ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆಯಾಗಿರುವ ಕಾಂತಾರ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆ ನಂತರ ಸಾಕಷ್ಟು ಸದ್ದು ಮಾಡುತ್ತಿದೆ.
ಇನ್ನು ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಕೂಡ ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ದೇಶನವನ್ನ ಹಾಡಿ ಗೊಗಳಿದ್ದಾರೆ. ಇನ್ನು ಈ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ.
ಈ ಕುರಿತು ಟ್ವೀಟ್ ಮಾಡಿರುವ RGV ಬಿಗ್ ಬಜೆಟ್ ಸಿನಿಮಾಗಳು ಬಂದರೆ ಮಾತ್ರ ಜನರು ಥಿಯೇಟರ್ ಕಡೆ ಬರುತ್ತಾರೆ ಎಂಬ ಕಟ್ಟುಕಥೆಯನ್ನು ನಿರ್ದೇಶಕ ರಿಷಭ್ ಶೆಟ್ಟಿ ಸುಳ್ಳು ಮಾಡಿದ್ದಾರೆ. ಮುಂದಿನ ಹಲವು ದಶಕಗಳವರೆಗೆ ಕಾಂತಾರ ಚಿತ್ರ ಒಂದು ಪಾಠವಾಗಿ ಉಳಿಯಲಿದೆ ಎಂದಿದ್ದಾರೆ.
400-500 ಕೋಟಿ ಬಿಗ್ ಬಜೆಟ್ ಚಿತ್ರಗಳು ಕಾಂತಾರ ಕಲೆಕ್ಷನ್ ನೋಡಿ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿವೆ. ಕಾಂತಾರ ಕಲೆಕ್ಷನ್ ನೋಡಿ ಬಿಗ್ ಬಜೆಟ್ ಚಿತ್ರಗಳು ಕಾಲ್ಕಿತ್ತಿವೆ ಕಾಂತಾರ ಎಂಬ ಒಂದೊಳ್ಳೆಯ ಪಾಠವನ್ನ ಹೇಳಿದ ನಿಮ್ಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಚಿತ್ರರಂಗದ ಎಲ್ಲರೂ ನಿಮ್ಮಗೆ ಟ್ಯೂಷನ್ ಫೀ ಪಾವತಸಿಬೇಕು ಎಂದು ಕಾಂತಾರ ಚಿತ್ರವನ್ನ ವೀಕ್ಷಿಸಿದ ನಂತರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರವನ್ನ ಹಾಡಿ ಹೊಗಳಿದ್ದಾರೆ.