ದಕ್ಷಿಣ ಭಾರತದ ಸ್ಟಾರ್ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯಾ, ಟಿ-20 ಟೂರ್ನಿಯ 16ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ʻಪುಷ್ಪಾʼ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ರು. ರೆಡ್ ಹಾಗೂ ಗೋಲ್ಡನ್ ಬಣ್ಣದ ಬ್ಲೌಸ್ ಮತ್ತು ಸ್ಕರ್ಟ್ ಧರಿಸಿ ಭರ್ಜರಿ ಸ್ಟೆಪ್ ಹಾಕಿದ್ರು.

ಬಳಿಕ ನಟಿ ತಮನ್ನಾ ʻಪುಷ್ಪಾʼ ಚಿತ್ರದ ಊ ಅಂಟಾವಾ ಸೇರಿದಂತೆ ಇನ್ನೂ ಕೆಲ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮದ ನಂತರ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ಶುರುವಾಯ್ತು.

ಐಪಿಎಲ್‌ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ಸಾಧಿಸಿತು