• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಾವರ್ಕರ್‌ ʼಶೌರ್ಯʼವನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ : ಸಾವರ್ಕರ್‌ ಅಲ್ಲ ʼSorry ವರ್ಕರ್‌ʼ ಎಂದ ನೆಟ್ಟಿಗರು!

ಫೈಝ್ by ಫೈಝ್
February 26, 2022
in ಕರ್ನಾಟಕ, ದೇಶ
0
ಸಾವರ್ಕರ್‌ ʼಶೌರ್ಯʼವನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ : ಸಾವರ್ಕರ್‌ ಅಲ್ಲ ʼSorry ವರ್ಕರ್‌ʼ ಎಂದ ನೆಟ್ಟಿಗರು!
Share on WhatsAppShare on FacebookShare on Telegram

ಹಿಂದೂ ರಾಷ್ಟ್ರದ (Hindu Nation) ಕಲ್ಪನೆಯ ಬೀಜ ಮೊದಲು ಬಿತ್ತಿದ, ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ ಸಾವರ್ಕರ್‌ (vinayak damodar savarkar) ಅವರ ಪುಣ್ಯಸ್ಮರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಅಧಿಕೃತ ಫೇಸ್‌ಬುಕ್‌ (FaceBook) ಖಾತೆ ಮೂಲಕ ಹಾಕಿರುವ ಪೋಸ್ಟ್‌ ಈಗ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

“ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ.” ಎಂದು ಸಿಎಂ ಬೊಮ್ಮಾಯಿ @CMofKarnataka ಫೇಸ್ಬುಕ್‌ ಖಾತೆ ಮೂಲಕ ಪೋಸ್ಟ್‌ ಹಂಚಿದ್ದಾರೆ.

ಇದು ಸಾಕಷ್ಟು ವ್ಯಂಗ್ಯಕ್ಕೆ ಕಾರಣವಾಗಿದೆ. ಸಾವರ್ಕರ್‌ ವೀರ ಅಲ್ಲ ಹೇಡಿ ಎಂದು ಕೆಲವರು ಕರೆದರೆ, ಬ್ರಿಟೀಷರ ಬೂಟು ನೆಕ್ಕುತ್ತಿದ್ದ ಸಾವರ್ಕರ್‌ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಬ್ರಿಟೀಷರ ಪಿಂಚಣಿ ಪಡೆದು, ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಒಬ್ಬನನ್ನು ಸ್ವಾತಂತ್ರ್ಯ ವೀರ ಎಂದು ಕರೆಯುತ್ತಿದ್ದೀರ, ನೀವು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಹಾಳು ಮಾಡುತ್ತಿದ್ದೀರ ಎಂದು ನೆಟ್ಟಿಗರು ತರಾಟೆಗೆ ಎಳೆದಿದ್ದಾರೆ.

“ನೀವು ವಯಕ್ತಿಕವಾಗಿ ಸಮರ್ಥಿಸಿಕೊಳ್ಳಿ ಸರ್ ರಾಜ್ಯ ಮುಖ್ಯಮಂತ್ರಿಯಾಗಿ ಇವರನ್ನು ಸಮರ್ಥಿಸಿಕೊಳ್ಳಬೇಡಿ..ಯಾಕಂದ್ರೆ ಹೆಮ್ಮೆಯ ಭಾರತ ಮಾತೆಯ ಪುತ್ರರು ನಮ್ಮ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನವ್ವ (sangolli rayanna, kittur rani chennamma) ಇವರು ಯಾರು ಎಂದು ಬ್ರಿಟಿಶರ (British) ಬಳಿ ಸ್ಖಮೆ ಕೇಳದೆ ವೀರ ವೇಶದಿಂದ ಹೋರಾಡಿ ದೇಶಕ್ಕೆ ಪ್ರಾಣ ಬಿಟ್ಟರು ನಿಮ್ಮ ಸರ್ವಕರ್ ತರ ಬ್ರಿಟಿಷರ ಬಳಿ ಸ್ಖಮೆ ಕೇಳಿ ಪಿಂಚಣಿ ಪಡೆಯಲಿಲ್ಲ” ಎಂದು ಮಧುಸೂಧನ್‌ ಗೌಡ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಹೆಸರಿನ ಖಾತೆಯಿಂದ ಸಾವರ್ಕರ್‌ ರನ್ನು ಶ್ಲಾಘಿಸಿ ಹಾಕಿರುವ ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳೆಲ್ಲವೂ ವ್ಯಂಗ್ಯಭರಿತವೂ, ವಿಡಂಬಣಾತ್ಮಕವೂ ಆಗಿರುವುದು ಇದೀಗ ಸಿಎಂ ಮುಜುಗರಕ್ಕೆ ಕಾರಣವಾಗಿದೆ. ಒಟ್ಟಾರೆ, ಸಾವರ್ಕರ್‌ಅನ್ನು ವೀರ ಎಂದು ಸಂಬೋಧಿಸಿದ ಮುಖ್ಯಮಂತ್ರಿಯನ್ನು ನೆಟ್ಟಿಗರು ಹಿಗ್ಗಾಮುಗ್ಗ ಗೇಲಿ ಮಾಡುತ್ತಿದ್ದಾರೆ.

