• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವಿದ್ಯಾರ್ಥಿಗಳಿಗೆ ಖಾಕಿ ಕಾವಲು, ಪೊಲೀಸರಿಂದ ಉಪನ್ಯಾಸ, ವಾಟ್ಸ್‌ ಆಪ್‌ ಗ್ರೂಪ್‌ಗಳ ಮೂಲಕ ಕ್ರೈಂ ನಿಯಂತ್ರಣ!

ಸಾಗರ by ಸಾಗರ
January 10, 2022
in ಕರ್ನಾಟಕ, ವಿಡಿಯೋ, ವಿಶೇಷ
0
Share on WhatsAppShare on FacebookShare on Telegram

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲಷ್ಟೇ ಅಲ್ಲ ಅಪರಾಧಗಳಿಗೂ ಕುಖ್ಯಾತಿ ಪಡೆದಿದ್ದ ಜಿಲ್ಲೆ. ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳಿಗಾಗಿ ಎರಡು ಅಥವಾ ಮೂರನೇ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿಗ ಬದಲಾವಣೆಯ ಗಾಳಿ ಬೀಸುತ್ತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌ಪಿ ಬಿಎಂ ಲಕ್ಷ್ಮಿ ಪ್ರಸಾದ್‌ ನೇತೃತ್ವದಲ್ಲಿ ಅಪರಾಧ ಪ್ರಕರಣಗಳಿಗೆ ರಚನಾತ್ಮಕ ಕೆಲಸಗಳ ಮೂಲಕ ಕಡಿವಾಣ ಹಾಕುವ ಪ್ರಯತ್ನಗಳೂ ನಿರಂತರವಾಗಿ ಸಾಗಿವೆ. ಶಿವಮೊಗ್ಗ ನಗರವೊಂದನ್ನೇ ತೆಗೆದುಕೊಂಡರೆ ಪ್ರತಿದಿನ ಗಾಂಜಾ ಪ್ರಕರಣಗಳು, ಕೊಲೆ ಸುಲಿಗೆ, ದರೋಢೆ, ಗ್ಯಾಂಗ್‌ ವಾರ್‌ ಸರ್ವೇ ಸಾಮಾನ್ಯವೆಂಬಂತಿತ್ತು. ಈಗೀಗ ಡ್ರಗ್ ಪೆಡ್ಲರ್‌ಗಳು, ರೌಡಿ ಶೀಟರ್‌ಗಳು ಜೈಲು ಸೇರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಅಪರಾಧ ಜಗತ್ತಿಗೆ ಬೇಗನೆ ಪದಾರ್ಪಣೆ ಮಾಡುತ್ತಿರುವ ಪ್ರಕರಣಗಳು ಆತಂಕ ಮೂಡಿಸಿವೆ. ಇದಕ್ಕೆಲ್ಲಾ ಇತಿಶ್ರೀ ಹಾಡಲು ಜಿಲ್ಲಾ ಪೊಲೀಸ್‌ ಸನ್ನದ್ಧವಾಗಿದೆ.

ADVERTISEMENT

ಶಿವಮೊಗ್ಗ ಈ ಹಿಂದೆ ಮಾದಕ ವಸ್ತು ಬೀಡಾಗಿತ್ತು. ಮಲೆನಾಡಿನ ರೈತರು ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಲವೂ ಇತ್ತು. ದಶಕದ ಪರಿಶ್ರಮದಿಂದ ಗಾಂಜಾ ಪಿಡುಗನ್ನ ಪೊಲೀಸರು ಬೇರು ಸಮೇತ ಕಿತ್ತು ಹಾಕಿದ್ದಾರೆ. ಆದರೆ ಆಂಧ್ರಪ್ರದೇಶದಿಂದ ಅಗ್ಗದ ಗಾಂಜಾ ಶಿವಮೊಗ್ಗಕ್ಕೆ ದಾಂಗುಡಿ ಇಟ್ಟಿದೆ. ಇದರ ಜೊತೆ ಅಪರಾಧ ಜಗತ್ತು ಪುನಃ ಚಿಗುರೊಡೆಯುತ್ತಿದೆ. ಬಹಳ ಮುಖ್ಯವಾಗಿ ಶಾಲಾ-ಕಾಲೇಜಿನ ಅಂಗಳಕ್ಕೆ ಇದು ಕಾಲಿರಿಸಿದೆ. ಇದರ ಜೊತೆ ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಮಕ್ಕಳನ್ನ ಹಾಗೂ ವಿದ್ಯಾರ್ಥಿಗಳನ್ನ ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಆತಂಕಕ್ಕೀಡು ಮಾಡಿದೆ. ಬಾಲಾರೋಪ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಶಿವಮೊಗ್ಗ ಪೊಲೀಸರು ನೇರವಾಗಿ ಶಾಲೆಗಳತ್ತ ವಿವಿಧ ಅರಿವು ಕಾರ್ಯಕ್ರಮಗಳ ಮೂಲಕ ತೆರಳುತ್ತಿದ್ದಾರೆ. ಅದರಲ್ಲಿ ವಾಟ್ಸ್‌ಆಪ್‌ ಗ್ರೂಪ್‌ ಮೂಲಕ ಅಪರಾಧಗಳ ಮೇಲೆ ನಿಗಾ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವಿಗಾಗಿ ಉಪನ್ಯಾಸ. ಶಿವಮೊಗ್ಗದ ಕೋಟೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಚಂದ್ರಶೇಖರ್‍ ಹೀಗೆ ಗಂಟೆಗಳ ಕಾಲ ಮಕ್ಕಳಿಗೆ ಕಾನೂನು ಅರಿವು ಹಾಗೂ ಭವಿಷ್ಯದ ಬಗ್ಗೆ ಪಾಠ ಮಾಡುತ್ತಾರೆ. ಇದಕ್ಕೆ ಕಾರಣ ಶಿವಮೊಗ್ಗ ಎಸ್‌ಪಿ ಲಕ್ಷ್ಮಿ ಪ್ರಸಾದ್‌.

ಈ ಬಗ್ಗೆ ಮಾತನಾಡಿದ ಲಕ್ಷ್ಮಿ ಪ್ರಸಾದ್‌ ಶಾಲಾ ಮಕ್ಕಳು ಗಾಂಜಾ ಕಡೆ ವಾಲುತ್ತಿದ್ದಾರೆಂದು ಮಾಹಿತಿ ಬರುತ್ತಿದೆ. ಈ ಬಗ್ಗೆ ದೂರುಗಳೂ ಸಹ ದಾಖಲಾಗಿದ್ದವು. ಈ ಬೆಳವಣಿಗೆಗಳನ್ನ ಅವಲೋಕಿಸದ ಮೇಲೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷರನ್ನೊಳಗೊಂಡ ವಾಟ್ಸ್‌ ಆಪ್‌ ಗ್ರೂಪ್‌ ರಚಿಲಾಗಿದೆ. ಆ ಗ್ರೂಪ್‌ಗಳಲ್ಲಿ ಅಪರಾಧ, ಹಾಗೂ ಕಾನೂನು ಸಲಹೆ ಬಗ್ಗೆ ಚರ್ಚೆಗಳನ್ನ ಮಾಡಬಹುದು. ಶಾಲಾ ಕಾಲೇಜಿನೊಳಗಡೆ ಕಿಡಿಗೇಡಿಗಳು ಪ್ರವೇಶ ಮಾಡಿ ದಾಂಧಲೆ ಮಾಡುತ್ತಿದ್ದರೆ, ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಮಾಹಿತಿ ನೀಡಬಹುದು. ಆ ಪ್ರಕರಣಗಳನ್ನ ಪೊಲೀಸರು ಚಾಚೂ ತಪ್ಪದೇ ನಿರ್ವಹಿಸುತ್ತಾರೆ ಹಾಗೂ ಫಾಲೋಅಪ್‌ ಕೂಡ ಮಾಡಿಸುತ್ತೇವೆ. ಎಷ್ಟೋ ಶಾಲೆಗಳಲ್ಲಿ ಶಾಲಾ ಆವರಣದಲ್ಲೇ ಮದ್ಯ ಸೇವನೆ ಮಾಡೋದು, ಸಿಸಿಟಿವಿಗಳನ್ನ ಕದಿಯೋ ಪ್ರಕರಣಗಳು ದಾಖಲಾಗಿವೆ. ಬಹಳ ಮುಖ್ಯವಾಗಿ ಶಾಲೆಗಳ ಎದುರು ಟ್ರಾಫಿಕ್‌ ಸಮಸ್ಯೆ ಹೇಳ ತೀರದಂತಿದೆ. ವೇಗವಾಗಿ ವಾಹನ ಚಾಲನೆ ಮಾಡೋದು, ಅಡ್ಡಲಾಗಿ ನಿಲ್ಲಿಸೋದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಲು ಮನವಿ ಮಾಡಿಕೊಂಡಿದ್ದೇವೆ. ಅದರ ಜೊತೆ ಆಯ್ದ ಪೊಲೀಸ್‌ ಅಧಿಕಾರಿಗಳು ಮಕ್ಕಳಿಗೆ ಅರಿವಿನ ಪಾಠವನ್ನೂ ಮಾಡುತ್ತಾರೆ ಎಂದು ಎಸ್‌ ಪಿ ಹೇಳಿದರು.

Tags: Covid 19ಉಪನ್ಯಾಸಕರೋನಾಕೋವಿಡ್-19ಕ್ರೈಂ ನಿಯಂತ್ರಣಖಾಕಿ ಕಾವಲುಪೊಲೀಸರುವಾಟ್ಸ್‌ ಆಪ್‌ವಿದ್ಯಾರ್ಥಿಗಳುಶಿವಮೊಗ್ಗ
Previous Post

ಕರೋನಾ ಹಾಡು ಹಾಡಿ ವೈರಲ್ ಆದ BMTC ಕಂಡಕ್ಟರ್ ಮುನಿಕೃಷ್ಣ : ಸಾಮಾಜಿಕ ಕಳಕಳಿಗೆ ಜನರ ಮೆಚ್ಚುಗೆ

Next Post

‘Game-Changer’ : ನಟ ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್ ಸೇರ್ಪಡೆ

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
‘Game-Changer’ : ನಟ ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್ ಸೇರ್ಪಡೆ

'Game-Changer' : ನಟ ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್ ಸೇರ್ಪಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada