ಉಕ್ರೇನ್ ಮೇಲೆ ದಾಳಿ ಮುಂದುವರಿದಿರುವ ನಡುವೆ ರಷ್ಯಾ ಜಗತ್ತಿನ ಯಾವುದೇ ಮೂಲೆ ಬೇಕಾದರೂ ತಲುಪಬಲ್ಲ ನೂತನ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಸರಮತ್ ಅಂತರ್ ಖಂಡಗಳ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದ್ದು, ಇದು ಜಗತ್ತಿನ ಯಾವುದೇ ಮೂಲೆಗೆ ಪರಮಾಣು ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ರಷ್ಯಾ ಹೇಳಿದೆ.
ನಮ್ಮನ್ನು ಕೆಣಕುವ ಮುನ್ನ ಎರಡು ಬಾರಿ ಯೋಚಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಯುದ್ಧದಿಂದ ತಮ್ಮ ವಿರುದ್ಧ ಗುಡುಗುತ್ತಿರುವ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಪುಟಿನ್ ಈ ಕ್ಷಿಪಣಿ ಕಣ್ಣಿಗೆ ಬೀಳದ ಕ್ಷಿಪಣಿ ಎಂದು ಕರದಿದ್ದು, ಇದು ಮುಂದಿನ ತಲೆಮಾರಿನ ಕ್ಷಿಪಣಿ ಎಂದು ಹೇಳಲಾಗಿದೆ. ರಷ್ಯಾ ಹೇಳುವ ಪ್ರಕಾರ ಇದು ದೇಶದ ಸೇನಾ ಬಲ ವೃದ್ಧಿಸುವ ವಿಶಿಷ್ಟ ಮಾದರಿಯ ಪ್ರಬಲ ಅಸ್ತ್ರವಾಗಿದೆ.