ಸಾವರ್ಕರ್‌ ಬಗ್ಗೆ ಬಿಜೆಪಿಗರ ವಿಪರೀತ ಪ್ರೀತಿ ರಾಜ್ಯದಲ್ಲಿ ಈ ಹಿಂದೆ ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೂ ಕಾರಣವಾಗಿತ್ತು. ಕರ್ನಾಟಕದಲ್ಲೇ ಅಪ್ರತಿಮ ಸ್ವಾತಂತ್ರ್ಯ ವೀರರಿರುವಾಗ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ನಾಮಕರಣ ಮಾಡಿರುವುದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದವು.

ಮರಾಠಿಗ ಸಾವರ್ಕರ್‌ (Marata Savarkar) ಬದಲು ಕನ್ನಡಿಗ ಸಂಗೊಳ್ಳಿ ರಾಯಣ್ಣ ಅವರ ಹೆಸರು ಮೇಲ್ಸೇತುವೆಗೆ ಇಡುವಂತೆ ಬೇಡಿಕೆಗಳು ಹೆಚ್ಚಾಗಿದ್ದವು. ಕೊನೆಗೆ ಕನ್ನಡಪರ ಸಂಘಟನೆಗಳ ನಾಯಕರನ್ನು ಬಂಧಿಸಿ ಮೇಲ್ಸೇತುವೆಗೆ ಸಾವರ್ಕರ್‌ ನಾಮಕರಣ ಮಾಡಿ ಉದ್ಘಾಟಿಸಲಾಗಿತ್ತು.

ಸಾವರ್ಕರ್‌ ಕುರಿತ ತಕರಾರುಗಳು :

ಗಾಂಧಿ ಹತ್ಯೆಯಲ್ಲಿ (Gandhi Kill) ದೋಷಾರೋಪ ಪಟ್ಟಿ ಹೊರಿಸಲ್ಪಟ್ಟಿದ್ದ ಸಾವರ್ಕರ್‌ ಬಗ್ಗೆ ಅನೇಕ ವಿವಾದಾತ್ಮಕ ವದಂತಿಗಳಿವೆ. ಗಾಂಧೀ ಹಂತಕ ನಾಥೂರಾಮ್‌ ಗೋಡ್ಸೆ (nathuram godse) ಜೊತೆ ಸಾವರ್ಕರ್‌ಗೆ ಸಲಿಂಗ ಸಂಬಂಧವಿತ್ತು, ನಕಲಿ ಹೆಸರಿನಲ್ಲಿ ತನ್ನ ಬಗ್ಗೆಯೇ ವೈಭವೀಕರಿಸಿ, ಕಲ್ಪಿತ ಶೌರ್ಯ ಕತೆಗಳನ್ನು ಹೆಣೆದು ಪುಸ್ತಕ ಬರೆದಿದ್ದಾರೆ ಎನ್ನುವುದು ಅದರಲ್ಲಿ ಬಹಳ ಪ್ರಮುಖವಾದುದು.

