• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಕಾಲ್  ಮಾಡಿದ್ದು ಇವರಿಗೆ!CDR ಪರಿಶೀಲನೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಪ್ರತಿಧ್ವನಿ by ಪ್ರತಿಧ್ವನಿ
August 21, 2026
in Top Story, ಕರ್ನಾಟಕ
0
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಕಾಲ್  ಮಾಡಿದ್ದು ಇವರಿಗೆ!CDR ಪರಿಶೀಲನೆಯಲ್ಲಿ ಸ್ಫೋಟಕ ಮಾಹಿತಿ ಬಯಲು
Share on WhatsAppShare on FacebookShare on Telegram

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿಯಿಂದ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸಿಸಿಬಿ ಅಧಿಕಾರಿಗಳು ಜೈಲಿನಲ್ಲಿ ನಡೆಸಿದ ದಾಳಿ ವೇಳೆ ಪತ್ತೆಯಾದ ಆ್ಯಂಡ್ರಾಯ್ಡ್ ಮೊಬೈಲ್‌ನ ಕಾಲ್ ಡೀಟೇಲ್ಸ್ ರೆಕಾರ್ಡ್‌ (CDR) ಪರಿಶೀಲಿಸಿದಾಗ, ಪ್ರಜ್ವಲ್ ಹಲವು ತಿಂಗಳುಗಳಿಂದ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸಂಪರ್ಕದಲ್ಲಿದ್ದ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.

ADVERTISEMENT
Varamahalakshmi Festival KR Market : ಹೊರಗಡೆ ತಗೊಂಡ್ರೆ ಡಬಲ್ ರೇಟ್ ಆಗುತ್ತೆ, ಮಾರ್ಕೆಟಿನಲ್ಲಿ ಸ್ವಲ್ಪ ಕಮ್ಮಿ..

ತನಿಖಾಧಿಕಾರಿಗಳು ಮೊಬೈಲ್‌ನ ಸಿಮ್‌ ಕಾರ್ಡ್‌ನ ಕರೆ ವಿವರಗಳನ್ನು ಪರಿಶೀಲಿಸಿದಾಗ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಕೆಲವು ಆಪ್ತರಿಗೆ ಪದೇಪದೇ ಕರೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.ಜೈಲಿನೊಳಗೆ ಮೊಬೈಲ್ ಅಕ್ರಮವಾಗಿ ಹೇಗೆ ತಲುಪಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜಪ್ತಿ ಮಾಡಲಾದ ಮೊಬೈಲ್ ಮತ್ತು ಆ್ಯಂಡ್ರಾಯ್ಡ್ ಪ್ಯಾಡ್‌ನಲ್ಲಿದ್ದ ಸಿಮ್‌ಗಳು ಪ್ರಜ್ವಲ್ ರೇವಣ್ಣ ಅವರ ಹೆಸರಿನಲ್ಲಿ ಇರಲಿಲ್ಲ ಎನ್ನಲಾಗಿದ್ದು, ಸಿಮ್‌ಗಳನ್ನು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಪಡೆಯಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಈ ಸಿಮ್‌ಗಳ ನಿಜವಾದ ಮಾಲೀಕರು ಯಾರು? ಅವರಿಗೆ ಪ್ರಜ್ವಲ್ ರೇವಣ್ಣ ಅವರೊಂದಿಗೆ ಯಾವ ರೀತಿಯ ಸಂಪರ್ಕವಿದೆ? ಸಿಮ್‌ಗಳನ್ನು ಅವರಿಗೆ ನೀಡಿದ್ದು ಯಾರು? ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.ಇದರ ನಡುವೆ ಜೈಲಿನೊಳಗೆ ಮೊಬೈಲ್ ತಲುಪಿದ ಮಾರ್ಗದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಜೈಲಿನಲ್ಲಿದ್ದ ಮತ್ತೊಬ್ಬ ಕೈದಿ ಇನ್‌ಸ್ಟಾಗ್ರಾಂ ಮೂಲಕ ಡೆಲಿವರಿ ಬಾಯ್‌ನನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.ಹೊರಗಿನಿಂದ ವ್ಯಕ್ತಿಯೊಬ್ಬ ನೀಡುವ ಪಾರ್ಸೆಲ್‌ನ್ನು ಪಡೆದು ಜೈಲಿನೊಳಗೆ ತಲುಪಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದ್ದು, ಅದರಂತೆ ಡೆಲಿವರಿ ಬಾಯ್ ಪಾರ್ಸೆಲ್‌ ಪಡೆದುಕೊಂಡು ಅಕ್ರಮವಾಗಿ ಜೈಲಿನೊಳಗೆ ತಲುಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಡೆಲಿವರಿ ಬಾಯ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನಿಗೆ ಬೈದ ಜೆಡಿಎಸ್ ನಾಯಕರು ರೊಚ್ಚಿಗೆದ್ದ ಮಗ #pratidhvani

ಮೊಬೈಲ್ ಬಳಕೆಯ ಜೊತೆಗೆ ಪ್ರಜ್ವಲ್ ರೇವಣ್ಣ ಅವರು ಜೈಲು ನಿಯಮಗಳನ್ನು ಉಲ್ಲಂಘಿಸಿ ಕೆಲವು ಸೌಲಭ್ಯಗಳನ್ನು ಪಡೆದಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜೈಲು ಸಮವಸ್ತ್ರ ಧರಿಸದಿರುವುದು, ಸಿಂಗಲ್ ಕಾಟ್ ಬಳಸಿರುವುದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದ ಆರೋಪಗಳು ಸಹ ತನಿಖೆಯ ವ್ಯಾಪ್ತಿಗೆ ಬಂದಿವೆ.ಇಂತಹ ಸೌಲಭ್ಯಗಳು ಜೈಲಿನೊಳಗೆ ದೊರೆಯಲು ಜೈಲು ಸಿಬ್ಬಂದಿಯಲ್ಲೇ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೊಬೈಲ್‌ ಪೂರೈಕೆ ಜಾಲ, ಸಿಮ್‌ಗಳ ಮೂಲ, ಡೆಲಿವರಿ ಬಾಯ್‌ ಸಂಪರ್ಕ ಹಾಗೂ ಜೈಲಿನೊಳಗಿನ ಸಾಧ್ಯ ಸಹಕಾರದ ಕುರಿತು ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Tags: #BengaluruCrime#bhavanirevanna#ParappanaAgrahara#ParappanaAgraharaJail#Prajwalrevanna#PrajwalRevannaMobile#PrajwalRevannaNewsCCBhdrevannaJailMobileCasekarnatakanews
Previous Post

ರಾಜ್ಯದಲ್ಲಿ 43,80,740 ಮತದಾರರಿಗೆ ದಾಖಲೆ‌ ನೀಡುವಂತೆ ನೋಟಿಸ್..!

Next Post

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

Related Posts

ಈ ವಿಚಾರಕ್ಕೆ ಬಿಜೆಪಿ ಶಾಸಕರು ಸದನದಿಂದ ಪಲಾಯನ: ಬಿ.ಕೆ ಹರಿಪ್ರಸಾದ್
Top Story

ಈ ವಿಚಾರಕ್ಕೆ ಬಿಜೆಪಿ ಶಾಸಕರು ಸದನದಿಂದ ಪಲಾಯನ: ಬಿ.ಕೆ ಹರಿಪ್ರಸಾದ್

by ಪ್ರತಿಧ್ವನಿ
August 21, 2026
0

ಬೆಂಗಳೂರು: ರಾಜ್ಯದ ಜನರ ಸಂಕಷ್ಟಕ್ಕಿಂತ ಬಿಜೆಪಿ ಶಾಸಕರಿಗೆ ಸದನದಲ್ಲಿ ರಾಜಕೀಯ ಗದ್ದಲವೇ ಪ್ರತಿಷ್ಟೆಯಾಗಿರುವುದು ನಾಚಿಕೆಗೇಡು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಬಿಜೆಪಿ...

Read moreDetails
ಬಿಜೆಪಿಗೆ ಜನರ ಸಮಸ್ಯೆಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚು: ಮಧು ಬಂಗಾರಪ್ಪ ಆಕ್ರೋಶ

ಬಿಜೆಪಿಗೆ ಜನರ ಸಮಸ್ಯೆಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚು: ಮಧು ಬಂಗಾರಪ್ಪ ಆಕ್ರೋಶ

August 21, 2026
‘ಶುದ್ದೀಕರಣ’ ವಿಷಯದಲ್ಲಿ ಪಕ್ಷದ ನಾಯಕರ ಮೌನ: ಮಲ್ಲಿಕಾರ್ಜುನ ಖರ್ಗೆ ಬೇಸರ

‘ಶುದ್ದೀಕರಣ’ ವಿಷಯದಲ್ಲಿ ಪಕ್ಷದ ನಾಯಕರ ಮೌನ: ಮಲ್ಲಿಕಾರ್ಜುನ ಖರ್ಗೆ ಬೇಸರ

August 21, 2026
ಬೆಂಗಳೂರು: ಕಾರಿನಲ್ಲಿ ಪತ್ತೆಯಾದ ಬರೋಬ್ಬರಿ 9 ಕೋಟಿ ನಗದು ಯಾರಿಗೆ ಸೇರಿದ್ದು..?

ಬೆಂಗಳೂರು: ಕಾರಿನಲ್ಲಿ ಪತ್ತೆಯಾದ ಬರೋಬ್ಬರಿ 9 ಕೋಟಿ ನಗದು ಯಾರಿಗೆ ಸೇರಿದ್ದು..?

August 21, 2026
22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

August 21, 2026
Next Post
22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada