ಶಿವಾಜಿ ಸುರತ್ಕಲ್ 2 – The Mysterious Case of ಮಾಯಾವಿ ಸಿನಿಮಾ, ಬಿಡುಗಡೆಯಾಗಿ ಎರಡು ವಾರಗಳ ಯಶಸ್ವಿ ಬೆಳ್ಳಿ ತೆರೆಯ ಓಟದ ನಂತರ ಭರದಿಂದ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಖುಷಿಯ ವಿಚಾರ ಏನಂದ್ರೆ ಹಲವು ಉನ್ನತ ಮಟ್ಟದ ಸಾಧಕರು ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನೆಟ್ ಫ್ಲಿಕ್ಸ್ ನ ಇಂಡಿಯನ್ ಡಿಟೆಕ್ಟಿವ್ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ಹಾಗೂ ಸೂಪರ್ ಕಾಪ್ ಎಂದೇ ಪ್ರಸಿದ್ಧರಾದ ಶ್ರೀ ಶಶಿಕುಮಾರ್, DIG Railways, ಅವರು ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪೋಲಿಸ್ ತನಿಖಾ ವಿಧಾನಗಳನ್ನು, ವಿಶೇಷವಾಗಿ ರಮೇಶ್ ಅರವಿಂದ್ ರವರ ಪಾತ್ರವನ್ನು ಬಹಳ ಮೆಚ್ಚಿದ್ದಾರೆ. ಡಿಜಿಪಿ ಹಾಗೂ ಐ ಪಿ ಎಸ್ ಆಫೀಸರ್ ಆದ ರೂಪಾ ಮುದ್ಗಲ್ ಅವರು ಕೂಡಾ ಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನದ ಬಗ್ಗೆ, ಆಕಾಶ್ ಶ್ರೀವತ್ಸ ಅವರ ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವಿಶೇಷಾಗಿ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಅವರ ಪಾತ್ರವನ್ನು ಹೊಗಳಿದ್ದಾರೆ. ತಾನೂ ಕೂಡಾ ಒಬ್ಬ ಮಹಿಳಾ ಪೋಲಿಸ್ ಅಧಿಕಾರಿಯಾದ್ದರಿಂದ, ಮೇಘನಾ ಅವರ ಪಾತ್ರ ಇನ್ನಷ್ಟು ಹತ್ತಿರವಾಯಿತು ಎಂದಿದ್ದಾರೆ.
ಜಯದೇವಾ ಹ್ಱುದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು ಕೂಡಾ ಚಿತ್ರವನ್ನು ನೋಡಿದರು. ಚಿತ್ರವು ಅವರಿಗೆ ಬಹುವಾಗಿ ಮೆಚ್ಚುಗೆಯಾಗಿ, ಹೀಗೆಯೇ ಭವಿಷ್ಯದಲ್ಲಿ ತಂಡವು ಮತ್ತಷ್ಟು ಶಿವಾಜಿ ಸುರತ್ಕಲ್ ಚಿತ್ರಗಳನ್ನು ತಯಾರಿಸಲಿ ಎಂದರು.ಸಿಎಂ ಬೊಮ್ಮಾಯಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಶ್ರೀ ಮಂಜುನಾಥ್ ಪ್ರಸಾದ್ ಅವರು ಕೂಡ ಚಿತ್ರವನ್ನು ನೋಡಿ, ಮೆಚ್ಚಿ, ಚಿತ್ರವು ರೋಚಕವಾಗಿಯೂ, ಭಾವನಾತ್ಮಕವಾಗಿಯೂ ಇದೆ ಎಂದು ಹೇಳಿದರು. ಚಿತ್ರದ ಸಕ್ಸಸ್ ಮೀಟ್ ಅನ್ನು ರಾಮನಗರದ ಶ್ರವಣ್ ಸಿನಿಮಾಸ್ ನಲ್ಲಿ, ಹಾಗೂ ಮೈಸೂರಿನ ಡಿ ಆರ್ ಸಿ ಸಿನಿಮಾಸ್ ನಲ್ಲಿ ನಡೆಸಲಾಯಿತು. ಮೈಸೂರಿನ ಪ್ರದರ್ಶನದಲ್ಲಿ ಸಾಕಷ್ಟು ಜನ ಪೋಲಿಸ್ ಅಧಿಕಾರಿಗಳು ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ನಟಿಯರಾದ ರಾಧಿಕಾ ನಾರಾಯಣ್, ಸಂಗೀತಾ ಶ್ಱುಂಗೇರಿ ಅವರ ಜೊತೆ ವೀಕ್ಶಿಸಿದರು.
ಶಿವಾಜಿ ಸುರತ್ಕಲ್ 2 ಚಿತ್ರವು ಮೊದಲನೇ ಚಿತ್ರದ ಕಲೆಕ್ಷನ್ ಗಳನ್ನು ಮುರಿಯುವ ಭರವಸೆ ಹುಟ್ಟಿಸಿ ಯಶಸ್ವೀ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಚಿತ್ರವು ಒಂದು ಎಮೋಶನಲ್ ಥ್ರಿಲ್ಲರ್ ಎಂದು ಸಾಕಷ್ಟು ಸದ್ದು ಮಾಡಿ, ಶಿವಾಜಿ ಸುರಥ್ಕಲ್ 3 ನೇ ಭಾಗವನ್ನೂ ಮಾಡುವ ಭರವಸೆಯನ್ನು ಮೂಡಿಸಿದೆ. ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ರೇಖಾ ಕೆ ಎನ್ ಚಿತ್ರದ ಯಶಸ್ಸಿನ ಬಗ್ಗೆ ಅಪಾರವಾದ ಸಂತೋಷ ವ್ಯಕ್ತಪಡಿಸಿದ್ದಾರೆ.