ಅದಾಗ್ಯೂ, ಸಾವರ್ಕರ್‌ ಅನ್ನು ಬಲಪಂಥೀಯರು ʼವೀರ್‌ʼ ಎಂದು ಕರೆದರೆ, ಆದರೆ, ಸಾವರ್ಕರ್‌ ರನ್ನು ವೀರ್‌ ಅಲ್ಲ ಹೇಡಿ ಎಂದು ಇನ್ನೊಂದು ವರ್ಗ ಕರೆಯುತ್ತದೆ. ಅದಕ್ಕೆ ಕಾರಣ ಬ್ರಿಟೀಷರಿಗೆ ಸಾವರ್ಕರ್‌ ಕ್ಷಮೆ ಕೋರಿ ಬರೆದಿದ್ದ ಪತ್ರ ಹಾಗೂ ಬ್ರಿಟೀಷರಿಂದ ಅವರು ಪಡೆಯುತ್ತಿದ್ದ ಪಿಂಚಣಿ.

ಅಂಡಮಾನ್‌ ನಲ್ಲಿ ʼಕಾಲಪಾನಿʼ ಶಿಕ್ಷೆಯಿಂದ ಪಾರಾಗಲು ಸಾವರ್ಕರ್ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರವನ್ನು ಉಲ್ಲೇಖಿಸಿ‌ ಸಾವರ್ಕರ್‌ ಓರ್ವ ಹೇಡಿ, ಸ್ವಾತಂತ್ರ್ಯ ವೀರ ಅಲ್ಲ ಎಂದು ಹಲವು ಇತಿಹಾಸಕಾರರು ಬರೆಯುತ್ತಾರೆ. ಸ್ವಾತಂತ್ರ್ಯ ಹೋರಾಟ ಚಳುವಳಿಯಿಂದ ದೂರ ನಿಲ್ಲುವುದಾಗಿ ಬ್ರಿಟೀಷರಿಗೆ ಕೊಟ್ಟ ಭರವಸೆಯನ್ನು ಮುರಿದ ಉದಾಹರಣೆ ಮತ್ತೆ ಕಾಣುವುದಿಲ್ಲ.

ಭಾರತದ ಸ್ವಾತಂತ್ರ್ಯ ಸಂಘರ್ಷ ಇತಿಹಾಸದಲ್ಲಿ ಸಾವಿರಾರು ವೀರ ಹೋರಾಟಗಾರರು ಇದ್ದರೂ ಬಿಜೆಪಿ, ಹಾಗೂ ಸಂಘಪರಿವಾರ ಇಂತಹ ವಿವಾದಾತ್ಮಕ ವ್ಯಕ್ತಿಯನ್ನು ತಮ್ಮ ʼಐಕಾನ್‌ʼ ಆಗಿ ಬಳಸಲು ಹಾಗೂ ಅವರನ್ನು ʼವೀರʼನನ್ನಾಗಿ ಬಿಂಬಿಸಲು ಬಹಳ ಶ್ರಮಿಸುತ್ತಿದೆ.

ಇದಿಕ್ಕೆ ಮುಖ್ಯ ಕಾರಣ, ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮೊದಲು ಬಿತ್ತಿದ, ಆ ಮೂಲಕ ದೇಶ ವಿಭಜನೆಗೆ ಪರೋಕ್ಷ ಕಾರಣವಾದ ಸಾವರ್ಕರ್‌ ಹಿಂದುತ್ವದ ಆರಂಭ ಕಾಲದ ಪ್ರತಿಪಾದಕರು. ಅವರಿಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದೇ ಗುರಿಯಾಗಿತ್ತು. ಧ್ವೇಷಗಳಿಂದ ತುಂಬಿದ ಅವರ ವಿಚಾರಧಾರೆಗಳನ್ನು ಪ್ರಚಾರ ಮಾಡಲೇ ಸಾವರ್ಕರ್‌ ಕುರಿತು ಕಲ್ಪಿತ ಶೌರ್ಯ ಕಥೆಗಳನ್ನು ಹಂಚಲಾಗುತ್ತದೆ. ಅಂಡಮಾನ್‌ ಜೈಲಿನಿಂದ ಸಮುದ್ರದಲ್ಲಿ ಈಜಿಯೇ ಫ್ರಾನ್ಸ್‌ ತಲುಪಿದರು ಅನ್ನುವುದು ಇಂತಹ ಕಥೆಗಳಲ್ಲಿ ಒಂದು.

