ಫೆಬ್ರವರಿ 28ರಂದು ಮತದಾನ ನಡೆದ ಮಣಿಪುರದ 12 ಕೇಂದ್ರಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಮತದಾನ ನಡೆಯುವ ವೇಳೆ ಕಿಡಿಗೇಡಿಗಳು ಮತಯಂತ್ರಕ್ಕೆ ಹಾನಿಪಡಿಸಿರುವ ಕಾರಣ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
ಮಾರ್ಚ್ 5ರಂದು ಮರುಮತದಾನ ಕಾರ್ಯ ನಡೆಯಲಿದೆ. ಇಂಪಾಲ್ ಪೂರ್ವ, ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರ ಜಿಲ್ಲೆಯ 12 ಕೇಂದ್ರಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ.

ಈ ಕುರಿತು ಮಾತನಾಡಿರುವ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರವಾಲ್, ಮತದಾರರು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು ಮತ್ತು ಅನಾನೂಕಲತೆಗಾಗಿ ವಿಷಾಧಿಸುತ್ತೇವೆ ಎಂದು ಹೇಳಿದ್ದಾರೆ.
ಫೆಬ್ರವರಿ 28ರಂದು ನಡೆ ಮತದಾನದಲ್ಲಿ 88.63% ಮತದಾನ ನಡೆದಿತ್ತು. ಒಟ್ಟು 12,09,439 ಲಕ್ಷ ಜನ ತಮ್ಮ ಹಕ್ಕನ್ನು ಚಲಾಯಿಸಿದ್ದರು.






