ನಟ ಸಂಚಾರಿ ವಿಜಯ್ ಅವರು ಶನಿವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಸ್ನೇಹಿತ ನವೀನ್ ಜೊತೆಯಲ್ಲಿ ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ವಿಜಯ್ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದ್ದು. ವಿಜಯ್ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿದೆ. ನವೀನ್ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ.
ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ್ ಪೆಟ್ಟು ಬಿದ್ದ ತಕ್ಷಣ ಪ್ರಜ್ಞೆ ತಪ್ಪಿದ್ದಾರೆ, ಬೈಕ್ ಚಲಾಯಿಸುತ್ತಿದ್ದ ನವೀನ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಸ್ಥಳಕ್ಕೆ ಬಂದ ಸ್ನೇಹಿತರು, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ಆಸ್ಪತ್ರೆಗೆ ಕರೆತಂದಾಗಲೇ ವಿಜಯ್ ಸ್ಥಿತಿ ತುಂಬಾ ಹದಗೆಟ್ಟಿತ್ತು. ತಕ್ಷಣ ಅವರಿಗೆ ಆಪರೇಶನ್ ಕೂಡ ಮಾಡಲಾಗಿತ್ತು. ಬಹು ಮುಖ್ಯವಾಗಿ ಅವರ ಮೆದುಳಿಗೆ ಭಾರೀ ಪೆಟ್ಟಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು, ಆದರೆ ಅವರಿಗೆ ಪ್ರಜ್ಞೆ ಬಂದಿರಲಿಲ್ಲ ಎಂದು ಭಾನುವಾರ ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದರು.
ವಿಜಯ್ ತಮ್ಮ ಸಿದ್ದೇಶ್ ಕುಮಾರ್, ‘ಅಣ್ಣ ಬದುಕುವುದು ಕಷ್ಟ, ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಅಣ್ಣನ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಸೋಮವಾರ ಅಂದರೆ ಇವತ್ತು ಮದ್ಯನ ಹೇಳಿಕೆ ನೀಡಿ ಕಣ್ಣೀರಿಟ್ಟರು.
ವಿಜಯ್ ತೀರಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಡುತ್ತಿರುವಾಗ ಅಪೋಲೊ ಆಸ್ಪತ್ರೆ ಡಾಕ್ಟರ್ ನರರೋಗ ತಜ್ಞ ಅರುಣ್ ನಾಯಕ್, ನಾವು ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾತ್ರ ಹೇಳಿದ್ದೇವೆ ಅವರ ಸಾವಿನ ಕುರಿತು ಯಾವುದೆ ಮಾಹಿತಿ ಇನ್ನೂ ಅಧಿಕೃತವಾಗಿ ಹೇಳಿಲ್ಲ, ಅವರ ಎಲ್ಲಾ ಅಂಗಗಳು ತುಂಬಾ ಚನ್ನಾಗಿಯೇ ಕೆಲಸ ಮಾಡುತ್ತಿದೆ. ಮತ್ತವರ ಅಣ್ಣ ಸತೀಶ್ ಅವರು ಅಂಗಗಳ ದಾನ ಮಾಡಲು ಮುಂದಾಗಿದ್ದು ವಿಜಯ್ ಅವರು ತೀರಿಕೊಂಡ ನಂತರವು ಅವರ ಅಂಗ ಬೇರೆ ವ್ಯಕ್ತಿಗಳ ಒಳಗೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಅಪೋಲೊ ಡಾಕ್ಟರ್ ಅರಣ್, ವಿಜಯ್ ದೇಹದ ಎರಡು ಕಿಡ್ನಿ, ಎರಡು ಕಣ್ಣು ಮತ್ತು ಒಂದು ಲಿವರ್ ಅನ್ನು ದಾನ ಮಾಡಿದ್ದಾರೆ. ವಿಜಯ್ ಸಾವಿನ ಅಧಿಕೃತ ಮಾಹಿತಿಯನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ತಿಳಿಸಲಾಗುವುದು ಎಂದಿದ್ದಾರೆ. ಸಂಚಾರಿ ವಿಜಯ್ ಅವರ ಶವಸಂಸ್ಕಾರ ನಾಳೆ ಹಸ್ತಾಂತರಿಸಲಿದ್ದು ದಿನಾಂಕ 15-ಜೂನ್-2021 ರಂದು, ಸಂಚಾರಿ ವಿಜಯ್‌ರವರ ಪಾರ್ಥಿವ ಶರೀರದ ಅಂತಿಮ ದರ್ಶದ ವ್ಯವಸ್ಥೆಯನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಮಾಡಲಾಗಿದೆ. ಅದೇ ದಿನ ಸಂಜೆ ಅಂತಿಮ ವಿಧಿವಿಧಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನೆರವೇರಿಸಲಾಗುವುದು.