ಆದರೆ, ಬಿಜೆಪಿ, ಸಂಘ ಪರಿವಾರ ಎಷ್ಟೇ ಶ್ರಮಿಸಿದರೂ, ಸಾವರ್ಕರ್‌ ಅನ್ನು ವೀರ ಎಂದು ಸಾರ್ವತ್ರಿಕಗೊಳಿಸಲು ಸಂಪೂರ್ಣ ಸಾಧ್ಯವಾಗಿಲ್ಲ. ಬ್ರಿಟೀಷರಲ್ಲಿ ಕ್ಷಮೆ ಕೋರಿ, ಸ್ವತಂತ್ರ ಹೋರಾಟ ಚಳುವಳಿಯಿಂದ ದೂರ ನಿಂತ ಸಾವರ್ಕರ್‌ ಚರಿತ್ರೆ ಇತಿಹಾಸದಲ್ಲಿ ನಿಚ್ಚಳವಾಗಿರುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ಐಟಿ ಸೆಲ್‌ ಕಾಳಪಾನಿಯ ಭೀಕರತೆಯನ್ನು ವಿವರಿಸುತ್ತಾ ಸಾವರ್ಕರ್‌ ಕ್ಷಮೆ ಕೇಳಿದ್ದನ್ನು ಸಮರ್ಥಿಸಿದರೆ, ಸಾವರ್ಕರ್‌ ಕ್ಷಮೆ ಕೇಳಲು ಗಾಂಧಿಯೇ ಸಲಹೆ ನೀಡಿದ್ದರು ಎಂದು ರಾಜನಾಥ್‌ ಸಿಂಗ್‌ ಆಧಾರ ರಹಿತ ಆರೋಪ ಹೊರಿಸಲು ಇದೇ ಕೀಳರಿಮೆ ಕಾರಣ.

ಬ್ರಿಟೀಷರೊಂದಿಗೆ ಕ್ಷಮೆ ಕೇಳಿರುವುದು, ಸ್ವತಂತ್ರ ಚಳುವಳಿಯಿಂದ ದೂರ ಸರಿದು ಬದುಕಿದ್ದು ಎಲ್ಲವೂ ಒಂದು ಕಡೆಯಾದರೆ, ಸಾವರ್ಕರ್‌ ಚಿಂತನೆಗಳು ಎಷ್ಟು ವಿಷಕಾರಿಯಾಗಿತ್ತು ಎನ್ನುವುದು ಅವರ ಕುರಿತು ಇರುವ ಇನ್ನೊಂದು ತಕರಾರು. ರಾಜಕೀಯ ಕಾರಣಗಳಿಗಾಗಿ ಮಹಿಳೆಯರ ಮೇಲಿನ ಸಮರ್ಥನೆ ಅವರ ತಣ್ಣಗಿನ ಕ್ರೌರ್ಯವನ್ನು ಬಯಲು ಮಾಡಿದೆ.

ವಿನಾಯಕ ದಾಮೋದರ ಸಾವರ್ಕರ್ ತನ್ನ ಪುಸ್ತಕಗಳಲ್ಲಿ ಒಂದಾದ “ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯನ್ ಹಿಸ್ಟರಿ” (ಭಾರತದ ಇತಿಹಾಸದ ಆರು ಮಹತ್ವದ ಪರ್ವಗಳು) ಎಂಬ ಪುಸ್ತಕದಲ್ಲಿ ಮುಸ್ಲಿಂ ಮಹಿಳೆಯನ್ನು ಅತ್ಯಾಚಾರ ಮಾಡುವುದು ಯಾಕೆ ಸಮರ್ಥನೀಯ ಎಂಬುದರ ಬಗ್ಗೆ ಚರ್ಚಿಸುತ್ತಾರೆ ಹಾಗೂ ಅವಕಾಶ ಸಿಕ್ಕಾಗ ಅದನ್ನು(ಅತ್ಯಾಚಾರವನ್ನು) ಮಾಡದೇ ಇರುವುದು ಸದ್ಗುಣವಾಗಲೀ, ಶೌರ್ಯವಾಗಲೀ ಅಲ್ಲ; ಬದಲಾಗಿ ಹೇಡಿತನ ಎಂದು ಪ್ರತಿಪಾದಿಸುತ್ತಾರೆ. (ಆಕರ: ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್’ ಬಿಡುಗಡೆ ಮಾಡಿರುವ ಆನ್ಲೈನ್ ಆವೃತ್ತಿಯ ಅಧ್ಯಾಯ VIII)

