ಮಂಡ್ಯ : ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆ ಇಂದು ಹೊಡೆದಾಟಕ್ಕೆ ಸಾಕ್ಷಿಯಾಗಿದ್ದು.

ಸಾಗರ್ ಎಂಬಾತ ಪೊಲೀಸರ ಮೇಲೆಯೆ ಹಲ್ಲೆ ಮಾಡಿದ್ದಾನೆ. ಇದೀಗ ಪೊಲೀಸರು ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಮಾಜಿ ಪುರಸಭೆ ಅಧ್ಯಕ್ಷನ ಮಗ ಸಾಗರ್ ಎಂಬಾತನ ವಿರುದ್ದ ಜಮೀನು ವಿಚಾರವಾಗಿ ದೂರು ಬಂದ ಹಿನ್ನಲೆ ಪೊಲೀಸರು ಆತನನ್ನು ಠಾಣೆಗೆ ಕರೆಸಿದ್ದರು.

ಇಂದು ವಿಚಾರಣೆಗೆ ಹಾಜರಾಗಿದ್ದ ಸಾಗರ್ ಮತ್ತು ಠಾಣೆಯ ಪೊಲೀಸರ ನಡುವೆ ವಾಗ್ವಾದ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ವಿಚಾರಣೆಗೆ ಹಾಜರಾಗಿದ್ದ ಸಾಗರ್ ಪೊಲೀಸರ ಕಪಾಳಕ್ಕೆ ಹೊಡೆದಿದ್ದು. ಅಲ್ಲಿಗೆ ಬಂದ ಇತರ ಪೊಲೀಸರ ಕೊರಳ ಪಟ್ಟಿಯನ್ನು ಹಿಡಿದು ದರ್ಪ ಮೆರೆದಿದ್ದಾನೆ.





