ʻಶಿವಾಜಿ ಸುರತ್ಕಲ್-2ʼ ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್ 14ರಂದು ʻಶಿವಾಜಿ ಸುರತ್ಕಲ್2ʼ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಮತ್ತೊಮ್ಮೆ ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್, ಡಿಟೆಕ್ಟಿವ್ ಶಿವಾಜಿ ಸುರತ್ಕಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ʻಶಿವಾಜಿ ಸುರತ್ಕಲ್ʼ ಸಿನಿಮಾ ಬಿಡುಗಡೆಯಾಗಿ ಸಿನಿಪ್ರೇಕ್ಷಕರ ಗಮನ ಸೆಳೆದಿತ್ತು. ಕೊರೊನಾ ಲಾಕ್ಡೌನ್ನಿಂದ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಕೊಂಚ ಹಿನ್ನಡೆಯಾದ್ರೂ ಒಟಿಟಿಯಲ್ಲಿ ಯಶಸ್ಸು ಕಂಡಿತ್ತು.
ಈ ಬಾರಿ ಪಾರ್ಟ್-2ಗೆ ತಕ್ಕಂತೆ ಚಿತ್ರದಲ್ಲಿ ಎಲ್ಲವೂ ಡಬಲ್ ಆಗಿದ್ದು, ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲವೂ ಸಖತ್ ಕಿಕ್ ಕೊಡಲಿದೆ. ಈ ಸಿನಿಮಾದಲ್ಲಿ ಶಿವಾಜಿ ಸುರತ್ಕಲ್ ಕೇಸ್ ನಂಬರ್ 131ರ ಹಿಂದೆ ಬಿದ್ದಿದ್ದು, ಮತ್ತಷ್ಟು ಸವಾಲುಗಳ ಜೊತೆಗೆ, ಕಣ್ಣ ಮುಂದೆ ಇರೋ ಕೊಲೆಗಾರನನ್ನ ಹಿಡಿಯೋಕೆ ಶಿವಾಜಿ ಏನೆಲ್ಲಾ ಸರ್ಕಸ್ ಮಾಡ್ತಾನೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು.
ಈ ಚಿತ್ರದಲ್ಲಿ ಪೊಲೀಸ್ ಮೇಲಾಧಿಕಾರಿಯಾಗಿ ನಟಿ ಮೇಘನಾ ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಕ್ಯಾಮರಾ ವರ್ಕ್, ಬಿಜಿಎಂ ಎಲ್ಲವೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಪೂರಕವಾಗಿದೆ.
ಮತ್ತೊಮ್ಮೆ ಶಿವಾಜಿಯಾಗಿ ರಮೇಶ್ ಅರವಿಂದ್ ಎನರ್ಜಿಟಿಕ್ ಪರ್ಫಾಮೆನ್ಸ್ ನೀಡಿದ್ದಾರೆ. ಚಿತ್ರತಂಡ ಹೇಳೋ ಹಾಗೆ ಪಾರ್ಟ್ 1ಕ್ಕಿಂತ ಪಾರ್ಟ್ 2 ಹಲವು ಪಟ್ಟು ದೊಡ್ಡದಾಗಿದೆಯಂತೆ. ಒಟಿಟಿಗೆ ಕಾಯದೇ ಎಲ್ಲರೂ ಥಿಯೇಟರ್ಗೇ ಹೋಗಿ ಸಿನಿಮಾ ನೋಡಿ ಅಂತ ಚಿತ್ರತಂಡ ಹೇಳಿದೆ