2024 ರ ಜೂನ್(June)ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಪುರುಷರ ICC ಟಿ20(T20I) ವಿಶ್ವಕಪ್(World Cup) ಟೂರ್ನಿ ಜಯಗಳಿಸಲು ಎಲ್ಲಾ ದೇಶಗಳು ರಣತಂತ್ರ ರೂಪಿಸುತ್ತಿವೆ. ಜೂನ್ 2 ರಿಂದ 29 ರ ವರೆಗೆ ಟೂರ್ನಿ ನಡೆಯಲಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ವಿಶ್ವ ಕಪ್ ನಡೆಯಲಿದೆ. ಈ ಟೂರ್ನಿಯಲ್ಲಿಯೂ ಭಾರತ(Team India) ತಂಡವನ್ನು ರೋಹಿತ್ ಶರ್ಮಾ(Rohit Sharma) ಅವರೇ ಮುನ್ನಡೆಸಲಿದ್ದಾರೆ ಎಂಬ ಅಪ್ಡೇಟ್ ಅನ್ನ BCCI ಕಾರ್ಯದರ್ಶಿ ಜಯ್ ಶಾ(Jay Shah) ನೀಡಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಭಾರತ ತಂಡದ ನಾಯಕನಾಗಲಿದ್ದಾರೆ, ರೋಹಿತ್(Rohit), ವಿರಾಟ್(Virat) ಮತ್ತು ರಾಹುಲ್(Rahul) ಸೇರಿ ಹಿರಿಯ ಆಟಗಾರರನ್ನು ಟೀಮ್ ನಿಂದ ಕೈ ಬಿಡಲಾಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿತ್ತು. 2022ರ ಟಿ20 ವಿಶ್ವಕಪ್ ಬಳಿಕ ಇವರೆಲ್ಲ ಭಾರತ ಪರ ಟಿ20 ಪಂದ್ಯವನ್ನು ಆಡಿರಲಿಲ್ಲ. ಆದರೆ, ಇದೇ ವರ್ಷ ಅಫಘಾನಿಸ್ತಾನ ವಿರುದ್ಧದ ಟಿ20ಯಲ್ಲಿ ಇವರೆಲ್ಲ ಕಮ್ಬ್ಯಾಕ್ ಮಾಡಿದ್ದರು. ರೋಹಿತ್ ತಂಡದ ನಾಯಕರೂ ಆಗಿದ್ದರು. ಇದೀಗ ವಿಶ್ವಕಪ್‌ನಲ್ಲಿ ರೋಹಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಇದರೊಂದಿಗೆ ಎಲ್ಲಾ ಕುತೂಹಲಗಳಿಗೂ ತೆರೆಬಿದ್ದಿದೆ.ಭಾರತ ತನ್ನ ಮೊದಲ ಮ್ಯಾಚ್ ಅನ್ನ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಆಡಲಿದೆ. ಭಾರತದ ಎಲ್ಲ ಲೀಗ್ ಪಂದ್ಯಗಳು ಅಮೆರಿಕದಲ್ಲೇ ನಡೆಯಲಿದೆ.
#TeamIndia #RohitSharma #JayShah #BCCI #T20I #WorldCup






