ಯುದ್ದಪೀಡಿತ ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರೆಸಿದ್ದು ರಷ್ಯಾದ ದಾಳಿಗೆ ತಕ್ಕ ಪ್ರತ್ಯುತರವನ್ನು ಉಕ್ರೇನ್ ನೀಡಿದೆ ಎಂದು ಉಕ್ರೇನ್ ಅಧ್ಯಕ್ಷ ವೋಲ್ದಿಮಿರ್ ಝೆಲ್ಯಂಸ್ಕಿ ( Volodymyr Zelenskyy) ಹೇಳಿದ್ದಾರೆ. ಮಧ್ಯರಾತ್ರಿಯಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದ್ದು ನಮ್ಮ ಸ್ವಂತ ಸ್ವಾತಂತ್ರ್ಯವನ್ನು ಹೊರತುಪಡಿಸಿದರೆ ಬೇರೇನ್ನು ಕಳೆದುಕೊಳ್ಳುವುದಕ್ಕೆ ಉಳಿದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಮಿತ್ರ ರಾಷ್ಟ್ರಗಳಿಂದ ನಮ್ಮಗೆ ಪ್ರತಿನಿತ್ಯ ಶಸ್ತ್ರಾಸ್ತ್ರಗಳ ಸರಬರಾಜು ಆಗುತ್ತಿದೆ. ಉಕ್ರೇನ್ನಲ್ಲಿ ಇದುವರೆಗೂ ಒಂದು ಕೋವಿಡ್ ಪ್ರಕರಣ ದಾಖಲಾಗಿಲ್ಲ. ಅದರೆ, ಕಳೆದ ಒಂದು ವಾರದಿಂದ ನಮ್ಮಗೆ ವೈರಸ್ ಒಂದು ನಿರಂತರವಾಗಿ ಕಾಡುತ್ತಿದೆ ಎಂದು ರಷ್ಯಾದ ನಡೆ ವಿರುದ್ದ ಕಿಡಿಕಾರಿದ್ದಾರೆ.

ರಷ್ಯಾವು ಭೂ ಮಾರ್ಗವಾಗಿ ಉಕ್ರೇನ್ ಮೇಲೆ ದಾಳಿ ಮಾಡಲು ಸಾಧ್ಯವಾಗವುದೆ ಇಲ್ಲ ಎಂಬ ಅಂಶವನ್ನು ಅರಿತ ರಷ್ಯಾ ಶೆಲ್ ಹಾಗೂ ಕ್ಷಿಪಣಿ ದಾಳಿ ಮಾಡುತ್ತಿದೆ ರಷ್ಯಾದ ಯೋಜನೆಗಳನ್ನು ಉಕ್ರೇನ್ ಹಿಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು Zelenskyy ಹೇಳಿದ್ದಾರೆ.