ಮಹಿಳೆಯರ ಮೇಲಿನ ಅತ್ಯಾಚಾರಗಳು ಜನಸಂಖ್ಯೆಯನ್ನು ವಿಸ್ತರಿಸುವ ತಂತ್ರವಾಗಿದ್ದು, ಹಿಂದೂ ರಾಜರುಗಳು ಮುಸ್ಲಿಂ ಮಹಿಳೆಯರ ಮೇಲೆ ಈ ತಂತ್ರ ಬಳಸಲಿಲ್ಲವೆಂದು ಅವರು ತಮ್ಮ ಪುಸ್ತಕದಲ್ಲಿ ಸುದೀರ್ಘವಾಗಿ ಚರ್ಚಿಸುತ್ತಾರೆ. ಹಾಗೂ, ಈ ತಂತ್ರ ಬಳಸದೆ ಇರುವುದು ಹೇಡಿತನ ಎಂದು ಬಣ್ಣಿಸುತ್ತಾರೆ. ಇಂತಹ ಒಬ್ಬ ವ್ಯಕ್ತಿಯನ್ನು ಬಹುಸಂಸ್ಕೃತಿ ಸಹಿಷ್ಣು ಭಾರತದಲ್ಲಿ ಅನಗತ್ಯವಾಗಿ ವಿಜೃಂಭಿಸುವುದು ಎಷ್ಟು ಅಪಾಯಕಾರಿ ಎಂಬುವುದು ಕೂಡಾ, ಸಾವರ್ಕರ್‌ ರನ್ನು ವಿರೋಧಿಸಲು ಇರುವ ಮುಖ್ಯವಾದ ಕಾರಣ.

Tags: Basavaraj BommaiBJPbritishCongress PartyFacebookGandhi KillHindu Nationkittur rani chennammaMarata SavarkarNathuram Godsesangolli rayannavinayak damodar savarkarಕಿತ್ತೂರು ಚೆನ್ನವ್ವಕೋವಿಡ್-19ನರೇಂದ್ರ ಮೋದಿನಾಥೂರಾಮ್ ಗೋಡ್ಸೆಫೇಸ್ಬುಕ್ಬಸವರಾಜ ಬೊಮ್ಮಾಯಿಬಿಜೆಪಿವಿನಾಯಕ ದಾಮೋದರ ಸಾವರ್ಕರ್ಸಂಗೊಳ್ಳಿ ರಾಯಣ್ಣಹಿಂದೂ ರಾಷ್ಟ್ರ
Previous Post

ವಿದೇಶಾಂಗ ನೀತಿಯನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿ ವಿಫಲ : B. K. Hariprasad

Next Post

ರಷ್ಯಾ ಉಕ್ರೇನ್‌ ಬಿಕ್ಕಟ್ಟು ವಿಚಾರವಾಗಿ ಭಾರತದ ನಿರ್ಧಾರ ತಪ್ಪು : Modi ಸರ್ಕಾರದ ವಿರುದ್ಧ ಸಂಸದ DK Suresh ಕಿಡಿ

Related Posts

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
0

ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ (Kempegowda International Airport) ಕರ್ನಾಟಕದ...

Read moreDetails

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

July 8, 2025

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

July 8, 2025

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

July 8, 2025
Next Post
ರಷ್ಯಾ ಉಕ್ರೇನ್‌ ಬಿಕ್ಕಟ್ಟು ವಿಚಾರವಾಗಿ ಭಾರತದ ನಿರ್ಧಾರ ತಪ್ಪು : Modi ಸರ್ಕಾರದ ವಿರುದ್ಧ ಸಂಸದ DK Suresh ಕಿಡಿ

ರಷ್ಯಾ ಉಕ್ರೇನ್‌ ಬಿಕ್ಕಟ್ಟು ವಿಚಾರವಾಗಿ ಭಾರತದ ನಿರ್ಧಾರ ತಪ್ಪು : Modi ಸರ್ಕಾರದ ವಿರುದ್ಧ ಸಂಸದ DK Suresh ಕಿಡಿ

Please login to join discussion

Recent News

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
Top Story

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

by ಪ್ರತಿಧ್ವನಿ
July 8, 2025
Top Story

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

by ಪ್ರತಿಧ್ವನಿ
July 8, 2025
Top Story

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

by ಪ್ರತಿಧ್ವನಿ
July 8, 2025
Top Story

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

by ಪ್ರತಿಧ್ವನಿ
July 8, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada