ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಹೈ ಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿನಿಮಾ ನಿರ್ಮಾಪಕರ ವಿರುದ್ಧ ಅವಹೇಳನಕಾರಿಯಾಗಿ ಚಂದ್ರಚೂಡ್ ಮಾತಾಡಿದ್ದರು. ಹೀಗಾಗಿ ನಿರ್ಮಾಪಕ ಸಂಘದಿಂದ ಚಂದ್ರಚೂಡ್ ವಿರುದ್ಧ ದೂರು ನೀಡಲಾಗಿದೆ.

ನಿರ್ಮಾಪಕರ ಸಂಘದ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಂದ್ರಚೂಡ್, ತಾನು ಹೇಳಿರುವುದು ತಮಿಳು ನಿರ್ಮಾಪಕರ ಬಗ್ಗೆ ಎಂದಿದ್ದಾರೆ.

ಆದರೆ ಚಂದ್ರಚೂಡ್ ಮಾತಾಡಿರುವುದು ತಮಿಳು ಆಗಲಿ, ಬೇರೆ ಯಾರಿಗೆ ಆಗಲಿ. ಯಾವುದೇ ನಟ,ನಟಿ ಸಿನಿಮಾ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದು ಕರ್ನಾಟಕ ನಿರ್ಮಾಪಕರು ಕಿಡಿಕಾರಿದ್ದಾರೆ.