ಅವರ ಸಾವಿನ ಅಧಿಕೃತ ಮಾಹಿತಿ ಇನ್ನೂ ಹೊರಬರದೆ ಇದ್ದರು ಸಾವಿರಾರು ಅಭಿಮಾನಿಗಳು ತಮ್ಮ ನೋವನ್ನು ಸಮಾಜಿಕ ಜಾಲತಾಣದಲ್ಲಿ ಬರೆದು ಅವಲತ್ತುಕೊಂಡಿದ್ದಾರೆ.
ಚಿತ್ರರಂಗದ ನಟ ನಟಿಯರಿಗೆ ವಿಜಯ್ ಅವರ ಸಾವಿನ ಸುದ್ದು ಮೊದಲೇ ತಿಳಿದಿದ್ದು, ಸಂಚಾರಿ ವಿಜಯ್ ಅವರು ನಮ್ಮನ್ನು ಅಗಲಿದ್ದಾರೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಲವಾರು ಎಕ್ಸ್ಪಿರಿಮೆಂಟಲ್ ಪಾತ್ರವನ್ನು ಮಾಡಿದ್ದ ನಟ ವಿಜಯ್ ಕರ್ನಾಟಕ ಜನ ಹೃದಯ ಗೆದ್ದಿದ್ದರು. ಅದರಲ್ಲೂ ಅವರ “ನಾನು ಅವನಲ್ಲ ಅವಳು” ಚಿತ್ರ ನಿರೀಕ್ಷೆಗೂ ಮೀರಿ ಹೆಸರು ತಂದುಕೊಟ್ಟಿತು. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು.
ಕಷ್ಟದಿಂದ ಬೆಂಗಳೂರಿಗೆ ಬಂದ ನಟ ತನ್ನ ಅಪಾರ ಶ್ರಮದಿಂದ ಚಿತ್ರರಂಗಲ್ಲಿ ಹೆಸರು ಮಾಡಿದ್ದರು. ಅಂತಹಾ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿದ್ದ ಸಂಚಾರಿ ವಿಜಯ್ ಅವರ ಸಂಚಾರವನ್ನು ವಿಧಿ ನಿಲ್ಲಿಸಿದೆ.
ಸಂಚಾರಿ ವಿಜಯ್ ಅವರ ಬೆಳೆದುಬಂದ ಹಾದಿ,
ಸಂಚಾರಿ ವಿಜಯ್ ಅವರು ಜುಲೈ 17 1983 ರಂದು ಸಿಂಗಟಗೆರೆ ಹೋಬಳಿಯ, ಪಂಚನಹಳ್ಳಿ ಗ್ರಾಮದಲ್ಲಿ ಜನಿಸಿದರು. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇವರಿಗೆ ಒರ್ವ ಅಣ್ಣ ಇದ್ದು ಅವರು ಸತೀಶ್. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಳೆಯುತ್ತಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡರು. ಈಗ ಇದ್ದ ಒರ್ವ ಅಣ್ಣನನ್ನು ಬಿಟ್ಟು ನಟ ಸಂಚಾರಿ ವಿಜಯ್ ಅಗಲಿದ್ದಾರೆ.
ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ.
ರಂಗಪ್ಪ ಹೋಗ್ಬಿಟ್ನಾ, ರಾಮರಾಮ ರಘುರಾಮ,ವಿಲನ್, ದಾಸ್ವಾಳ, ಒಗ್ಗರಣೆ, ಹೋಂ ಸ್ಟೇ, ಸಿನೆಮಾ ಮೈ ಡಾರ್ಲಿಂಗ್, ಮಾರಿಕೊಂಡವರು, ಸಿಪಾಯಿ, ಶುದ್ಧಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಭಲೇ ಜೋಡಿ, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ವೈಟ್ ಹಾರ್ಸ್, ನಾನು ಅವನಲ್ಲ… ಅವಳು, ನಾತಿಚರಾಮಿ, ವರ್ತಮಾನ , ರಿಕ್ತ, ಆರ್ಯ ಮೌರ್ಯ,
ಕೃಷ್ಣ ತುಳಸಿ, ಪಿರಂಗಿಪುರ,
ಪಾದರಸ, ಹತ್ಯಾರ ನಂತಹ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಮುಖ್ಯ ಭೂಮಿಕೆಯಲ್ಲಿ ಮೊದಲು ಅಭಿನಯಿಸಿದ ನಾನು ಅವನಲ್ಲ.. ಅವಳು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು.






