
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನದ ವೀಕ್ಷಕರು ಸಿನಿಮಾ ಚೆನ್ನಾಗಿದೆ ಅನ್ನೋ ಮಾಹಿತಿ ಕೊಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾವ ಚಿತ್ರವೂ ಬಿಡುಗಡೆ ಆಗದೆ ಮ್ಯಾಕ್ಸ್ ಮೂಲಕ ತೆರೆ ಮೇಲೆ ಬಂದಿರುವ ಸುದೀಪ್, ತನ್ನ ಅಬಿಮಾನಿಗಳಿಗೆ ಮೋಸ ಮಾಡಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಆದರೆ ಸಾಮಾಜಿಕ ಜಾಲತಾಣಗಳ ಕೌಂಟರ್ಗೆ ಕಿಚ್ಚ ಸುದೀಪ್ ಟಾಂಟ್ ಕೊಟ್ಟಿದ್ದಾರೆ.
ಮ್ಯಾಕ್ಸ್ ಸಿನಿಮಾ ಉತ್ತಮ ಆರಂಭ ಪಡೆದಿದ್ದರೂ ಕೆಲವೊಬ್ಬರು ಮ್ಯಾಕ್ಸ್ ಸಿನಿಮಾ ಬಗ್ಗೆ ನೆಗೆಟಿವ್ ಪೋಸ್ಟ್ ಮಾಡುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ಚೆನ್ನಾಗಿಲ್ಲ ಅನ್ನೋ ರೀತಿ ಪೋಸ್ಟ್ಗಳನ್ನು ಹಾಕಲಾಗ್ತಿದೆ. ಅದರಲ್ಲೂ ನಟ ದರ್ಶನ್ ಅಬಿಮಾನಿಗಳ ಪೇಜ್ನಲ್ಲಿ ಈ ರೀತಿಯ ನೆಗೆಟೀವ್ ಪೋಸ್ಟ್ಗಳು ಬರುತ್ತಿರೋದಕ್ಕೆ ಕಿಚ್ಚ ಸುದೀಪ್ ಬಳಗ ರಿಯಾಕ್ಟ್ ಮಾಡಿದ್ಯಾ..? ಅನ್ನೋ ಅನುಮಾನ ಮೂಡುತ್ತಿದೆ.
ಮ್ಯಾಕ್ಸ್ ಸಿನಿಮಾ ಮೊದಲ ದಿನ ಉತ್ತಮ ಆರಂಭ ಪಡೆದಿರುವ ಕಾರಣಕ್ಕೆ ಕೇಕ್ ಕಟಿಂಗ್ ಮಾಡಿದ್ದು, ಆ ಕೇಕ್ ಮೇಲೆ BOSSISM ಕಾಲ ಮುಗೀತು. MAXIMUM MASS ಕಾಲ ಶುರುವಾಯ್ತು ಅನ್ನೋ ಟೈಟಲ್ ಕೊಡಲಾಗಿದೆ. ಇಲ್ಲೀವೆರೆಗೂ ಸ್ಯಾಂಡಲ್ವುಡ್ ಬಾಸ್ ಎಂದು ಕರೆಸಿಕೊಳ್ತಿದ್ದ ದರ್ಶನ್ ಕಾಲ ಮುಗೀತು ಅನ್ನೋ ಸಂಕೇತವನ್ನು ಈ ರೀತಿ ಬರೆದು ಟಾಂಟ್ ಮಾಡಿದ್ರಾ..? ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಿದೆ.
