ನಟ ಶಂಕರ್ ನಾಗ್ ಅಭಿನಯದ ಗೀತಾ ಇಲ್ಲಿಯವರೆಗೂ ಜನಮಾನಸದಲ್ಲಿ ಸಂಜು ಮತ್ತು ಗೀತಾ ಎಂದೇ ಹೆಸರುವಾಸಿಯಾಗಿದೆ. 2011ರಲ್ಲಿ ನಾಗಶೇಖರ್ ನಿರ್ದೇಶನದಲ್ಲಿ ಸಂಜು ವೆಡ್ಸ್ ಗೀತಾ ಚಿತ್ರ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಸಂಜು ಮತ್ತು ಗೀತಾ.
ಇತ್ತೀಚಿಗೆ ಚಿತ್ರತಂಡವು ಸರಳವಾಗಿ ಮೂಹೂರ್ತವನ್ನ ಆಚರಿಸಿಕೊಂಡಿದೆ. ಚಿತ್ರದ ಕುರಿತು ಮಾತನಾಡಿರುವ ನಿರ್ದೇಶದ ಆರ್‌ಕೆ ಇದೊಂದು ನವೀರಾದ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಆರ್‌ಕೆ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಾಯಕ ನಟ ವಿನಯ್ ಕಾರ್ತಿಕ್ ನಿರ್ದೇಶಕ ಆರ್‌ಕೆಯವರೊಟ್ಟಿಗೆ ಇದು ನನ್ನಗೆ ಎರಡನೇ ಚಿತ್ರ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಭವ್ಯರಂತಹ ಹಿರಿಯ ನಟರೊಡನೆ ಅಭಿನಯಿಸುತ್ತಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಜಾಭಾರತ ಖ್ಯಾತಿಯ ರಾಘವೇಂದ್ರ ಮಾತನಾಡಿ ನಾನು ಈ ಚಿತ್ರದಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.
ಚಇತ್ರದಲ್ಲಿ ವಿನಯ್ ಕಾತಿಕ್ ನಾಯಕನಾಗಿ ನಟಿಸುತ್ತಿದ್ದು ಸನ್ಮಿತ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಯಕಿಯ ತಂದೆ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸುತ್ತಿದ್ದು ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಬಣ್ಣ ಹೆಚ್ಚುತ್ತಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ , ಸ್ವಾತಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಸಂಜಯ್ ಮಾಗನೂರು ಬಂಡವಾಳ ಹೂಡುತ್ತಿದ್ದು ಕೌಶಿಕ್ ಸಂಗೀತ ಸಂಯೋಜಿಸುತ್ತಿದ್ದು ನಾಗರಾಜ್ ಛಾಯಾಗ್ರಹಣ ಹಾಗೂ ಶಿವರಾಜು ಮೇಹು ಸಂಕಲನ ಈ ಚಿತ್ರಕ್ಕಿರಲಿದೆ.