• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಚಿವ ಸಂಪುಟ ವಿಸ್ತರಣೆ; ಬಿ.ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಿಂದ ಯಾರಾಗಲಿದ್ದಾರೆ ಮಂತ್ರಿ?

ನಚಿಕೇತು by ನಚಿಕೇತು
August 3, 2021
in ಕರ್ನಾಟಕ, ರಾಜಕೀಯ
0
ಸಚಿವ ಸಂಪುಟ ವಿಸ್ತರಣೆ; ಬಿ.ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಿಂದ ಯಾರಾಗಲಿದ್ದಾರೆ ಮಂತ್ರಿ?
Share on WhatsAppShare on FacebookShare on Telegram

ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಕೇಂದ್ರ ಎಂದು ಕರೆಯೋದಾದ್ರೆ ಅದು ಬಿ.ಎಸ್ ಯಡಿಯೂರಪ್ಪ ಮಾತ್ರ. ಇವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಚಿವ ಸಂಪುಟ ರಚನೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಈ ಬಾರಿ ಸಚಿವ ಸಂಪುಟದಲ್ಲಿ ಇವರ ಆಪ್ತರಿಗೆ ಅತೀ ಹೆಚ್ಚು ಮಂತ್ರಿ ಸ್ಥಾನಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಬಿ.ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಿಂದ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕುತೂಹಲ ಶುರುವಾಗಿದೆ. ಇದು ಹೈಕಮಾಂಡ್ ಬಿಸಿ ತುಪ್ಪವಾಗಿದ್ದು, ಯಾರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಚಿಂತೆಗೀಡಾಗಿದೆ.

ADVERTISEMENT

ಇನ್ನು, ಶಿವಮೊಗ್ಗದಿಂದ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೆಸರು ಸೂಚಿಸಲು ಯಡಿಯೂರಪ್ಪ ತಲೆಕೆಡಿಸಿಕೊಂಡಿದ್ದಾರೆ. ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ರುದ್ರೇಗೌಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕೆ.ಎಸ್ ಈಶ್ವರಪ್ಪ ಮೇಲೆ ಯಾವುದೇ ರೀತಿಯ ಒಲವು ಇಲ್ಲದೇ ಹೋದರೂ ಮೇಲಿನ ನಾಲ್ವರಲ್ಲಿ ಯಾರಾದರೂ ಒಬ್ಬರ ಹೆಸರನ್ನು ಸೂಚಿಸಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ.

ಶಾಸಕ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದಿದ್ದಾರೆ. ಹೀಗಿದ್ದರೂ ಒಮ್ಮೆಯೂ ಸಚಿವರಾಗುವ ಅವಕಾಶ ಸಿಗಲೇ ಇಲ್ಲ. 2008ರ ಬಿಜೆಪಿ ಸರ್ಕಾರದಲ್ಲಿ ಸಚಿವರು ಆಗುವ ಅವಕಾಶ ಇದ್ದರೂ ಚುನಾವಣೆಯಲ್ಲಿ ಸೋತಿದ್ದ ಕಾರಣ ಮಂತ್ರಿ ಭಾಗ್ಯ ಸಿಕ್ಕಿರಲಿಲ್ಲ. ಈಗ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಆರಗ ಜ್ಞಾನೇಂದ್ರ ಪಕ್ಷ ನಿಷ್ಠರು. ಎಂದೂ ಬಿಜೆಪಿ ವಿರುದ್ಧ ಧ್ವನಿ ಎತ್ತದೇ ಕೆಲಸ ಮಾಡಿದವರು.

ಇನ್ನೊಂದೆಡೆ ಹರತಾಳು ಹಾಲಪ್ಪ ಬಿಜೆಪಿ ಹಿರಿಯ ಶಾಸಕ. ಮೂರು ಬಾರಿ ಬಿಜೆಪಿಯಿಂದ ಕ್ಷೇತ್ರ ಬದಲಿಸಿ ಗೆದ್ದ ಇವರು ಯಡಿಯೂರಪ್ಪಗೆ ಆಪ್ತರು. ಹೇಗಾದರೂ ಸರಿಯೇ ಈ ಬಾರಿ ಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರು. ಬಿಜೆಪಿಯಲ್ಲಿ ಭಾರೀ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಯಡಿಯೂರಪ್ಪ ಹವಾ ಶಿವಮೊಗ್ಗದಲ್ಲಿದ್ದರೆ ಅದರ ಶೇ.30ರಷ್ಟು ಪಾಲು ಕುಮಾರ್ ಬಂಗಾರಪ್ಪನಿಗೆ ಸಲ್ಲುತ್ತದೆ. ಸದ್ಯ ತಾನು ಕೂಡ ಈಗ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಮಂತ್ರಿ ಮಂಡಲದಲ್ಲಿ ಅವಕಾಶ ಮಾಡಿಕೊಡಿ ಎಂದು ಯಡಿಯೂರಪ್ಪ ಮೇಲೆ ಒತ್ತಡ ಹಾಕಿದ್ದಾರೆ.

ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ರುದ್ರೇಗೌಡರು ಈಗ ಪರಿಷತ್ ಸದಸ್ಯರು. ಬಿಜೆಪಿಪರ ಮೊದಲಿನಿಂದಲೂ ನಿಷ್ಠೆ ತೋರಿಸಿಕೊಂಡು ಬಂದ ಇವರು ಸಚಿವ ಸ್ಥಾನದ ಆಕಾಂಕ್ಷಿ. 75 ವರ್ಷ ಗಡಿ ದಾಟಿದ ರುದ್ರೇಗೌಡರು ಈ ಬಾರಿ ಹೇಗಾದರೂ ನನಗೆ ಮಂತ್ರಿ ಸ್ಥಾನ ಕೊಡಿಸಿ ಎಂದು ಬಿಎಸ್ವೈ ಬೆನ್ನಿಗೆ ಬಿದ್ದಿದ್ದಾರೆ.

ಇಷ್ಟು ಜನರ ಪೈಕಿ ಯಾರನ್ನಾದರೂ ಇಬ್ಬರನ್ನು ಮಂತ್ರಿ ಮಾಡಲೇಬೇಕು. ಈಗಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರಗೆ ಮಂತ್ರಿ ಸ್ಥಾನ ಪಕ್ಕಾ ಆಗಿದೆ. ಶಿವಮೊಗ್ಗದಿಂದ ಮತ್ತೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಯಾರ ಹೆಸರನ್ನು ಸೂಚಿಸುವುದು ಎನ್ನುವುದೇ ಯಡಿಯೂರಪ್ಪಗೆ ದೊಡ್ಡ ಸವಾಲಾಗಿದೆ.

ಇನ್ನು, ನಾಲ್ವರಲ್ಲಿ ಒಬ್ಬರ ಹೆಸರನ್ನು ಅಳೆದು ತೂಗಿ ಯಡಿಯೂರಪ್ಪ ಹೈಕಮಾಂಡ್ಗೆ ಸೂಚಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಒಂದು ವೇಳೆ ಈ ಹೆಸರು ಕೆ.ಎಸ್ ಈಶ್ವರಪ್ಪ ಆದರೆ, ಉಳಿದ ಮೂವರಿಗೆ ಮಂತ್ರಿ ಸ್ಥಾನ ಸಿಗೋದು ಡೌಟ್. ಕೆ.ಎಸ್ ಈಶ್ವರಪ್ಪ ಹೆಸರು ಸೂಚಿಸಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಹೀಗಾಗಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕೂತೂಹಲ ರಾಜಕೀಯ ವಲಯದಲ್ಲಿದೆ.

Tags: Basavaraj BommaiBJPShivamoggaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಪೆಗಸಸ್ ಬೇಹುಗಾರಿಕೆ ಪಟ್ಟಿಯಲ್ಲಿರುವ ಐವರು ಪತ್ರಕರ್ತರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ : ತನಿಖೆಗೆ ಆದೇಶಿಸುವಂತೆ ಮನವಿ!

Next Post

OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

Related Posts

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?
ರಾಜಕೀಯ

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

by ಪ್ರತಿಧ್ವನಿ
May 21, 2026
0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “Cockroach Janata Party” ಎಂಬ ಪದ ಭಾರೀ ವೈರಲ್ ಆಗುತ್ತಿದೆ. ಮೊದಲ ನೋಟಕ್ಕೆ ಇದು ಹಾಸ್ಯ, ಮೀಮ್ ಅಥವಾ ಟ್ರೋಲ್ ರಾಜಕೀಯದ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
Next Post
OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada