ಅಮೇರಿಕಾ ಮೂಲದ ನೊವಾವಾಕ್ಸ್ ಲಸಿಕೆ ಕರೋನ ರೂಪಾಂತರಗಳ ವಿರುದ್ಧ 93% ಪರಿಣಾಮಕಾರಿ: ಅಧ್ಯಾಯನದಲ್ಲಿ ಬಹಿರಂಗ

ಅಮೇರಿಕಾ ಮೂಲದ ನೊವಾವ್ಯಾಕ್ಸ್ ಲಸಿಕೆ ಕೊರೊನಾ ವೈರಸ್ ರೂಪಾಂತರಗಳ ವಿರುದ್ಧ ಶೇಕಡಾ 90ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಲಸಿಕೆ ತಯಾರಕರು ಯುಎಸ್ ಅಧ್ಯಯನದಲ್ಲಿ ಸೋಮವಾರ ತಿಳಿಸಿದ್ದಾರೆ.

ಮಧ್ಯಮ ಮತ್ತು ತೀವ್ರ ರೋಗದ ವಿರುದ್ಧ 100% ರಕ್ಷಣೆಯನ್ನ ಪ್ರದರ್ಶಿಸಿದೆ, ಒಟ್ಟಾರೆಯಾಗಿ 90.4% ಪರಿಣಾಮಕಾರಿತ್ವ ಹೊಂದಿದೆ’ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ‘ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಯನ್ನು ಮೌಲ್ಯಮಾಪನ ಮಾಡಲು ಅಧ್ಯಯನವು ಯು.ಎಸ್ ಮತ್ತು ಮೆಕ್ಸಿಕೋದ 119 ತಾಣಗಳಲ್ಲಿ 29,960 ಸ್ಪರ್ಧಿಗಳನ್ನ ದಾಖಲಿಸಿದೆ’ ಎಂದು ಹೇಳಿದೆ.

ಮೇರಿಲ್ಯಾಂಡ್ ಪ್ರಧಾನ ಕಚೇರಿಯು 2021ರ ಮೂರನೇ ತ್ರೈಮಾಸಿಕದೊಳಗೆ ನಿಯಂತ್ರಕ ಅನುಮೋದನೆಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ತಿಂಗಳಿಗೆ 100 ಮಿಲಿಯನ್ ಡೋಸ್‌ಗಳನ್ನು ಮತ್ತು ವರ್ಷದ ಅಂತ್ಯದ ವೇಳೆಗೆ ತಿಂಗಳಿಗೆ 150 ಮಿಲಿಯನ್ ಡೋಸ್‌ಗಳನ್ನು ತಯಾರಿಸುವುದಾಗಿ ಕಂಪನಿ ಹೇಳಿದೆ.

“ಕೋವಿಡ್ ಸೋಂಕಿನ ಎಲ್ಲಾ ರೂಪಾಂತರಿಗಳ ವಿರುದ್ಧ ನೋವಾವ್ಯಾಕ್ಸ್ ಶಮಶಕಾರಿ ಲಸಿಕೆಯಾಗಿ ಬರಲಿದೆ. ಜಗತ್ತಿನಾದ್ಯಂತ ಇರುವ ಕೋವಿಡ್ ಸೋಂಕನ್ನು ಕಿತ್ತೊಗೆಯಲು ನೋವಾವ್ಯಾಕ್ಸ್ ಒಂದು ಹೆಜ್ಜೆ ಇಟ್ಟಿದೆ” ಎಂದು ನೊವಾವಾಕ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಸ್ಟಾನ್ಲಿ ಸಿ. ಎರ್ಕ್ ಹೇಳಿದ್ದಾರೆ.

“ಈ ಲಸಿಕೆಯನ್ನು ಇನ್ನೂ ಹೆಚ್ಚಿನ ಪ್ರಮಾಣದ ತಯಾರಿಸಿ ಅಗತ್ಯವಿರುವ ಜಗತ್ತಿಗೆ ತಲುಪಿಸುವ ತುರ್ತು ಪ್ರಜ್ಞೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.”

ವಿಶ‍್ವದ ಶ್ರೀಮಂತ ರಾಷ್ಟ್ರಗಳಲ್ಲಿ ಮಾತ್ರ ಲಸಿಕೆಗಳ ಲಭ್ಯವಿದೆ. ಕೆಲ ಬಡ ರಾಷ್ಟ್ರಗಳಲ್ಲಿ ಇನ್ನೂ ಕೂಡ ಲಸಿಕೆ ಕೊರತೆ ಇದ್ದೆ ಇದೆ. ಹಾಗಾಗಿ ವಿಶ್ವದೆಲ್ಲೆಡೆ ಕೋವಿಡ್ ತುರ್ತು ಪರಿಸ‍್ಥಿಗೆ ಬಳಕೆಯಾಗುವಂತೆ ಅನುಮೋದನೆಗಾಗಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ನೋವಾವ್ಯಾಕ್ಸ್ ಲಸಿಕೆಯತನ್ನು “2 ° – 8 ° ಸೆಲ್ಸಿಯಸ್ ತಾಪಮಾನದಲ್ಲಿಯೂ ಇಡಬಹುದಾಗಿದೆಸುಲಭವಾಘಿ ಈ ಲಸಿಕೆಗಳನ್ನು ಸಾಗಿಸಬಹುದು ಎಂದು ತಿಳಿಸಿದೆ.

Please follow and like us:

Related articles

Share article

Stay connected

Latest articles

Please follow and like us: