹಾಗೂ ಪೀಠದ ಭಕ್ತಾಧಿಗಳು ಉಪಸ್ಥಿತರಿದ್ದರು.